ಹಾವೇರಿ :
ಭಾರತ ಲಾಕ್ ಡೌನ್ ನಂತರ ಬಂದ್ ಆಗಿರುವ ಎಂಎಸ್ಐಎಲ್ ಮದ್ಯದ ಅಂಗಡಿಗಳು ನಾಳೆಯಿಂದ ಓಪನ್ ಆಗುತ್ತಾವಾ.? ಅಂಥದ್ದೊಂದು ಅನುಮಾನ ಕಾಡ್ತಿದೆ. ಯಾಕೆಂದರೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಜಿಲ್ಲೆಯ ಕೆಲವೆಡೆ ಎಂಎಸ್ಐಎಲ್ ಮದ್ಯದ ಅಂಗಡಿಗಳ ಮುಂದೆ ಅಂಗಡಿ ಓಪನ್ ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಲಾಕ್ ಡೌನ್ ನಂತರ ಬಂದ್ ಆಗಿ ನಾಳೆ ಬಾಗಿಲು ತೆರೆದರೆ ಹೆಚ್ಚಿನ ಜನರು ಮುಗಿಬಿಳುತ್ತಾರೆ ಅಂತಾ ಅಂಗಡಿಗಳ ಮುಂದೆ ಜನದಟ್ಟನೆ ನಿಯಂತ್ರಣಕ್ಕೆ ಕಟ್ಟಿಗೆ ಕಟ್ಟಲಾಗಿದೆ. ಮದ್ಯಪ್ರಿಯರು ಸಾಲಾಗಿ ನಿಂತು ಮದ್ಯ ಖರೀದಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗಿದೆ
. ಇದರ ಜೊತೆಗೆ ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಅಂಗಡಿಗಳ ಮುಂದೆ ಸಾಮಾಜಿಕ ಅಂತರದ ಬಾಕ್ಸ್ ಗಳನ್ನು ಹಾಕಲಾಗಿದೆ. ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ಸರಕಾರದಿಂದ ಈವರೆಗೂ ಸ್ಪಷ್ಟ ನಿರ್ದೇಶನ ಬಂದಿಲ್ಲವಾದರೂ ಎಂಎಸ್ಐಎಲ್ ಮದ್ಯದ ಅಂಗಡಿಗಳ ಮುಂದೆ ಅಂಗಡಿ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಟ್ಟೀಹಳ್ಳಿ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಎಂಎಸ್ಐಎಲ್ ಮದ್ಯದ ಅಂಗಡಿಗಳ ಮುಂದೆ ಓಪನ್ ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.