ರೈತರ ಪರಿಹಾರದಲ್ಲಿ ತಾರತಮ್ಯ ಸಹಿಸುವುದಿಲ್ಲ : ತಿಪ್ಪಾರೆಡ್ಡಿ

ಚಿತ್ರದುರ್ಗ;

    ಸರ್ಕಾರದ ವಿವಿಧ ಯೋಜನೆಗಳಲ್ಲಿ ರೈತರಿಗೆ ದೊರೆಯಬೇಕಾದ ಸೌಲಬ್ಯ ಹಾಗೂ ಪರಿಹಾರ ವಿಚಾರದಲ್ಲಿ ಯಾವ ಕಾರಣಕ್ಕೂ ಲೋಪವಾಗಲಿ, ತಾರತಮ್ಯವಾಗಿ ಕಂಡು ಬಂದರೆ ಸಹಿಸಲಾಗುವುದಿಲ್ಲ. ಏನಾದರೂ ಲೋಪಗಳಿದ್ದರೆ ತಕ್ಷಣವೇ ಸರಿಪಡಿಸಿಕೊಂಡು ರೈತರಿಗೆ ನ್ಯಾಯ ದೊರೆಕಿಸಿಕೊಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಾಕೀತು ಮಾಡಿದ್ದಾರೆ

    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಂದಾಯ, ಕೃಷಿ. ತೋಟಗಾರಿಕೆ, ರೇಷ್ಮೇ, ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಎಚ್ಚರಿಕೆ ನೀಡಿದರು ಚಿತ್ರದುರ್ಗ ತಾಲೂಕಿನಲ್ಲಿ ಕೆಲವಡೆ ಮಳೆಯ ಪ್ರಮಾಣ ಕಡಿಮೆಯಾಗಿದೆ ಮತ್ತೇ ಕೆಲವಡೆ ಜಾಸ್ತಿಯಾಗಿದೆ ಆದರೆ ಫಸಲ್ ಭೀಮಾ ಯೋಜನೆಯಡಿ ಪರಿಹಾರವನ್ನು ನೀಡುವಾಗ ಮಾತ್ರ ತಾರತಮ್ಯವಾಗಿದೆ ಒಂದು ಹೊಲಕ್ಕೆ ಎಕರೆಗೆ 8500 ಬಂದರೆ ಅದೇ ಪಕ್ಕದ ಹೊಲಕ್ಕೆ 1500 ರೂ.ಗಳನ್ನು ಮಾತ್ರವೇ ನೀಡಲಾಗಿದೆ ಇದು ತಪ್ಪಾಗಿದೆ ಇದನ್ನು ಸರಿಪಡಿಸಿ ಇಲ್ಲದಿದ್ದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ಭಾರತಿಯವರಿಗೆ ಸೂಚನೆ ನೀಡಿದರು.

     ಇತ್ತೀಚಿನ ದಿನದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಫಸಲ್ ಭೀಮಾ ಯೋಜನೆ ಉತ್ತಮವಾಗಿದೆ ಎಂದು ರೈತರೇ ಹೇಳುತ್ತಿದ್ದಾರೆ ಮಳೆ ಬಂದು ಬೆಳೆ ಬಂದಿದ್ದರು ಸಹಾ ಇಷ್ಟು ಹಣ ನಮಗೆ ಸಿಗುತ್ತಿರಲ್ಲಿಲ, ಇದರಲ್ಲಿ ಇಲಾಖೆಯ ಅಧಿಕಾರಿಗಳ ಪಾತ್ರದ ಜೊತೆಗೆ ರೈತ ಸಂಘಗಳ ಪಾತ್ರ ಅಧಿಕವಾಗಿದೆ ಕಳೆದ ಎರಡು ವರ್ಷದಿಂದ ಈ ಯೋಜನೆಯ ಬಗ್ಗೆ ಟೀಕೆಗಳು ಕೇಳಿಬಂದಿದ್ದವು ಆದರೆ ಈ ಬಾರಿ ಮಾತ್ರ ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ ಎಂದು ಶಾಸಕರು ಹೇಳಿದರು.

    ಪಶು ಇಲಾಖೆಯಲ್ಲಿ ನೀಡಿದ ಯೋಜನೆಯಿಂದ ಜನತೆ ಅಲೆದಾಡುತ್ತಿದ್ದಾರೆ ಚಿತ್ರದುರ್ಗ ತಾಲೂಕಿಗೆ ಹಸುವನ್ನು ನೀಡುವ ಯೋಜನೆ ಜಾರಿಯಾಗಿದ್ದು, ಎಸ್.ಸಿ.ಎಸ್.ಟಿ.ಜನಾಂಗದ ಮಹಿಳೆಗೆ ಅರ್ಜಿಯನ್ನು ಕರೆಯಲಾಗಿದೆ ಇರುವ ಒಂದು ಹಸುವಿಗೆ 850 ಅರ್ಜಿಗಳು ಬಂದಿದೆ, ಇಂತಹ ಯೋಜನೆಯನ್ನು ಮಾಡುವುದಕ್ಕಿಂತ ಸುಮ್ಮನೆ ಇರುವುದು ಮೇಲು ಇದರ ಬಗ್ಗೆ ಇಂದಿನ ಸಭೆಯಲ್ಲಿ ನೀಡುವುದಾದರೆ ಜಾಸ್ತಿ ಪ್ರಮಾಣದಲ್ಲಿ ನೀಡುವಂತೆ ನಿಮ್ಮ ಮೇಲಿನ ಅಧಿಕಾರಿಗಳಿಗೆ ಪತ್ರವನ್ನು ಬರೆಯುವಂತೆ ಪಶು ಇಲಾಖೆಯ ಅಧಿಕಾರಿ ಪ್ರಸನ್ನರವರಿಗೆ ತಿಪ್ಪಾರೆಡ್ಡಿ ನಿರ್ದೆಶಿಸಿದರು.

    ಫಲಾನುಭವಿಗಳಿಗೆ ಹಸುಗಳನ್ನು ನೀಡುವಾಗ ಉತ್ತಮಾದ ಹಸುಗಳನ್ನು ನೀಡಬೇಕು ಯಾವುದೇ ಕಾರಣಕ್ಕೂ ಹಾಲನ್ನು ಕರೆಯದ ಬಡಕಲಾದ ಹಸುವನ್ನು ನೀಡಬಾರದೆಂದು ತಿಳಿಸಿದಾಗ ಅಧಿಕಾರಿ ಪ್ರಸನ್ನ ಈ ಬಾರಿ ಯಾವುದೇ ಮಧ್ಯವರ್ತಿ ಇಲ್ಲದೆ ಹಸುವನ್ನು ಫಲಾನುಭವಿಗಳೇ ಖರೀದಿ ಮಾಡಿ ನಮ್ಮಗೆ ತೋರಿಸಿದಾಗ ಅದರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗಲಿದೆ ಎಂದು ಶಾಸಕರ ಗಮನಕ್ಕೆ ತಂದರು.

     ಸರ್ಕಾರದಿಂದ ವಿವಿಧ ಯೋಜನೆಯಡಿ ಮನೆಗಳು ಬಂದಿದೆ ಆವುಗಳನ್ನು ನಿರ್ಮಾಣ ಮಾಡಲು ಸರಿಯಾದ ರೀತಿಯಲ್ಲಿ ಜಾಗವನ್ನು ಹುಡುಕಿ, ಇಂಗಳದಾಳ್. ರಾ,ಹೆ.4ರ ಸಿಭಾರದ ಬಳಿ ಮತ್ತು ಜಿ.ಅರ್ ಹಳ್ಳಿಯ ಬಳಿ ಸರ್ಕಾರದ ಜಾಗ ಇದೆ ಅದರೆ ಬಗ್ಗೆ ಸರ್ವೆ ಮಾಡಿ ಮಾಹಿತಿಯನ್ನು ನೀಡಿ ಈ ವರ್ಷದಲ್ಲಿ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮನೆಗಳನ್ನು ನೀಡಬೇಕಿದೆ ಅದಕ್ಕೆ ಕಂದಾಯ ಇಲಾಖೆ ಸಹಕಾರ ನೀಡಬೇಕಿದೆ ಎಲ್ಲಿ ಜಾಗ ಇದೆ ಎಂಬುದನ್ನು ಪತ್ತೇ ಮಾಡುವಂತೆ ತಹಶೀಲ್ದಾರ್‍ರವರಿಗೆ ಸೂಚಿಸಿದರು.

    ಸಭೆಯಲ್ಲಿ ತಹಶೀಲ್ದಾರ್ ವೆಂಕಟೇಶ್, ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಕ ಅಧಿಕಾರಿ ಕೃಷ್ಣಾನಾಯ್ಕ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link