“ಮಂಕಡಿಂಗ್” ರನ್ ಔಟ್‍ನಿಂದ ಹೊರಬರುವರೇ ರಾಜಸ್ಥಾನ್ ರಾಯಲ್ಸ್?

ಹೈದರಾಬಾದ್

      ಮಂಕಡಿಂಗ್ ರನೌಟ್ ನಿಂದಾಗಿ 12ನೇ ಆವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಲು ಸಜ್ಜಾಗಿದೆ. ಮೊದಲ ಗೆಲುವಿನ ತುಡಿತದಲ್ಲಿರುವ ಉಭಯ ತಂಡಗಳ ಇಂದಿನ ಕಾದಾಟಕ್ಕೆ ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

        ಜೋಸ್ ಬಟ್ಲರ್(69 ರನ್) ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಅವರು, ಮಂಕಡಿಂಗ್ ರನೌಟ್ ಮಾಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಠಿಸಿತ್ತು. ಮಂಕಡಿಂಗ್ ವಿವಾದಿತ ರನೌಟ್ ನಿಂದಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ವಿರುದ್ಧ 14 ರನ್ಗಳಿಂದ ಸೋಲು ಅನುಭವಿಸಿತ್ತು.

        ಮೊದಲ ಪಂದ್ಯದಲ್ಲಿ ಗಮನ ಸೆಳೆದಿದ್ದ ಬಟ್ಲರ್ ಜತೆ, ಇದೀಗ, ಅಜಿಂಕ್ಯಾ ರಹಾನೆ, ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ ಹಾಗೂ ಬೆನ್ ಸ್ಟೋಕ್ಸ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ. ಚೆಂಡು ವಿರೂಪ ಪ್ರಕರಣದಿಂದಾಗಿ ಕಳೆದ ಆವೃತ್ತಿ ವಂಚಿತರಾಗಿದ್ದ ಆಸ್ಟ್ರೇಲಿಯಾದ ಸ್ಮಿತ್, ಮುಂದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಅವರ ಮೇಲೆ ಸಾಕಷ್ಟು ಗಮನಹರಿಸಲಾಗುತ್ತಿದೆ. ಕಳೆದ ಪಂದ್ಯದಲ್ಲಿ ಧವಳ್ ಕುಲಕರ್ಣಿ, ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ, ಬೆನ್ ಸ್ಟೋಕ್ಸ್, ಜಯದೇವ್ ಉನದ್ಕತ್ ಪಂಜಾಬ್ ಬ್ಯಾಟ್ಸ್‍ಮನ್‍ಗಳ ಎದುರು ದುಬಾರಿಯಾಗಿದ್ದರು. ವೇಗಿ ಜೋಪ್ರ ಅರ್ಚರ್ ನಾಲ್ಕು ಓವರ್‍ಗಳಲ್ಲಿ 17 ರನ್ ನೀಡಿದ್ದರು. ಆದರೆ ವಿಕೆಟ್ ಪಡೆದಿರಲಿಲ್ಲ.

    ಡೇವಿಡ್ ವಾರ್ನರ್ ನಾಯಕತ್ವದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮೊದಲ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ಆದರೆ, ಡೆತ್ ಓವರ್‍ಗಳಲ್ಲಿ ಬೌಲರ್‍ಗಳು ನಿಯಂತ್ರಣ ಸಾಧಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಪಂದ್ಯ ಕೆಕೆಆರ್ ವಿರುದ್ಧ 6 ವಿಕೆಟ್‍ಗಳಿಂದ ಸೋಲು ಅನುಭವಿಸಿತ್ತು.

     ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷದ ಬಳಿಕ ತಂಡದಲ್ಲಿ ಕಾಣಿಸಿಕೊಂಡ ಡೇವಿಡ್ ವಾರ್ನರ್ ಮೊದಲ ಪಂದ್ಯದಲ್ಲೇ ಮಿಂಚಿದ್ದರು. 53 ಎಸೆತಗಳಲ್ಲಿ 85 ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಹಾಗಾಗಿ, ಇಂದಿನ ಪಂದ್ಯದ ಮೇಲೂ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ವಾರ್ನರ್ ಜತೆ, ಕೇನ್ ವಿಲಿಯಮ್ಸನ್, ಜಾನಿ ಬೈರ್ ಸ್ಟೋ, ವಿಜಯ್ ಶಂಕರ್, ಮನೀಶ್ ಪಾಂಡೆ, ಯುಸಫ್ ಫಠಾಣ್ ಹಾಗೂ ಶಕೀಬ್ ಹಲ್ ಹಸನ್ ಅವರ ಮೇಲೂ ಭರವಸೆ ಇಡಲಾಗಿದೆ.

      ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ, ಕೊನೆಯ ಮೂರು ಓವರ್ಗಳಲ್ಲಿ ಆಂಡ್ರೋ ರಸೆಲ್ ಎಲ್ಲ ಬೌಲರ್‍ಗಳಿಗೂ ಮುಲಾಜಿಲ್ಲದೆ ಥಳಿಸಿದ್ದರು. ಕೊನೆಯ ಮೂರು ಓವರ್‍ಗಳಲ್ಲಿ ಕೆಕೆಆರ್ ಗೆಲುವಿಗೆ 53 ರನ್‍ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‍ನಲ್ಲಿದ್ದ ರಸೆಲ್ 19 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ್ದರು. ಜತೆಗೆ, ಶುಭಮನ್ ಗಿಲ್ ಕೊನೆಯ ಓವರ್‍ನಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

      ಇಂದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ರಶೀದ್ ಖಾನ್ ಸೇರಿದಂತೆ ಇನ್ನುಳಿದ ಬೌಲರ್‍ಗಳು ಡೆತ್ ಓವರ್‍ಗಳಲ್ಲಿ ಬ್ಯಾಟ್ಸ್‍ಮನ್‍ಗಳ ಮೇಲೆ ನಿಯಂತ್ರಣ ಸಾಧಿಸುವ ಕಡೆ ಹೆಚ್ಚಿನ ಗಮನಹರಿಸಲಿದ್ದಾರೆ.

ಸನ್‍ರೈಸರ್ಸ್ ಹೈದರಾಬಾದ್

       ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಮಾರ್ಟಿನ್ ಗುಪ್ಟಿಲ್, ರಿಕಿ ಭುಯಿ, ಡೇವಿಡ್ ವಾರ್ನರ್, ದೀಪಕ್ ಹೂಡಾ, ಮೊಹಮ್ಮದ್ ನಬಿ, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಅಭಿಷೇಕ್ ಶರ್ಮಾ, ವಿಜಯ್ ಶಂಕರ್, ಶ್ರೀವತ್ಸ್ ಗೋಸ್ವಾಮಿ, ಜಾನಿ ಬೈರ್ ಸ್ಟೋ, ವೃದ್ಧಿಮಾನ್ ಸಹಾ, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಭುವನೇಶ್ವರ ಕುಮಾರ್, ರಶೀದ್ ಖಾನ್, ಬಸಿಲ್ ಥಾಂಪಿ, ಬಿಲ್ಲಿ ಸ್ಟ್ಯಾನ್ ಲೇಕ್, ಟಿ. ನಟರಾಜನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್.

ರಾಜಸ್ಥಾನ್ ರಾಯಲ್ಸ್

         ಅಜಿಂಕ್ಯ ರಹಾನೆ (ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಜೋಪ್ರ ಆರ್ಚರ್, ಜೋಸ್ ಬಟ್ಲರ್, ಆಷ್ಟನ್ ಟರ್ನರ್, ಇಶ್ ಸೋಧಿ, ಒಶೇನ್ ಥಾಮಸ್, ಲಿಯಾಮ್ ಲಿವಿಂಗ್ ಸ್ಟೋನ್, ಸಂಜು ಸ್ಯಾಮ್ಸನ್, ಶುಭಮ್ ರಂಜನೇ, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಸುಧೇಶ ಮಿಧುನ್, ಜಯದೇವ್ ಉನದ್ಕತ್, ಪ್ರಶಾಂತ್ ಚೋಪ್ರಾ , ಮಣಿಪಾಲ್ ಲೊಮರರ್, ಆರ್ಯಮನ್ ಬಿರ್ಲಾ, ರಿಯಾನ್ ಪರಾಗ್, ಧವಳ್ ಕುಲಕರ್ಣಿ, ಕೃಷ್ಣಪ್ಪ ಗೌತಮ್, ವರುಣ್ ಆ?ಯರೋನ್, ಶಶಾಂಕ್ ಸಿಂಗ್, ಮನನ್ ವೋಹ್ರಾ, ರಾಹುಲ್ ತ್ರಿಪಾಠಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap