ಹೊಸದುರ್ಗ:
ತನ್ನ ಹೆಂಡತಿಯ ಶೀಲವನ್ನ ಶಂಕಿಸಿ ಆಕೆಯನ್ನ ಕೊಲೆ ಮಾಡಿ ಈಗ ಪೋಲೀಸ್ ಅತಿಧಿಯಾಗಿರುವ ಘಟನೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಕೊಲೆಯಾದ ಮಹಿಳೆಯನ್ನು ಕರಿಯಪ್ಪ ಎಂಬುವವರ ಪುತ್ರಿ ಶುಭ(26)ಎಂದು ತಿಳಿದು ಬಂದಿದ್ದು
ಹಿರಿಯೂರು ತಾಲ್ಲೂಕು ದಾಸಣ್ಣನಮಾಳಿಗೆ ಗ್ರಾಮದ ಕರಿಯಪ್ಪ ಎಂಬುವವರು ತನ್ನ ಮಗಳು ಶುಭ ಎಂಬುವವರನ್ನ ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ಗ್ರಾಮದ ಬೇವಿನಹಳ್ಳಿ ಗ್ರಾಮದ ರಾಮಣ್ಣ ಎಂಬುವವರ ಮಗನಾದ ಕರಿಯಪ್ಪ ಎಂಬುವವನಿಗೆ ಕಳೆದ 6 ವರ್ಷದ ಕೆಳಗೆ ಮದುವೆ ಮಾಡಿ ಕೊಟ್ಟಿದ್ದರು.ಇವರಿಗೆ ಮೂರುಮಂದಿ ಮಕ್ಕಳೂ ಕೂಡ ಇದ್ದಾರೆ.ಈತನಿ ಕುಡಿಯುವ ಚಟವಿತ್ತು ಇದರಿಂದ ಕುಡಿದು ಬಂದು ನನ್ನ ಮಗಳ ಮೇಲೆ ದಿನಂಪ್ರತಿ ಗಲಾಟೆ ಮಾಡುತ್ತಿದ್ದ ಎಂದು ಶುಭಳಾ ತಂದೆ ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ಇಬ್ಬರ ನಡೆವೆ ಜಗಳವಾಗಿ ಶುಭಳ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ನಂತರ ಕುತ್ತಿಗೆಗೆ ವೇಲಿಂದ ಕೋಲೆ ಮಾಡಿ ಮನೆಯ ಹೋರಗೆ ಹಾಕಿ ಪರಾರಿಯಾಗಿದ್ದ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಯನ್ನು ಪತ್ತೆಮಾಡಿ ಬಂಧಿಸಿದ್ದಾರೆ.ಸ್ದಳಕ್ಕೆ ಎ.ಎಸ್.ಪಿ ಮಹಾಲಿಂಗನಂದಗಾವಿ,ಪ್ರಭಾರೆ ಡಿ.ಎಸ್.ಪಿ ಸಂತೋಷ್‍ಕುಮಾರ್.ಹೊಸದುರ್ಗ ಸಿಪಿಐ ರುದ್ರಪ್ಪ.ಪಿ.ಎಸ್.ಐ ಶಿವನಂಜಶೆಟ್ಟಿ ಬೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








