ಹಾವೇರಿ :
ಮಹಿಳೆಯರು ಸಾಮಾಜಿಕ ಹಾಗೂ ಕೌಟುಂಬಿಕ ರಂಗಗಳನ್ನು ಸರಿ ಸಮಾನವಾಗಿ ಸ್ವೀಕರಸಿ ಎಲ್ಲ ಕೇತ್ರಗಳಲ್ಲಿ ಮುನ್ನುಗಬೇಕಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಾವಿತ್ರವ್ವ ಹಿರೇಮಠ ಹೇಳಿದರು.
ಜಿಲ್ಲೆಯ ಹಿರೇಮುಗದೂರ ಗ್ರಾಮದ ಗ್ರಾಪಂ ಕಛೇರಿಯಲ್ಲಿ ಗ್ರಾಪಂ,ಮಹಿಳಾ ಸಂಘಗಳು ಹಾಗೂ ಅಂಗನವಾಡಿ ಕೇಂದ್ರಗಳ ಸಹಯೋಗದಿಂದ ಆಯೋಜಿಸಿದ ಅಂತರಾಷ್ಟೀಯ ಮಹಿಳಾ ದಿನಾಚಾರಣೆ ಹಾಗೂ ಪೋಷಣಾ ಪಕ್ವಾಡ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಹಳ್ಳಿಗಳಲ್ಲಿ ಕೇವಲ ಅಡುಗೆ ಮಾಡುವ ಕಾಲವಿತ್ತು. ವಿಜ್ಞಾನ,ತಂತ್ರಜ್ಞಾನ ಬೆಳವಣೆಗೆ ಆಧುನಿಕತೆಯ ದಿನಗಳಲ್ಲಿ ಆರ್ಥಿಕವಾಗಿ ಸಬಲೆಯಾಗಿ ತಾನೂ ಎಲ್ಲ ಕೆಲಸಗಳನ್ನು ಮಾಡಬಲ್ಲೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ .ಸಮಾಜದಲ್ಲಿ ಮಹಿಳೆ ಸಾಧನೆಗೆ ಪುರುಷರು ಸಹಕಾರ ನೀಡಲಿ ಎಂದು ಹೇಳಿದರು.
ಪಿಡಿಓ ಯೋಗೇಶ ಚಾಕರಿ ಮಾತನಾಡಿ ಪ್ರತಿ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಲಾರಂಭಿಸಿದ್ದಾರೆ. ತಮ್ಮ ಆರ್ಥಿಕತೆ ಬಲಪಡಿಸಿಕೊಂಡು ಕುಟುಂಬ ನಿರ್ವಹಣೆಯ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಪ್ರವೇಶ ಮಾಡಿರುವುದು ಸಮಾನತೆ ಹಕ್ಕುಗಳಿಗೆ ಪ್ರೇರಣೆ ನೀಡುವಂತಾಗಿದೆ.ಸ್ಥಳೀಯ ರಾಜಕೀಯ ಆಡಳಿತದಲ್ಲಿ 50% ಅವಕಾಶ ನೀಡಲಾಗಿದೆ.ಸರ್ಕಾರಿ ಖಾಸಗಿ ರಂಗಗಳಲ್ಲಿ ಉದ್ಯೋಗ ಮಾಡುವ ಮೂಲಕ ತಾವು ಎಲ್ಲರಂತೆ ಸಾಧನೆ ಮಾಡುತ್ತೇವೆ ಎಂದು ತೊರಿಸಿದ್ದಾರೆ. ಪುರುಷರಂತೆ ಮಹಿಳೆಯರು ಸಮಾಜದಲ್ಲಿ ಸಾಧನೆ ಮಾಡಲಿ ಎಂದು ಶುಭ ಕೋರಿ ಮಾತನಾಡಿದರು.
ಕಳಸೂರ ವಲಯ ಅಂಗನವಾಡಿಗಳ ಮೇಲ್ವಿಚಾರಕರಾದ ಶ್ರೀಮತಿ ಅನ್ನಪೂರ್ಣ ಕಟ್ಟೆಪ್ಪನವರ ಮಾತನಾಡಿ ಮಹಿಳೆಯರು ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕತೆಗೆ ಪೋಷಣಾ ಪಕ್ವಾಡ್ ಅಂಶಗಳನ್ನು ಅಳವಡಿಸಿಕೊಳ್ಳಬೇಕು.ಮಹಿಳೆಯರು ಉತ್ತಮ ಆಹಾರವನ್ನು ತಾವು ಹಾಗೂ ಮಕ್ಕಳಿಗೂ ಸೇವನೆ ಮಾಡಬೇಕಾಗುತ್ತದೆ. ಮಹಿಳೆ ವಿದ್ಯಾವಂತೆಯಾದರೆ ಮನೆ ಶಾಲೆಯಾದಂತೆ ಎಂದು ಹೇಳಿದರು.
ಶಿಕ್ಷಕಿ ನೀಲವ್ವ ಎಸ್ ಹರಿಮುರಿ ಮಾತನಾಡಿ ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಸಂಜೀವಿನಿ.ಮಹಿಳೆಯರು ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು.ಸರ್ಕಾರಗಳು ಮಕ್ಕಳ ಶಿಕ್ಷಣಕ್ಕೆ ಅನೇಕ ಸೌಲಭ್ಯ ನೀಡುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಬಸಪ್ಪ ಕಡ್ಲೆಪ್ಪನವರ.ಶ್ರೀಮತಿ ನೀಲವ್ವ ಜಾಡರ.ಶ್ರೀಮತಿ ರತ್ನವ್ವ ಕೆಂಬಾವಿಮಠ.ವೀರಣ್ಣ ಸಿ.ಅಂಗನವಾಡಿಯ ಶ್ರೀಮತಿ ವನಿಜಾ ಪಾಟೀಲ.ಶ್ರೀಮತಿ ಲಕ್ಷ್ಮೀ ಎಂ ನಡುವಿನಮನಿ. ಆಶಾ ಕಾರ್ಯಕರ್ತರಾದ ರೇಣುಕಾ ಪವಾರ.ರೂಪಾ ಎಂ. ಶಾಂತಾ ಕೆ.ಅಂಗನವಾಡಿ, ಆಶಾ ಕಾರ್ಯಕರ್ತೆರು,ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು, ಮಹಿಳೆಯರು ,ಗ್ರಾಪಂ ಕಾರ್ಯವೃಂದದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
