ಬೆಂಗಳೂರು
ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇನ್ನೂ ನೋಂದಣಿಯಾಗದ ಹೊಸ ಸ್ಕೂಟರ್ನಲ್ಲಿ ಹೋಗುತ್ತಿದ್ದ ಪತ್ನಿ ಮೃತಪಟ್ಟರೆ, ಪತಿ ಗಾಯಗೊಂಡಿರುವ ದುರ್ಘಟನೆ ಆರ್ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದಿಣ್ಣೂರು ರಸ್ತೆ ಬಂಜಾರ ಅಕಾಡೆಮಿ ಬಳಿ ಭಾನುವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ದೇವರಜೀವನಹಳ್ಳಿಯ ನೂರಿರ್ ಮುಜಾಹಿದ್ದೀನ್ (31)ಎಂದು ಗುರುತಿಸಲಾಗಿದೆ.ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಪತಿ ಮುಜಾಹಿದ್ದೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ .ಮುಜಾಹಿದ್ದೀನ್ 4-5 ದಿನಗಳ ಹಿಂದಷ್ಟೇ ಹೊಸ ಆಕ್ಸಿಸ್ ಸ್ಕೂಟರ್ನ್ನು ಖರೀದಿಸಿದ್ದು, ಅದರಲ್ಲಿ ಪತ್ನಿ ನೂರಿಯನ್ನು ಹಿಂದೆ ಕೂರಿಸಿಕೊಂಡು ರಾತ್ರಿ 10.30ರ ವೇಳೆ ದಿಣ್ಣೂರು ರಸ್ತೆಯ ಬಂಜಾರ ಅಕಾಡೆಮಿ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ನೂರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮುಜಾಹಿದ್ದೀನ್ ಬಲಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿರುವ ಆರ್ಟಿ ನಗರ ಸಂಚಾರ ಪೊಲೀಸರು ಅಪಘಾತವೆಸಗಿ ಪರಾರಿಯಾಗಿರುವ ವಾಹನಕ್ಕಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸಾ.ರಾ ಫಾತೀಮಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








