ರಾಣಿಬೆನ್ನೂರು:
ಅಖಿಲ ಭಾರತ ಕಾಂಗ್ರೆಸ್ ಪಕ್ಷವು ರಾಣೇಬೆನ್ನೂರಿನ ಬಿ.ಎ.ಜೆ.ಎಸ್.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ‘ಮಹಿಳಾ ಶಕ್ತಿ ದೇಶ ಶಕ್ತಿ` ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರಿಗಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಶ್ರೀ ರವೀಂದ್ರದಾಸ್ ಪ್ರಧಾನ ಕಾರ್ಯದರ್ಶಿಗಳು ಎ.ಐ.ಸಿ.ಸಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಾಗೂ ಸ್ವಾತಿ ಮಾಳಗಿ ಪ್ರಧಾನ ಕಾರ್ಯದರ್ಶಿಗಳು ಕೆ.ಪಿ.ವೌ.ಸಿ.ಸಿ. ಇವರು ಹಿಂದಿನ ಮಹಿಳೆಯರ ಸಭಲೀಕರಣ ಸ್ತ್ರೀ ಶಕ್ತಿ ಬಗ್ಗೆ ಪರಿಚಿಸುವುದರ ಮೂಲಕ ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ತಿಳಿಸಿಕೊಟ್ಟರು ಅದರಂತೆ ಶ್ರೀಮತಿ ಸುಮಿತಾ ಬೆಂಗಳೂರು ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ಮಹಿಳೆಯ ಸಭಲೀಕರಣದ ಬಗ್ಗೆ ಕೆಲವೊಂದು ಪ್ರಮುಖ ಅಂಶಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು.
ಹಾಗೂ ಮಿಸ್.ಭವ್ಯ ಪ್ರಧಾನ ಕಾರ್ಯದರ್ಶಿಗಳು ಕೆ.ಪಿ.ವೌ.ಸಿ.ಸಿ. ಮಹಿಳೆಯ ಶಕ್ತಿ ಸಾಮಥ್ರ್ಯ ಭೌಧ್ದಿಕ ಮಟ್ಟದ ಕುರಿತು ತಿಳಿಸಿದರು.ಡಾ.ಜ್ಯೋತಿ ಕಾರ್ಯದರ್ಶಿಗಳು ಬೆಂಗಳೂರು ಜಿಲ್ಲೆ ಇವರು ಕೂಡ ಹಳ್ಳಿಯ ಮುಗ್ದ ಮಹಿಳೆಯರು ತುಂಬಾ ಕಷ್ಟಗಳನ್ನು ಅನುಬವಿಸಿರುತ್ತಾರೆ. ಏಕೆಂದರೆ ಅವರಿಗೆ ಕಾನೂನಿನ ಅರಿವು ಇರುವುದಿಲ್ಲ. ಇಂದಿನ ವಿದ್ಯಾರ್ಥಿನಿಯರು ಸುಮಾರು ಮಾಹಿತಿಗಳು ಕ್ಷಣ ಮಾತ್ರದಲ್ಲೆ ಸಿಗುತ್ತವೆ ಹಾಗಾಗಿ ತಾವು ಜಾಗೃತಿ ವಹಿಸಬೇಕು.
ಮಾನ್ಯ ಶ್ರೀ ರುದ್ರಪ್ಪ ಎಮ್. ಲಮಾಣಿ ಛೇರ್ಮನ್ನರು ಬಿ.ಎ.ಜೆ.ಎಸ್.ಎಸ್. ಮಹಿಳಾ ಮಹಾವಿದ್ಯಾಲಯ ಹಾಗೂ ಮಾಜಿ ಜವಳಿ ಮತ್ತು ಮುಜುರಾಯಿ ಇಲಾಖೆ ಖಾತೆ ಸಚಿವರು ಕರ್ನಾಟಕ ಸರ್ಕಾರ ಇವರು ಕೂಡ ವಿಭಿನ್ನ ವಿಚಾರಗಳ ಮುಖಾಂತರ ಮಹಿಳೆಯರಿಗೆ ಪುರಷರಷ್ಟೆ ಸಮಾನವಾಗಿ ಶಿಕ್ಷಣವನ್ನು ನೀಡಲು ಎಲ್ಲಾ ಕ್ಷೇತ್ರದಲ್ಲೂ ಸಮಾನತೆಯನ್ನು ದೊರಕಿಸಿ ಕೊಡುವಲ್ಲಿ ನಮ್ಮ ಸರ್ಕಾರ ಯಾವಾಗಲೂ ಸದಾ ಸಿದ್ದವಾಗಿರುತ್ತದೆ ಎಂದು ಹೇಳಿದರು ಹಾಗೂ ಡಾ. ಆರ್. ಎಮ್. ಕುಬೇರಪ್ಪ ಆಡಳಿತಾಧಿಕಾರಿಗಳು ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆ, ಹಾಗೂ ಕ್ರಾಂಗ್ರೆಸ್ ಪಕ್ಷದ ದುರಿಣರು ಮಾತನಾಡುತ್ತಾ ಮಹಿಳೆಯರು ಇವತ್ತಿನ ದಿನಮಾನಗಳಲ್ಲಿ ತುಂಬಾ ಜಾಗೃತೆಯಿಂದ ವರ್ತಿಸಬೇಕೆಂದು,
ತಮ್ಮ ಹಕ್ಕುಗಳಿಗಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮತ್ತು ತಾವು ಪಡೆದ ಶಿಕ್ಷಣವನ್ನು ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದರ ಮೂಲಕ ದೇಶವನ್ನು ಸಶಕ್ತಗೊಳಿಸಬೇಕೆಂದು ಕರೆಕೊಟ್ಟರು.ಕಾರ್ಯಕ್ರಮದಲ್ಲಿ ಶ್ರೀ ನೀಲಕಂಠಪ್ಪ ಕುಸುಗೂರು, ಮಾಜಿ ಅಧ್ಯಕ್ಷರು , ತಾಲ್ಲೂಕು ಪಂಚಾಯಿತಿ ರಾಣೇಬೆನ್ನೂರು , ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮಹಿಳಾ ಸದಸ್ಯರು ಹಾಗೂ ಶ್ರೀ ಎಸ್.ಹೆಚ್. ಹುಚ್ಚಗೊಂಡರ ದೈಹಿಕ ಶಿಕ್ಷಕರು, ಶ್ರೀಮತಿ ಮಲ್ಲಮ್ಮ ವೌ. ಕೋರಿ , ಶ್ರೀ ಮಹೇಶ ಕಂಬಳಿ ದೈ.ಶಿ, ಶ್ರೀಮತಿ ಲತಾ ಧೂಳೆಹೊಳಿ, ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ