ದಾವಣಗೆರೆ
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ, ವಿಕಲಚೇತನರ ಸಂಯುಕ್ತ ಪ್ರಾದೇಶಿಕ ಪುನರ್ವಸತಿ ಕೇಂದ್ರ ಹಾಗೂ ಸಂಕಲ್ಪ ಸಂಸ್ಥೆ, ದಾವಣಗೆರೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಆಟಿಸಂ ಅಂಗವಿಕಲತೆಯುಳ್ಳ ಸುಮಾರು 40 ಜನ ಪೋಷಕರಿಗೆ ಇಂದು ಸ್ತ್ರೀಶಕ್ತಿ ಭವನ, ಎಂ.ಸಿ.ಸಿ. ಬಿ ಬ್ಲಾಕ್, ಇಲ್ಲಿ ಆಟಿಸಂ ರೋಗ ಲಕ್ಷಣಗಳ ಬಗ್ಗೆ ತರಬೇತಿ ನೀಡಲಾಯಿತು.
ಆಟಿಸಂ ಮಕ್ಕಳ ಗುರುತಿಸುವಿಕೆ, ಮಕ್ಕಳ ಸಮಸ್ಯೆಗಳು ಹಾಗೂ ಪೋಷಕರು ಮನೆಯಲ್ಲಿ ಕೈಗೊಳ್ಳಬಹುದಾದ ಪುನರ್ವಸತಿ ಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸುಮನ್ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಶಿವಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಜಿ.ಎಸ್. ಶಶಿಧರ್, ಸಿ.ಆರ್.ಸಿ. ಕೇಂದ್ರದ ನಿರ್ದೇಶಕರಾದ ಜ್ಞಾನವೇಲು, ಹಾಗೂ ಸಂಕಲ್ಪ ಸಂಸ್ಥೆಯ ಅಧ್ಯಕ್ಷರು ಜೆ. ಸುರೇಶ್ ಹಾಜರಿದ್ದರು.