ದಿ.ಎಂ.ಪಿ.ರವೀಂದ್ರ ಹುಟ್ಟು ಹಬ್ಬದ ಪ್ರಯುಕ್ತ ವಿಚಾರ ಸಂಕಿರಣ

ಹರಪನಹಳ್ಳಿ,

      ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ ವತಿಯಿಂದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದ ಪೂರ್ವದಲ್ಲಿ ಇಲ್ಲಿಯ ಪ್ರವಾಸಿ ಮಂದಿರವೃತ್ತದಿಂದ ಎಡಿಬಿ ಕಾಲೇಜು ವರೆಗೆ ವಿವಿಧ ಜಾನಪದ ಕಲಾತಂಡಗಳ ಜೊತೆ .ಎಂ.ಪಿ.ರವೀಂದ್ರ ರವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.

     ನಂದಿಕೋಲು, ಡ್ರಮ್ ಸೆಟ, ಡೊಳ್ಳು ಕುಣಿತ, ಹಗಲು ವೇಷಗಾರರು, ಬೊಂಬೆಗಳ ಹೆಜ್ಜೆಗಳೊಂದಿಗೆ ತೆರೆದ ವಾಹನದಲ್ಲಿ ಎಂ.ಪಿ.ರವೀಂದ್ರ ಅವರ ಅಲಂಕರಿಸಿದ ಭಾವಚಿತ್ರದ ಮೆರವಣಿಗೆ ಸಾಗಿತು.ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ ಅಧ್ಯಕ್ಷೆ ಎಂ.ಪಿ.ವೀಣಾ ಮಹಂತೇಶ, ಡಾ.ಮಹಂತೇಶ ಚರಂತಿಮಠ್ , ಯುವ ಕಾಂಗ್ರೆಸ್ ಅಧ್ಯಕ್ಷ ಪಿ. ಶಿವಕುಮಾರನಾಯ್ಕ, ಪುರಸಭಾ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ, ಗಾಯತ್ರಿದೇವಿ, ವಕೀಲ ಟಿ.ಎಚ್ .ಎಂ.ಮಂಜುನಾಥ ಮತ್ತಿತರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link