ವಿಶ್ವ ಏಡ್ಸ್ ದಿನಾಚರಣೆ

ಹೊಳಲ್ಕೆರೆ:

         ಪ್ರತಿ ಹಳ್ಳಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಈ ಭಯಾನಕ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯವಾಗುವುದು. ಪ್ರತಿ ವರ್ಷ ವಿಶ್ವ ಏಡ್ಸ್ ದಿನಾಚರಣೆ ಪ್ರತಿ ದಿನ ನಡೆದಾಗ ಮಾತ್ರ ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ ತಿಳಿಸಿದರು.

          ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಆರೋಗ್ಯ ಇಲಾಖೆ, ಅಭಿಯೋಜನಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

          ಏಡ್ಸ್ ಪೀಡಿತರ ಬಗ್ಗೆ ಜಾಗೃತಿ ಮೂಡಿಸಬೇಕು. ಅವರನ್ನು ಕತ್ತಲೆಯಿಂದ ಬೆಳಕಿಗೆ ತರುವ ಕಾರ್ಯಕ್ರಮವಾಗಬೇಕು. ಸಮಾಜ ಅವರಿಗೆ ಬೆಲೆ ಕೊಡಬೇಕು ಯಾವುದೇ ಕಾರಣಕ್ಕೂ ಅವರನ್ನು ತುಚ್ಚವಾಗಿ ಮತ್ತು ಅಸ್ಯವಾಗಿ ನೋಡಬಾರದು. ಅವರು ನಮ್ಮಂತೆ ಎಂಬ ದೃಷ್ಟಿಯಿಂದ ಸಮಾನತೆ, ಸಭ್ಯತೆಯಿಂದ ನಡೆದುಕೊಳ್ಳಬೇಕು. ಏಡ್ಸ್ ಅಥವಾ ಹೆಚ್.ಐ.ವಿ ಜೀವನದಿಂದ ಮೃತ್ಯು ಬರುತ್ತದೆ ಎಂಬ ಭಯವನ್ನು ಯಾರು ಮೂಡಿಸಬಾರದು.

         ಈ ರೋಗಕ್ಕೆ ತುತ್ತಾದವರಿಗೆ ಸಮರ್ಪಕವಾಗಿ ಆರೋಗ್ಯ ತಪಾಸಣೆ ಮಾಡಿ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಅವರು ಸಹ ಬಹಳ ವರ್ಷಗಳ ಕಾಲ ಬದುಕಲು ಅವಕಾಶ ಮಾಡಿದಂತಾಗುತ್ತದೆ ಎಂದು ನ್ಯಾಯಾಧೀಶರು ಸಲಹೆ ನೀಡಿದರು. ಹೆಚ್.ಐ.ಪೀಡಿತ ರೋಗಿಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇವರಿಗೆ ಸರ್ಕಾರ ಆರ್ಥಿಕ ಸಹಾಯವನ್ನು ನೀಡಲು ಧನಶ್ರೀ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು ಅದರಿಂದ 50 ಸಾವಿರ ರೂವರೆಗೆ ಸಹಾಯಧನವನ್ನು ನೀಡುತ್ತಿದೆ. ಕಾನೂನು ಪ್ರಾಧಿಕಾರ ಸಹ ಏಡ್ಸ್ ರೋಗವನ್ನು ನಿಯಂತ್ರಣ ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಅವರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದರು.

        ಏಡ್ಸ್ ರೋಗದ ಬಗ್ಗೆ ತಾಲ್ಲೂಕು ಆರೋಗ್ಯಧಿಕಾರಿ ಡಾ. ಜಯಸಿಂಹ ಉಪನ್ಯಾಸ ನೀಡಿ ಹೆಚ್.ಐ.ವಿ. ಈ ರೋಗ 1981 ರಲ್ಲಿ ಪ್ರಥಮವಾಗಿ ಅಮೇರಿಕ ದೇಶದಲ್ಲಿ ಪತ್ತೆಯಾಯಿತು. ಭಾರತದಲ್ಲಿ 1986ರಲ್ಲಿ ತಮಿಳನಾಡಿನ ವೆಲ್ಲೂರು ಆಸ್ಪತ್ರೆಯಲ್ಲಿ ಪತ್ತೆಯಾಯಿತು. 1987ರಲ್ಲಿ ಮುಂಬೈಯಲ್ಲಿ ಏಡ್ಸ್ ರೋಗ ಎಂಬ ಬಗ್ಗೆ ವೈಧ್ಯರು ಪತ್ತೆ ಮಾಡಿದರು. ಈ ರೋಗ ಶೇ. 83ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ರಕ್ತದಿಂದ ಮತ್ತು ತಂದೆ ತಾಯಿಗಳಿಂದ ಮಗುವಿಗೆ ಹರಡುತ್ತದೆ. ನಮ್ಮ ರಾಜ್ಯದಲ್ಲಿ 3 ಲಕ್ಷ ಜಿಲ್ಲೆಯಲ್ಲಿ 6ಲಕ್ಷ ಹೊಳಲ್ಕೆರೆ ತಾಲ್ಲೂಕಿನಲ್ಲಿ 591 ಏಡ್ಸ್ ಪೀಡಿತರಿದ್ದಾರೆ ಎಂಬ ಬಗ್ಗೆ ಪತ್ತೆಯಾಗಿದೆ. ಇಡೀ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಈ ರೋಗದಿಂದ ಕೊನೆ ಸ್ಥಾನದಲ್ಲಿದೆ. ಈ ರೋಗಕ್ಕೆ ತುತ್ತಾದವರು 18ರಿಂದ 35 ವರ್ಷ ವಯಸ್ಸಿನ ಯುವಕರೇ ಹೆಚ್ಚು. ಈ ರೋಗ ನಿಯಂತ್ರಣಕ್ಕೆ ನಾವು ಸಾಕಷ್ಟು ಪ್ರಯತ್ನ ಮಾಡುವಲ್ಲಿ ಸಫಲರಾಗಿದ್ದೇವೆ ಎಂದು ತಿಳಿಸಿದರು.

         ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ. ಮಾತನಾಡಿಏಡ್ಸ್ ಪೀಡಿತರನ್ನು ಮಾನಸಿಕವಾಗಿ ಅವರನ್ನು ಕೆಟ್ಟ ದೃಷ್ಟಿಯಿಂದ ಯಾರು ನೋಡಬಾರದು ಸಮಾಜದಲ್ಲಿ ಅವರು ಸಹ ನಮ್ಮಂತೆ ಎಂಬ ಭಾವನೆ ಮೂಡಿ ಬರಬೇಕು. ಏಡ್ಸ್ ರೋಗದಿಂದ ದೇಶದಲ್ಲಿ 43 ಸಾವಿರ ಜನ ಸತ್ತಿರುವುದಾಗಿ ವರದಿ ಇದೆ. ಈ ರೋಗವನ್ನು ತಡೆಯುವ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಅಸುರಕ್ಷಿತ ಲೈಂಗಿಕ ಕ್ರಿಯೇಗಳಿಗೆ ಸರ್ಕಾರ ನೀಡುತ್ತಿರುವ ಉಚಿತ ಕಾಂಡೋಮ್‍ಗಳನ್ನು ಬಳಕೆ ಮಾಡಬೇಕು ಈ ಬಗ್ಗೆ ಹಿಂಜರಿಕೆ ಮಾಡಬಾರದು ಇದು ಒಳ್ಳೆಯ ರಕ್ಷಣೆ ನೀಡುತ್ತದೆ. ಮತ್ತು ರೋಗಿಗಳಿಗೆ ಅವರ ಮನಸ್ಸಿನಲ್ಲಿ ಆಶಾ ಕಿರಣವನ್ನು ಮೂಡಿಸುವ ಪ್ರಯತ್ನವನ್ನು ಎಲ್ಲರು ಮಾಡಬೇಕು ಎಂದು ಕರೆ ನೀಡಿದರು.

         ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರದ ರೂಪಶ್ರೀ ಏಡ್ಸ್ ರೋಗಿಗಳಿಗೆ ಆಪ್ತ ಒದಗಿಸುವ ಸಮಾಲೋಚನೆ, ಅಪರ ಸರ್ಕಾರಿ ವಕೀಲ ಡಿ.ಜಯಣ್ಣ ಮಾತನಾಡಿದರು.ವಕೀಲರ ಸಂಘದ ಉಪಾಧ್ಯಕ್ಷ ಆರ್.ಜಗಧೀಶ್ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಚಂದ್ರಶೇಖರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link