ಕೊಟ್ಟೂರು
ಕೊಟ್ಟೂರು ತಾಲೂಕು ಅರಣ್ಯ ಇಲಾಖೆ ಹಾಗೂ ಇಂದು ಶಾಲಾ ಮತ್ತು ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಪರಿಸರ ದಿನಾಚರಣೆ ಮತ್ತು ಜಲಾಮೃತ ವರ್ಷಾಚರಣೆ ಕಾರ್ಯಕ್ರಮವನ್ನು ಬುಧುವಾರ ಇಂದು ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಾನ್ಯ ಗೌರವಾನ್ವಿತ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕ ಇವರು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತಾನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ರಕ್ಷಣೆ ಅದಕ್ಕಾಗಿ ಒಬ್ಬ ವಿದ್ಯಾರ್ಥಿ ಒಂದು ಗಿಡವನ್ನು ನೆಡಬೇಕು ಎಂದು ಎಲ್ಲಾ ವಿದ್ಯಾರ್ಥಿಗಳಿಂದ ಪ್ರಮಾಣ ತೆಗೆದುಕೊಂಡರು.
“ಭೂಮಿ ಒಂದೇ, ಪರಿಸರವು ಒಂದೇ” ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರವಿದೆ. ಇದ್ದ ಒಂದು ಪರಿಸರವನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶ ಮಾಡುತ್ತಾ ಹೋದರೆ ಒಂದು ದಿನ ನಮ್ಮ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬೀಡುತ್ತದೆ ಎಂದು ಎಚ್ಚರಿಸಿ “ಮನೆಗೆರಡು ಮರ, ಇಡೀ ಜಗತ್ತಿಗೆನೇ ವರ” ಎಂದು ಪರಿಸರದ ಮಹತ್ವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಇಂದು ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎನ್. ವೀರಭದ್ರಪ್ಪ ಮಾತನಾಡಿ, ಜೂನ್-5 ಪ್ರತಿವರ್ಷವೂ ಪರಿಸರ ದಿನಾಚರಣೆ ಬಂದೇ ಬರುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸುವ ಮುನ್ನ ನಾವು ನಾಶ ಮಡಿದ ಮರಗಳಿಗೆ ಮೌನಾಚರಣೆ ಸಲ್ಲಿಸಲೇ ಬೇಕಿದೆ.
ವರ್ಷಪೂರ್ತಿ ಗಿಡಗಳನ್ನು ಕಡಿದು ಪರಿಸರ ದಿನದಂದು ನಾಲ್ಕು ಗಿಡಗಳನ್ನು ನೆಡುವುದಲ್ಲ, ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಗರೀಕರಣ, ಪರಿಸರ ಮಾಲಿನ್ಯ ದಿನೇ ದಿನೇ ಅದರೊಂದಿಗೆ ಹೆಚ್ಚುತ್ತಿದೆ. ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ಸಂಗತಿ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯವರು ಶುದ್ಧಗಾಳಿ ಇಲ್ಲದೆ ಉಸಿರುಗಟ್ಟಿ ಸಾಯುತ್ತಾರೆ ಎನ್ನುವುದು ಆಘಾತಕಾರಿ ವಿಷಯ ಎಂದು ತಿಳಿಸಿದರು.
ವೇದಿಕೆಯ ಮೇಲೆ ಕೊಟ್ಟೂರು ತಾಲೂಕು ತಹಶಿಲ್ದಾರರಾದ ಶ್ರೀ ಅನಿಲ್ ಕುಮಾರ್, ಕೂಡ್ಲಿಗಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಶ್ರೀಮತಿ ರೇಣುಕಮ್ಮ, ಕೂಡ್ಲಿಗಿ ಸಹಾಯಕ ಸಂರಕ್ಷಣಾಧಿಕಾರಿಗಳು ಜಿ. ರಂಗನಾಥ, ಬಳ್ಳಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಆರ್. ನಾಗರಾಜಪ್ಪ, ಕೂಡ್ಲಿಗಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು ಎಂ. ನಾಗರಾಜ, ಇಂದು ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎನ್. ವೀರಭದ್ರಪ್ಪ, ಕೊಟ್ಟೂರು ಉಪವಲಯ ಅರಣ್ಯಾಧಿಕಾರಿಗಳು ಹೆಚ್. ಗಾಳೆಪ್ಪ, ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಉಜ್ಜಿನಿ ರುದ್ರಪ್ಪ, ಕೂಡ್ಲಿಗಿ ಉಪವಲಯ ಅರಣ್ಯಾಧಿಕಾರಿಗಳು ಜಯರಾಮ್, ಪ್ರಜ್ವಲ್ ಪೌಂಡೇಷನ್ನಿನ ಮುಖ್ಯಸ್ಥರಾದ ರಾಮಣ್ಣ, ಇಂದು ಕಾಲೇಜಿನ ತೋಟಗಾರಿಕೆ ಶಿಕ್ಷಕರಾದ ವಾಗೀಶಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಹೆಚ್. ಮಹೇಶ್ ಬೇವೂರು ಇವರು ನಿರೂಪಿಸಿದರು, ಸಿ ನಾಗರಾಜ ಸ್ವಾಗತಿಸಿದರು, ಕೆ.ಬಿ. ತಿಪ್ಪೇಸ್ವಾಮಿ ವಂದಿಸಿದರು ಮತ್ತು ಇಂದು ಸಿ.ಬಿ.ಎಸ್.ಇ. ಸ್ಕೂಲ್ನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ