ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ಹಿರಿಯೂರು :

       ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ 1886ನೇ ಮೇ 1 ಮಹತ್ವದ ದಿನ ಅಂದು ಮುಷ್ಕರವನ್ನು ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಮೇಲೆ ಸರ್ಕಾರಗಳು ದೌಜ್ರ್ಯನ್ಯಮಾಡಿ ಮುಷ್ಕರವನ್ನು ಹತ್ತಿಕ್ಕಲು ಮುಂದಾದವು ಅಲ್ಲದೆ ಕಾರ್ಮಿಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಈ ಹೋರಾಟದ ನೆನಪಿಗಾಗಿ ಕಾರ್ಮಿಕ ದಿನವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಅಪರ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಫರ್ಹಾಬೇಗಂ ಸಯೈದ್ ಹೇಳಿದರು.

        ನಗರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ದ್ವಿಚಕ್ರ ವಾಹನ ವರ್ಕ್‍ಶಾಪ್ ಮಾಲೀಕರ ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವಕಾರ್ಮಿಕ ದಿನಾಚರಣೆ”. ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ವಿಶ್ವದ ಕಾರ್ಮಿಕರೇ ಒಂದಾಗಿರಿ ಎಂಬುದು ವಿಶ್ವ ಕಾರ್ಮಿಕರ ದಿನಾಚರಣೆಯ ದ್ಯೇಯ ವಾಕ್ಯವಾಗಿದ್ದು, ಶ್ರಮಜೀವಿ ವರ್ಗಕ್ಕೆ ಸೇರಿರುವ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಅಂಥ ಸೌಲಭ್ಯಗಳ ಅರಿವನ್ನು ನಾವು ಮಾಡಿಸಬೇಕಿದೆ ಎಂದರಲ್ಲದೆ ಪ್ರತಿಯೊಂದು ದೇಶದ ಆರ್ಥಿಕತೆಯು ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕರಾದ ವಿ.ದಿವಾಕರ್ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ವಕೀಲರಾದ ಟಿ.ಜಗದೀಶ್, ದೃವಕುಮಾರ್, ವೈ.ಸೈಯದ್ ನವಾಜ್, ಉಪನ್ಯಾಸ ನೀಡಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಿಚಕ್ರವಾಹನ ವರ್ಕ್‍ಶಾಪ್ ಮಾಲೀಕರ ಹಾಗೂ ಕೆಲಸಗಾರರಸಂಘದ ಅಧ್ಯಕ್ಷರಾದ ಕರುಣಾನಿಧಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಟಿ.ಜಗದೀಶ್, ದೃವಕುಮಾರ್, ನಾಗರಾಜ್, ಕಾರ್ಯದರ್ಶಿ ಜಿಲಾನ್‍ಬಾಷಾ, ಕಾರ್ಮಿಕ ಮುಖಂಡರು ಕಾರ್ಮಿಕ ಬಂಧು ಹುಚ್ಚವ್ವನಹಳ್ಳಿ ತಿಪ್ಪೇಸ್ವಾಮಿ ಹಾಗೂ ಜೋಗೇಶ್ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link