ಹಾವೇರಿ :
ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ.ನಿ ಧಾರವಾಡ ಹಾಗೂ ಸರಕಾರಿ ಜಿಲ್ಲಾ ಆಸ್ಪತ್ರೆ ಹಾವೇರಿ ಸಹಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಬಿಸಿ ಬದಾಮ್ ಹಾಲು ಹಾಗೂ ಬಿಸ್ಕತ್ ವಿತರಿಸುವ ಮೂಲಕ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಯಿತು.
ಪ್ರತಿ ವರ್ಷ ಧಾರವಾಡ ಹಾಲು ಒಕ್ಕೂಟದ ವತಿಯಿಂದ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಹಾಲಿನ ಮಹತ್ವವನ್ನು ಎಲ್ಲರಿಗೂ ತಿಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕ ಸರಕಾರದ ಮಹತ್ವಪೂರ್ಣ ಯೋಜನೆಗಳೊಲ್ಲೊಂದಾದ ಕ್ಷೀರಭಾಗ್ಯ ಯೋಜನೆಯನ್ನು ಸಹ ವಿಶ್ವ ಹಾಲು ದಿನಾಚರಣೆಯೆಂದೇ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
1 ಕೋಟಿಗೂ ಅಧಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲನ್ನು ವಿತರಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಭಾರತ ವಿಶ್ವದಲ್ಲಿಯೇ ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದ್ದರೂ, ಹಾಲು ಹಾಗೂ ಹಾಲಿನ ಉತ್ಪನ್ನಗಳ ತಲಾವಾರು ಬಳಕೆಯಲ್ಲಿ ಅತ್ಯಂತ ಹಿಂದುಳಿದಿದೆ. ಹಾಲು ಅತ್ಯಂತ ಪೌಷ್ಠಿಕಾಂಶವುಳ್ಳದ್ದಾಗಿ, ಅಮೃತಕ್ಕೆ ಸಮಾನುವಾದುದಾಗಿದೆ.ಅತ್ಯಂತ ಜನಪ್ರಿಯ ಯೋಜನೆ ಇದಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಬಸವರಾಜ ಅರಬಗೊಂಡ ಹೇಳಿದರು.
ಈ ಸಂದರ್ಭದಲ್ಲಿ ಡಾ: ಆರ್ ಎಸ್ ಹೆಗಡೆ, ಪ್ರವೀಣ ಪಾಟೀಲ, ಶ್ರೀಮತಿ ಚನ್ನಮ್ಮ ತುರಮರಿ ,ರಾಜೇಂದ್ರ ಹೊಸಮನಿ, ನಿಂಗಪ್ಪ ತಳವಾರ , ಈರಣ್ಣ ಬಳ್ಳೂರ, ಶಿವಕುಮಾರ ಮಾಡ್ಯಾಳ, ಅಶ್ವಥ್ ಹೆಡಿಗ್ಗೊಂಡ,ಮೃತ್ಯುಂಜಯ ಅಗಡಿ, ಪ್ರದೀಪ ಕೆಂಚನಗೌಡ್ರ, ರವಿ ತಂಗಡಗಿ ಹಾಗೂ ಜಿಲ್ಲಾ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ಮತ್ತು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.