ಜನಸಂಖ್ಯೆ ಹೆಚ್ಚಳ ನಿಯಂತ್ರಿಸದಿದ್ದರೆ ದೆಶಕ್ಕೆ ಅಪಾಯ

ಚಿತ್ರದುರ್ಗ,

       ಜನಸಂಖ್ಯೆ ಹೆಚ್ಚಳದಿಂದ ಆಗುವಂತ ಅನಾಹುತಗಳನ್ನು ಜನತೆಗೆ ತಿಳಿಸುವುದರ ಮೂಲಕ ಜನಸಂಖ್ಯಾ ಸ್ಪೋಟವನ್ನು ತಡೆಯುವ ಕಾರ್ಯವನ್ನು ಮಾಡುವುದರ ಮೂಲಕ ದೇಶಕ್ಕೆ ನಿಮ್ಮದೆ ಆದ ಕೊಡುಗೆಯನ್ನು ನೀಡುವಂತೆ ಆಶಾ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂತ್ ಕರೆ ನೀಡಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕು.ಕ. ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ವಾರ್ತಾ ಇಲಾಖೆ, ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಹಯೋಗದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಕುಟುಂಬ ಕಲ್ಯಾಣ ವಿಧಾನಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

      ಜನ ಸಂಖ್ಯಾ ಸ್ಪೋಟವನ್ನು ತಡೆಯುವ ಸಲುವಾಗಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಇದರ ಪೂರ್ಣ ಪ್ರಮಾಣದ ಸದುಪಯೋಗವಾದಾಗ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಆಶಾ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಜನತೆಯ ಮಧ್ಯದಲ್ಲಿರುವವರು ಅವರು ಜನಸಂಖ್ಯೆ ಹೆಚ್ಚಳದಿಂದ ಆಗುವ ಅನಾಹುತಗಳನ್ನು ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ಇದರ ನಿಯಂತ್ರಣ ಸಾಧ್ಯವಿದೆ ಎಂದು ಅನಂತ್ ಅಭಿಪ್ರಾಯಪಟ್ಟರು.

       ಜಗತ್ತಿನಲ್ಲಿ ಹುಟ್ಟುವವರ ಸಂಖ್ಯೆ ಹೆಚ್ಚಾಗಿದೆ ಆದರೆ ಸಾಯುವವರ ಸಂಖ್ಯೆ ಕಡಿಮೆಯಾಗಿದೆ ಸೆಕೆಂಡಿಗೆ 4 ರಿಂದ 5 ಮಕ್ಕಳ ಜನನವಾದರೆ ಸಾಯುವವರ ಪ್ರಮಾಣ 2 ರಿಂದ 3 ಮಾತ್ರ ಆಗಿದೆ, ಭೂಮಿ ಮಾತ್ರ ಇದ್ದಷೇ ಇದೆ ಇದರಲ್ಲಿಯೇ ಎಲ್ಲರು ವಾಸ ಮಾಡಬೇಕಿದೆ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದರೆ ಅವರಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸರ್ಕಾರಗಳು ಸಹಾ ಶ್ರಮಪಡಬೇಕಿದೆ ಎಂದು ತಿಳಿಸಿದರು.

      ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಸಂತತಿ ಕಡಿಮೆಯಾಗುತ್ತಿದೆ ಇದರ ಬಗ್ಗೆಯೂ ಸಹಾ ಆಶಾ ಕಾರ್ಯಕರ್ತತು ಗಮನ ನೀಡಬೇಕಿದೆ, ಗಂಡು ಸಂತಾನದ ಬೆನ್ನತ್ತಿರುವ ಪೋಷಕರು ಹೆಣ್ಣು ಬ್ರೂಣವನ್ನು ಹತ್ಯೆ ಮಾಡುತ್ತಿದ್ದಾರೆ ಇದೇ ರೀತಿ ಆದರೆ ಮುಂದಿನ ದಿನಗಳಲ್ಲಿ ಮಗನಿಗೆ ಹೆಣ್ಣು ಸಿಗುವುದಿಲ್ಲ ಎಂದು ತಿಳಿಸಿ, ಈ ಕಾರ್ಯಕ್ರಮ ಒಂದು ದಿನಮಾತ್ರವೇ ಆಚರಣೆಯಾಗದೇ ಜನತೆಯಲ್ಲಿ ಜನಸಂಖ್ಯೆಯ ಬಗ್ಗೆ ನಿರಂತರವಾಗಿ ಜಾಗೃತಿಯನ್ನು ಮೂಡಿಸಿ ಆಚರಣೆ ಮಾಡಬೇಕಿದೆ ಎಂದು ಆನಂತ್ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲೆ ಕಡಿಮೆ ;

       ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜನಸಂಖ್ಯಾ ಸ್ಫೋಟ ಕಡಿಮೆಯಾಗಿದೆ ಇದಕ್ಕೆ ಆರೋಗ್ಯ ಸಿಬ್ಬಂದಿಯ ಎಲ್ಲರ ಶ್ರಮ ಇದೆ ಸರ್ಕಾರ ನೀಡಿದ ಸೂಚನೆಯ ಮೇರೆಗೆ ಕಾರ್ಯವನ್ನು ಮಾಡಿದರುವ ಅವರು ಇದೇ ರೀತಿ ಮುಂದುವರೆದರೆ ಜಿಲ್ಲೆ ಜನಸಂಖ್ಯೆಯಲ್ಲಿ ಮುಂದಕ್ಕೆ ಹೋಗದೇ ಹಿಂದಿನ ಸ್ಥಾನವನ್ನು ಪಡೆಯುವಂತೆ ಮಾಡಬೇಕಿದೆ, ಬೇರೆ ಕಾರ್ಯಕ್ರಮಗಳಲ್ಲಿ ಜಿಲ್ಲೆ ಪ್ರಗತಿಯನ್ನು ಸಾಧಿಸಿ ಒಂದನೇ ಸ್ಥಾನವನ್ನು ಪಡೆದರೆ ಈ ಕಾರ್ಯಕ್ರಮದಲ್ಲಿ ಮಾತ್ರ ಜಿಲ್ಲೆ ಹಿಂದಿನ ಸ್ಥಾನವನ್ನು ಪಡೆಯಬೇಕಿದೆ ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

       ಕ್ಷಯ ರೋಗ ನಿಯಂತ್ರಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಜನಸಂಖ್ಯೆಯನ್ನು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣ ಮಾಡಲು ಆಗುತ್ತಿಲ್ಲ ಇದಕ್ಕೆ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ ಎಲ್ಲದ ಸಹಕಾರ ಇದ್ಧಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯವಿದೆ. ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 16.59 ಲಕ್ಷ ಜನತೆ ಇದ್ದು ಇದರಲ್ಲಿ 8.40 ಲಕ್ಷ ಗಂಡು, 8.18 ಲಕ್ಷ ಹೆಣ್ಣು ಇದ್ದರು ಸರಾಸರಿ 1000 ಗಂಡಸರಿಗೆ 947 ಹೆಣ್ಣು ಮಕ್ಕಳಿದಿದ್ದಾರೆ ಎಂದರು.

      ಇಂದಿನ ದಿನಮಾನದಲ್ಲಿ ಮಾನವ ಆಯಸ್ಸು ಸಹಾ ಹೆಚ್ಚಳವಾಗುತ್ತಿದೆ ಇದಕ್ಕೆ ಅಧುನಿಕ ತಂತ್ರಜ್ಞಾನವೇ ಕಾರಣವಾಗಿದೆ ಇದರಿಂದ ಮಾನವ ತನ್ನ ಜೀವಿತಾವಧಿಯನ್ನು ಹೆಚ್ಚಳ ಮಾಡಿಕೊಂಡಿದ್ದಾನೆ, ಇದರಿಂದ ಹುಟ್ಟುವವರಿಗೆ ಜಾಗದ ಕೊರತೆ ಉಂಟಾಗುತ್ತಿದೆ ಎಂದ ಅವರು, ಲಿಂಗಾನುಪಾತ ಮತು ಜನಸಂಖ್ಯಾ ನಿಯಂತ್ರಣ ಮಾಡದಿದ್ದರು ಮುಂದೆ ಆಪಾಯ ಕಾದಿದೆ ಇದರ ಬಗ್ಗೆ ಎಲ್ಲರು ಸಃಆ ಆಲೋಚಿಸಬೇಕಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲಿ ಆರೋಗ್ಯಾಧಿಕಾರಿ ಪಾಲಾಕ್ಷ, ಜಿಲ್ಲಾ ಷರ್ಜನ್ ಡಾ.ಜಯಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ಗಿರೀಶ್, ಡಾ.ಸುಧಾ, ಡಾ ರವೀಂದ್ರ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap