ಸಿರುಗುಪ್ಪ :-
ಕರ್ನಾಟಕ ರಾಜ್ಯದ ಹುಬ್ಬಳ್ಳಿ ಸೆರಿದಂತೆ ಭಾರತ ದೆಶಾಂದ್ಯಂತ 53 ನಗರಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳಂತೆ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಲು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಯು.ಐ.ಡಿ.ಎ.ಐ ಯೋಚಿಸಿದೆ ಎಂದು ಭಾರತ ಸರಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಮಿನಿಸ್ಟ್ರಿ ಆಫ್ ಕಮ್ಯುನಿಕೇಷನ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಎಸ್.ಜಿ.ಪಿ.ಎಂ.ಡಿ.ಜಿ.ಪೊಸ್ಟ್ ಪೊರಮ್ ಸದಸ್ಯರಾದ ಅಬ್ದುಲ್ ನಬಿ ಹೇಳಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಮಂಗಳವಾರ ಸಂಜೆ ವಿಶ್ವ ಅಂಚೆ ದಿನ ರಾಷ್ಟ್ರೀಯ ಅಂಚೆ ಸಪ್ತಾಹ 9 ಅಕ್ಟೋಬರ್ 2018 ರಿಂದ 15 ರವರೆಗೆ ನೆರೆಯುವ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬ್ಯಾಂಕುಗಳು ಅಂಚೆ ಕಚೇರಿಗಳಲ್ಲಿರುವ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಕೇಂದ್ರಗಳು ಕಾಣಲಿರುವ ಹಣೆ ಮುಂದುವರಿಸಲಿವೆ ಅಂಚೆ ಇಲಾಖೆಯ ಸೇವೆ ಮಹತ್ತರವಾದುದು ಎಂದರು ಮಹಾತ್ಮ ಗಾಂಧೀಜಿ 150ನೇ ಜಯಂತಿ ಅಂಗವಾಗಿ ಸಿಬ್ಬಂದಿ ವರ್ಗ ವಿಶೇಷವಾಗಿ ಸ್ವಚ್ಛತೆಗೆ ಶ್ರಮದಾನ ನಡೆಸಿದರು ಜೈಸಿಂಗ್ ಅಲ್ವರಿ ಮಾತನಾಡಿದರು.
ಮುಖ್ಯ ಅಂಚೆ ಕಚೇರಿ ಮಾಸ್ಟರ್ ಬಿ.ನಾಗರಾಜ್ ಅವರು ಮಾತನಾಡಿ ಅಂಚೆ ಇಲಾಖೆ ಅಂಚೆ ಕೆಲಸದ ಜತೆ ರೈಲ್ವೆ ರಿಜರ್ವೆಷನ್ ಟಿಕೆಟ್, ಆಧಾರ್ ಕಾರ್ಡ್ ತಿದ್ದುಪಡಿ, ಹೆಸರು ಬದಲಾವಣೆ ಅಲ್ಲದೆ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಶೀಘ್ರವೇ ಚಾಲನೆ ನೀಡಲು ತಯಾರಿ ಸಿಬ್ಬಂದಿ ವರ್ಗ ಬ್ಯಾಂಕ್ ನೌಕರರಂತೆ ಕೆಲಸ ನಿರ್ವಹಿಸಲಿದ್ದಾರೆ. ಇ-ಮನಿಯಾರ್ಡರ್ ಮೂಲಕ ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲರ ವೇತನ,ಮೈತ್ರಿ ಹಾಗೂ ಯಶಸ್ವಿನಿ ಯೋಜನೆಯಡಿ ಪಿಂಚಣಿ, ಮಾಶಾಸನ, ಸ್ಪೀಡ್ ,ಇ-ಪೇಮೆಂಟ್, ಪಾರ್ಸೆಲ್, ಬುಕ್ಕಿಂಗ್, ವಿದೇಶ ಕರೆನ್ಸಿ ಬದಲಾಯಿಸುವುದು, ಜೀವವಿಮೆ, ಹಲವಾರು ಯೋಜನೆಗಳು ನಿಷ್ಠೆಯಿಂದ ಸಾರ್ವಜನಿಕ ಗ್ರಾಹಕರಿಗಾಗಿ ಕರ್ತವ್ಯ ನಗುನಗುತ್ತಾ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.ಪಿ.ಎ.ಎಂ.ಡಿ.ಜಿ.ವೈ.ಶಿವಪ್ರಸಾದ್ ಸರ್ವರನ್ನು ಸ್ವಾಗತಿಸಿದರು ಸಿಬ್ಬಂದಿ ವರ್ಗದವರು ಮತ್ತಿತರರ ಗಣ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ