ಆಗಡಿ
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಗಡಿ ಗ್ರಾಮ ಪಂಚಾಯತಿಯ ಅಗಡಿ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆಯನ್ನು ಶಾಲಾ ಮಕ್ಕಳಿಂದ ಜಾತಾ ಹಾಗೂ ಸ್ವಚ್ಚತಾ ಘೋಷಣೆಗಳ ಮೂಲಕ ಕಾರ್ಯಕ್ರಮ ಪ್ರಾರಂಭಿಸಿಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀ ಕೊಟ್ರೇಶಪ್ಪ ಬಸೇಗಣ್ಣಿಯವರು ಮಾತನಾಡಿ ಮಕ್ಕಳ ಮೂಲಕ ಸೊಚ್ಚತೆಯ ಅರಿವು ಮನೆ ಮನೆಗೂ ಪ್ರಸಾರವಾಗಬೇಕೆಂದು ತಿಳಿಸಿದರು.
ಹಾಗೆಯೇ ಮಾತನಾಡಿ ಕುಟುಂಬದ ಗೌರವಕ್ಕಾಗಿ ಶೌಚಾಲಯ ಬಳಸಿರಿ ಮತ್ತು ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇದೆ ಎಂದು ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಪಿ.ಎನ್ ಹುಬ್ಬಳ್ಳಿ, ತಾಲೂಕ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಜನಪ್ರತಿನಿಧಿಗಳು, ತಾಲೂಕ ಮಟ್ಟದ ವಿವಿಧ ಇಲಾಖೆಯವರು, ಶಾಲಾ ಶಿಕ್ಷಕ ವೃಂದದವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಕುಮಾರಿ ಮಾಲಾಶ್ರೀ ಬಿ ಕೆಂಚನಗೌಡ್ರ ನಿರೂಪಿಸಿದರು ಎಸ್ ಬಿ ಎಣ್ಣಿ ದ್ವಿ, ದ,ಲೆಕ್ಕ ಸಹಾಯಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
