ಹಾವೇರಿ :
ಪ್ರಕೃತಿಯ ಸಂಪನ್ಮೂಲಗಳಾದ ಗಾಳಿ, ನೀರು, ಪರಿಸರ ಉಳಿಸಿ ಬೆಳಿಸಲು ನಾವೆಲ್ಲರೂ ಬದ್ದರಾಗಬೇಕು ಇಲ್ಲವಾದರೆ ಅಪಾಯ ತಪ್ಪಿದಲ್ಲ ಎಂದು ಹಿರೇಮುಗದೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಾಯ್ ಎಂ ಚಾಕರಿ ತಿಳಿಸಿದರು. ಸವಣೂರ ತಾಲೂಕ ಹಿರೇಮುಗದೂರ ಗ್ರಾ,ಪಂ ಆವರಣದಲ್ಲಿ ವಿಶ್ವ ನೀರು ದಿನಾಚಾರಣೆಯ ನಿಮಿತ್ಯ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲವನ್ನು ಕೊಂಡುಕೊಳ್ಳಬಹುದು.ಆದರೆ ನಿಸರ್ಗದ ಸಂಪನ್ಮೂಲಗಳನ್ನು ಹೊರತು ಪಡಿಸಿ. ನೀರು ಮನುಷ್ಯನಿಗೆ ಅತಿ ಮುಖ್ಯ. ಇಂದು ಪ್ರತಿ ಕೆಲಸಕ್ಕೂ ಬೇಕು. ಅಂತರಜಲ ಬೆಳಿಸಿ ಉಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಹಾಗೂ ಕೆಲಸಗಳ ಆಗಬೇಕಾಗಿದೆ.ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಮೂಲಕ ಪರಿಸರದ ಸಮತೋಲನ ಕಾಪಾಡಲು ಸಾಧ್ಯ. ಗ್ರಾ,ಪಂ ಎಲ್ಲ ಸದಸ್ಯರ ಸಹಕಾರದ ಜೊತೆಗೆ ಊರಿನ ಪ್ರೋತ್ಸಾಹ ಮುಖ್ಯ ಎಂದು ವಾಯ್,ಎಂ ಚಾಕರಿ ಹೇಳಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಬಸಪ್ಪ ಕಡ್ಲೇಪ್ಪನವರ ಶ್ರೀಮತಿ ನೀಲವ್ವ ಜಾಡರ, ಟಿಎಂಎಇಎಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಎಸ್‍ಜಿ ಚರಂತಿಮಠ. ಸ,ಹಿ,ಪ್ರಾ,ಶಾಲೆಯ ಪ್ರಧಾನ ಗುರುಗಳಾದ ಜೆ,ಎಂ ಭಜಂತ್ರಿ, ಶಿಕ್ಷಕರಾದ ಜಗದೀಶ ತಳವಾರ.ಹಿರಿಯರಾದ ಬಸವರಾಜ ಎಸ್, ರಮೇಶ ಕಾಳಿ.ಗ್ರಾ,ಪಂ ಕಾರ್ಯದರ್ಶಿಗಳಾದ ಎಚ್,ಜಿ ಸಂಗೂರ, ಸಿಬ್ಬಂದಿಗಳಾದ ಪರಶುರಾಮ ಹೊಳೆಂಚಿ,ಗುಡ್ಡಪ್ಪ ಎನ್ ಆರೇರ.ಶಿವಪ್ಪ ಮೂಲಿಮನಿ,ಶ್ರೀಮತಿ ಪುಷ್ಟಾ ಅಜಗಣ್ಣನವರ, ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.