ಹಗರಿಬೊಮ್ಮನಹಳ್ಳಿ:
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳ ಕ್ರೀಯಾಶೀಲ ಬೆಳವಣಿಗೆಗೆ ಹಾಗೂ ಬರಹಗಳ ಶಬ್ಧ ಜೋಡಣೆ ಬೆಳವಣಿಗೆ ಪತ್ರಲೇಖನ ಸ್ಪರ್ಧೆ ಸಹಕಾರಿ ಎಂದು ಹೊಸಪೇಟೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜೆ.ಎಸ್.ಗುರುಪ್ರಸಾದ್ ತಿಳಿಸಿದರು.
ತಾಲೂಕಿನ ತಂಬ್ರಹಳ್ಳಿ,ಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗು ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಕಿನ್ನಾಳ ಪೊರಮಾಂಬೆ ಗುರುಸಿದ್ದಪ್ಪ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಸಂದೇಶ ರವಾನಿಸಲು ರಾಜ ಮಹರಾಜರುಗಳು ಪಾರಿವಾಳನ್ನು ಬಳಸುತ್ತಿದ್ದರು, ಎಲೆಗಳಲ್ಲಿ ಬರೆದು ಧೂತರ ಮುಖಾಂತರ ಸಂದೇಶ ಕಳುಸುತ್ತಿದ್ದನ್ನು ನಾವೆಲ್ಲಾ ಪುಸ್ತಕದಲ್ಲಿ ಓದಿದ್ದೇವೆ. ಆಗಿನ ಕಾಲದ ಎಲ್ಲಾ ವ್ಯವಹಾರಗಳು ಪತ್ರದ ಮುಖಾಂತರ ನಡೆಯುತ್ತಿದ್ದವು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ರವಾನಿಸಲು ಪತ್ರ ಲೇಖನ ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಆದರೆ ಜಾಗತೀಕರಣದ ಪ್ರಭಾವದಿಂದ ಸ್ಪರ್ಧಾತ್ಮಾತ್ಮಕ ಜಗತ್ತಿನಲ್ಲಿ ದೂರವಾಣಿ, ಗಣಕ ಯಂತ್ರ, ಮೊಬೈಲನ ಅನೇಕ ತಂತ್ರಜ್ಞಾನದಿಂದ ಜಗತ್ತು ಅತ್ಯಂತ ಚಿಕ್ಕದಾಗಿದೆ. ಪತ್ರ ಲೇಖನ ಅನ್ನುವುದೇ ಇಂದಿನ ವಿದ್ಯಾರ್ಥಿಗಳಿಗೆ ತಿಳಿಯದಾಗಿದೆ ಈ ದೃಷ್ಟಿಯಿಂದ ಅವರಲ್ಲಿ ಪತ್ರ ಲೇಖನ ಬರೆಯುವ ಸ್ಪರ್ಧೆಯನ್ನು ನಮ್ಮ ಇಲಾಖೆ ಹಮ್ಮಿಕೊಂಡಿದೆ ಉತ್ತಮ ಪತ್ರ ಲೇಖನಗಳಗೆ ಬಹುಮಾನಗಳನ್ನು ನೀಡಲಾಗುವುದು ಎಂದರು.
ಜಿಲ್ಲಾ ಅಂಚೆ ಅಧೀಕ್ಷಕ ಕೆ.ಬಸವರಾಜ ಇವರು ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೆ ಡಿಜಿಟಲ್ ಅಂತರ್‍ಜಾಲ ಒದಗಿಸುವ ನಿಟ್ಟಿನಲ್ಲಿ ಬಹಳ ಶ್ರಮಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಸಿದರು.
ಇದಕ್ಕೂ ಮುನ್ನ ಏಣಿಗಿ ಪ್ರಾಥಮಿಕ ಶಾಲೆಯಲ್ಲಿ ಪತ್ರ ಲೇಖನ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂಚೆ ಮೇಲ್ವಿಚಾರಕ ಬಿಹೆಚ್‍ಎಂ.ಸೋಮಶೇಖರಯ್ಯ , ಏಣಿಗಿ ಪೋಸ್ಟ ಮಾಸ್ಟರ್‍ಟಿ.ಕೊಟ್ರೇಶ್, ಮುಖ್ಯ ಗುರುಗಳಾದ ಬಿ.ರಾಜಶೇಖರ್, ಎಸ್‍ವಿ ಪಾಟೀಲ್, ಎಂಎಸ್. ಕಲ್ಗುಡಿ, ಸಂತೋಷ, ಶಿಕ್ಷಕಿ ರಾಜೇಶ್ವರಿ. ಬ್ಯಾಸಿಗಿದೇರಿ ಅಶೋಕ, ಅಂಚೆ ಸಹಾಯಕರಾದ ರವಿ, ಮಂಜುನಾಥ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
