ಹಿರಿಯೂರು :
ಕಾಶ್ಮೀರ ಕಣಿಮೆಯ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕ ದಾಳಿ ಖಂಡಿಸಿ ನಗರದಲ್ಲಿ ಮುಸ್ಲಿಂಸಮುದಾಯದವರು ಪ್ರತಿಭಟನೆ ನಡೆಸಿ ಭಾರತೀಯ ಸೈನಿಕರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.ನಗರದ ಮಹಾತ್ಮ ಗಾಂಧಿವೃತ್ತದಲ್ಲಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರಲ್ಲದೆ, ಯೋಧರ ಮೇಲೆ ನಡೆದ ಪೈಶಾಚಿಕ ದಾಳಿಯನ್ನು ಉಗ್ರವಾಗಿ ಖಂಡಿಸಿ,ಕಾಶ್ಮೀರದ ಉಗ್ರಸಂಘಟನೆಗಳ ಮೂಲೋತ್ಪಾಟನೆಗೆ ಕೇಂದ್ರ ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಪಿಎಲ್ಡಿಬ್ಯಾಂಕ್ ಅಧ್ಯಕ್ಷ ಪಿ.ಎಸ್.ಸಾದತ್ಉಲ್ಲಾ, ನಗರಸಭೆ ಸದಸ್ಯರಾದ ಅಬ್ಬಾಸ್, ಎಸ್.ಪಿ.ಟಿ.ದಾದಾಪೀರ್, ಅಜೀಜ್, ಸಿಗ್ಬತ್ಉಲ್ಲಾ, ಅಬ್ದುಲ್ ಮೌಲನಾ, ಸಾಧಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.