ಏಕಾಗ್ರತೆಗೆ ಯೋಗ ಮದ್ದು : ಬಾಬಾ ರಾಮದೇವಜೀ.

ಹೊಸಪೇಟೆ :

.     ಶೈಕ್ಷಣಿಕವಾಗಿ ಏನಾದರೂ ಸಾಧನೆ ಮಾಡಬೇಕಾದರೆ ಜ್ಞಾಪಕ ಶಕ್ತಿ, ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಇದಕ್ಕೆಲ್ಲ ಯೋಗವೇ ಪರಿಹಾರವಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಸಲಹೆ ನೀಡಿದರು.

      ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ ಹಾಗು ಎಂಎಸ್‍ಪಿಎಲ್ ಸಹಯೋಗದೊಂದಿಗೆ ಫೆ.5ರಿಂದ 9ರ ವರೆಗೆ 5 ದಿನಗಳ ಕಾಲ ಆಯೋಜಿಸಿದ್ದ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಇಂದಿನ ದಿನಗಳಲ್ಲಿ ರಸಾಯನಿಕಯುಕ್ತ ಆಹಾರ, ಕಲುಷಿತ ಗಾಳಿ ಸೇವನೆಯಿಂದ ಬಿ.ಪಿ, ಶುಗರ್, ಬೆನ್ನು ನೋವು, ಬೊಜ್ಜು, ಕಿಡ್ನಿ ಕಾಯಿಲೆ, ಸೇರಿದಂತೆ ಜನ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೌಟುಂಬಿಕ ನೆಮ್ಮದಿ ಹಾಳಾಗಿ ಹೋಗುತ್ತಿದೆ. ಅದರ ಬದಲು ದಿನಕ್ಕೆ 1 ತಾಸು ಯೋಗಕ್ಕೆ ಮೀಸಲಿಟ್ಟರೆ ಉತ್ತಮ ಆರೋಗ್ಯದ ಜೊತೆಗೆ ನೆಮ್ಮದಿಯ ಜೀವನ ಸಾಗಿಸಬಹುದು. ಇದರಿಂದ ಆರೋಗ್ಯಯುಕ್ತ ಸಮಾಜದ ಜೊತೆಗೆ ಸುಭದ್ರ ದೇಶ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

     ಬಳಿಕ ಯೋಗದ ವಿವಿಧ ಪ್ರಕಾರಗಳಾದ ಅನುಲೋಮ, ವಿಲೋಮ, ಕಪಾಲಬಾತಿ, ಪ್ರಾಣಾಯಾಮ ಸೇರಿದಂತೆ ವಿವಿಧ ಯೋಗ ಪ್ರಕಾರಗಳನ್ನು ತಿಳಿಸಿ ಕೊಟ್ಟರು.

    ಇದೇ ವೇಳೆ ಯೋಗ ಶಿಬಿರಕ್ಕೆ ಸಹಕರಿಸಿದ ಎಂಎಸ್‍ಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಬಲ್ಡೋಟಾ ಅವರನ್ನು ಯೋಗ ಗುರು ಬಾಬಾ ರಾಮದೇವ್ ಸನ್ಮಾನಿಸಿದರು.

    ಈ ಸಂಧರ್ಭದಲ್ಲಿ ರಾಹುಲ್ ಬಲ್ಡೋಟಾ, ಚಿತ್ರ ಬಲ್ಡೋಟಾ, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ದ್ರಾಕ್ಷಾಯಿಣಿ ಶಿವಕುಮಾರ್, ಎಫ್.ಟಿ.ಹಳ್ಳಿಕೇರಿ, ರಾಜ್ಯ ಯುವ ಪ್ರಭಾರಿ ಕಿರಣಕುಮಾರ್, ಜಿಲ್ಲಾ ಪ್ರಭಾರಿ ಕ್ರಿಷ್ಣನಾಯಕ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap