ಸರ್ವರೋಗಕ್ಕೂ ಯೋಗ ರಾಮಬಾಣವಿದ್ದಂತೆ-ಡಾ.ಬಿ.ಕೆ.ಸುಂದರ್

ಬಳ್ಳಾರಿ

       ಯೋಗ ಸರ್ವ ರೋಗಕ್ಕೂ ರಾಮಬಾಣವಿದ್ದಂತೆ, ಪ್ರತಿಯೋಬ್ಬರೂ ತಪ್ಪದೇ ಯೋಗ ಮಾಡಲು ಮುಂದಾದರೆ ಆವರಿಸುವ ನಾನಾ ಕಾಯಿಲೆಗಳು ದೂರವಾಗಲಿವೆ ಎಂದು ಡಾ.ಬಿ.ಕೆ.ಸುಂದರ್ ಅವರು ಹೇಳಿದರು.

       ಇಲ್ಲಿನ ಸತ್ಯನಾರಾಯಣ ಪೇಟೆ ಬಡಾವಣೆಯ ಪ್ರಸಿದ್ಧ ಕ್ಷೇತ್ರ ಶ್ರೀಭೂತರಾಜರ ದೇವಾಲಯದಲ್ಲಿ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ವಿಪ್ರ ಮಹಿಳೆಯರಿಗೆ ಮೇ.2ರಿಂದ ಮೇ.11ರವರೆಗೆ ಹಮ್ಮಿಕೊಂಡಿದ್ದ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷವಾಗಿ ಮಹಿಳೆಯರು ಯೋಗ ಮಾಡುವದನ್ನು ರೂಢಿಸಿಕೊಳ್ಳಬೇಕು.

      ಗೃಹಿಣಿಯರು ಮನೆ ಕೆಲಸದಲ್ಲೆ ಹೆಚ್ಚು ತೊಡಗಿ ಆರೋಗ್ಯದ ಕಡೆಗೆ ಗಮನಹರಿಸುವುದು ಸ್ವಲ್ಪ ಕಡಿಮೆ, ನಾನಾ ಸಮಸ್ಯೆ ಎದುರಾದರೂ ಹೆಚ್ಚು ಕಾಳಜಿ ವಹಿಸದೇ ಮನೆ ಕೆಲಸದಲ್ಲೇ ಬ್ಯುಸಿ ಆಗಿರಲಿದ್ದಾರೆ. ಇದಕ್ಕೆಲ್ಲ ಸರಳವಾದ ವಿಧಾನ ಯೋಗ, ನಿತ್ಯ ಯೋಗ ಮಾಡುವದರಿಂದ ಆರೋಗ್ಯ ವೃಧ್ಧಿಸುವದರ ಜೊತೆಗೆ ಮಾನಸಿಕವಾಗಿ ಸಧೃಡರಾಗಲು ಸಾಧ್ಯ ಎಂದರು.

       ಯೋಗ, ಧ್ಯಾನ ಮಾಡುವುದರಿಂದ ಆರೋಗ್ಯ ವೃಧ್ಧಿಸಲಿದೆ. ಸಣ್ಣ ಪುಟ್ಟ ಖಾಯಿಲೆಗಳು ಹತ್ತಿರಕ್ಕೆ ಬರೋಲ್ಲ. ಯೋಗ ಹಾಗೂ ಧ್ಯಾನ ಮಾಡಲು ಉಪಕರಣಗಳು ಬೇಕಿಲ್ಲ, ಸರಳ ರೀತಿಯ ಈ ಯೋಗ ಹಾಗೂ ಧ್ಯಾನ ಮಾಡಲು ವಿಶೇಷವಾಗಿ ಗೃಹಿಣಿಯರು ಮುಂದಾಗಬೇಕು. ಈ ಹಿಂದೆ ಗೃಹಿಣೀಯರು ಮನೆ ಕೆಲಸದಲ್ಲೇ ಹೆಚ್ಚು ತೊಡಗುತ್ತಿದ್ದರು. ಇತ್ತೀಚೆಗೆ ಅದು ಬದಲಾಗಿದೆ. ಅವರೂ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸುತ್ತಿಲ್ಲ.

       ಈ ಹಿನ್ನೆಲೆಯಲ್ಲಿ ಸ್ಥಳೀಯರಾದ ರೂಪ ಮುರುಳೀಧರ್ ಅವರು ಈ ಯೋಗ ಶಿಬಿರವನ್ನು ಮಹಿಳೆಯರಿಗಾಗಿಯೇ ಉಚಿತವಾಗಿ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಪಡೆಯಲು ಮುಂಧಾಗಬೇಕು ಎಂದರು.ಯೋಗ ಶಿಕ್ಷಕರಾದ ರೂಪಾ ಮುರಳೀದರ ರಾವ್ ಅವರು ಮಾತನಾಡಿ, ಮಹಿಳೆಯರಿಗಾಗಿ ಮೇ.11ರವರೆಗೆ ನಿತ್ಯ ಬೆ.6ರಿಂದ 7.30ರವರೆಗೆ ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಪ್ರಸಿದ್ಧ ಕ್ಷೇತ್ರ ಶ್ರೀಭೂತರಾಜರ ದೇವಾಲಯದಲ್ಲಿ ಉಚಿತ ಯೋಗ ಶಿಬಿರವನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಪ್ರತಿಯೋಬ್ಬರೂ ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಿರೀಶ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕ್ರ್ರಾಫ್ಟನ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಮಾಯಾ ಪಾಂಡುರಂಗರಾವ್ ಸೇರಿದಂತೆ ನಗರದ ನೂರಾರು ಮಹಿಳೆಯರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link