ಹೂವಿನಹಡಗಲಿ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೂವಿನಹಡಗಲಿ ಇವರು ನೂತನವಾಗಿ ಆರಂಭಿಸಿದ ಶ್ರೀ ಧರ್ಮಸ್ಥಳ ಸಿರಿ ಗ್ರಾಮಾಭಿವೃದ್ದಿ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಸಿರಿ ಹಬ್ಬ ಸಿರಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮೇಳದ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸ್ವಾವಲಂಭಿ ಬದುಕಿಗೆ ಪೂರಕವಾದ ಯೋಜನೆ ಮತ್ತು ಆರ್ಥಿಕ ಸಹಕಾರವನ್ನು ನೀಡುವುದರ ಮೂಲಕ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರೂ ಕೂಡಾ ಆಧಾರ ಸ್ಥಂಭ ವಾಗಬಲ್ಲರು ಎಂಬುದನ್ನು ಗ್ರಾಮಾಭಿವೃದ್ದಿ ಸಂಸ್ಥೆ ಸಾಬೀತು ಪಡಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಚಿಂತನೆಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ನೂತನವಾಗಿ ಆರಂಭಗೊಂಡಿರುವ ಸಿರಿ ಹಬ್ಬ ಮಳಿಗೆಯಲ್ಲಿ ವಿಶೇಷವಾಗಿ ಹೊಸ ವಿನ್ಯಾಸದೊಂದಿಗೆ ತಯಾರುಗೊಂಡ ಖಾದಿ ಉಡುಪುಗಳು ಕಡಿತ ದರದಲ್ಲಿ ಸಿಗುತ್ತವೆ. ಮತ್ತು ಸರಿ ಧಾನ್ಯಗಳಾದ ನವಣೆ, ಹಾರಕ, ಉದಲು, ಸಾಮೆ, ಕೋರಲೆ, ಬರಗು , ಜೋಳ, ರಾಗಿ, ಸಜ್ಜೆ, ಇವುಗಳು ದೊರೆಯುತ್ತಿದ್ದು ಇಂದಿನ ವಿಷಪೂರಿತ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಳಾಗಿದ್ದು ಸರಿ ಧಾನ್ಯಗಳ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಡಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ನಿರ್ದೇಶಕರಾದ ಕೆ.ಚಿದಾನಂದ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ರೈತರು, ಕೃಷಿಕರು, ಮಹಿಳೆಯರ ಹಿತ ಕಾಪಾಡುವುದರ ದೃಷ್ಟಿಯಿಂದ ವಿವಿಧ ರೀತಿಯ ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು 1 ಸಾವಿರ ಕೋಟಿ ಉ:ಳಿತಾಯದೊಂದಿದೆ 25.05 ಕೋಟಿ ಸಾಲ ಪಡೆದು ಮರು ಪಾವತಿ ಮಾಡಿ ಸಂಸ್ಥೆಯ ನಿಯಮಗಳನ್ನು ಸಕ್ರೀಯವಾಗಿ ಪಾಲಿಸಿದ್ದು, ನೂರಕ್ಕೆ ನೂರರಷ್ಟು ಮಹಿಳಾ ಸ್ವಸಹಾಯ ಸಂಘಗಳು ಮರು ಪಾವತಿಯನ್ನು ಮಾಡುವುದರ ಮೂಲಕ ಸಂಸ್ಥೆಯ ಪ್ರಗತಿಗೆ ಕಾರಣವಾಗಿವೆ ಎಂದು ಪ್ರಶಂಸಿದರು.
ಜಿಲ್ಲಾ ಜಾಗೃತಿ ವೇದಿಕೆ ಸದಸ್ಯ ಕಿರಣ್ ಕುಮಾರ್ ಜೈನ್, ಪುರಸಭೆ ಸದಸ್ಯೆ ಅಟವಾಳಗಿ ಲೀಲಾ, ಡಾ. ಪ್ರಕಾಶ್ ಅಟವಾಳಗಿ ಮಾತನಾಡಿದರು. ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಅಯ್ಯನಗೌಡ, ಯೋಜನಾಧಿಕಾರಿ ತಿಲಕರಾಜ್, ಸಂಸ್ಥೆಯ ಸಂದೇಶ, ರವಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








