ಹಣದಿಂದ ಆರೋಗ್ಯ ಖರೀದಿ ಅಸಾಧ್ಯ

ಚಿತ್ರದುರ್ಗ:

      ಹಣದಿಂದ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆರೋಗ್ಯವನ್ನು ಪಡೆಯಲು ಆಗುವುದಿಲ್ಲ. ಅದಕ್ಕಾಗಿ ಯೋಗದಿಂದ ಸದಾ ಆರೋಗ್ಯವಂತರಾಗಿ ಲವಲವಿಕೆಯಿಂದ ಇರಬಹುದು ಎಂದು ಮೇದಾರ ಕೇತೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಹೇಳಿದರು.

     ಸೀಬಾರ ಸಮೀಪವಿರುವ ಮೇದಾರ ಕೇತೇಶ್ವರ ಮಹಾಸಂಸ್ಥಾನ ಮಠದ ನವೀನ್ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಾನಿಧ್ಯ ವಹಿಸಿ ಮಾತನಾಡಿದರು.ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗವನ್ನು ಅಭ್ಯಾಸ ಮಾಡುವುದರಿಂದ ನೂರಾರು ವರ್ಷಗಳ ಕಾಲ ಬದುಕಬಹುದು. ಸಿದ್ದಗಂಗಾಮಠದ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳು ಚಿಕ್ಕಂದಿನಿಂದಲೇ ಯೋಗ ಮಾಡುತ್ತಿದ್ದರಿಂದ 111 ವರ್ಷಗಳ ಕಾಲ ಬದುಕಿ ಆರೋಗ್ಯವಂತರಾಗಿದ್ದರು.

   ಪದ್ಮಭೂಷಣ ಡಾ.ರಾಜ್‍ಕುಮಾರ್, ಶಂಕರ್‍ನಾಗ್ ಕೂಡ ಯೋಗಭ್ಯಾಸದಲ್ಲಿ ನಿರತರಾಗಿದ್ದರು. ಬಹುತೇಕ ರಾಜಕಾರಣಿಗಳು ಇಂದಿಗೂ ಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.

     ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ, ಶ್ರಮವಿಲ್ಲದ ಜೀವನದಿಂದ ಎಲ್ಲಿ ನೋಡಿದರೂ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಿಂದಿನ ಕಾಲದಲ್ಲಿ ಸಾಧುಗಳು, ಋಷಿಮುನಿಗಳು ಯೋಗದಲ್ಲಿ ತಲ್ಲೀನರಾಗಿರುತ್ತಿದ್ದರು. ದಿನಕ್ಕೆ ಕೇವಲ ಹತ್ತು ನಿಮಿಷವಾದರೂ ಯೋಗವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಡುವುದರಿಂದ ನಿರೋಗಿಯಾಗಿರಬಹುದು. ಒತ್ತಡ ಜೀವನದಲ್ಲಿ ಸಮಯವಿಲ್ಲ ಎಂದು ಹೇಳಿ ಯೋಗವನ್ನು ಯಾರು ನಿರ್ಲಕ್ಷೆ ಮಾಡುವುದು ಬೇಡ.

    ಜೂ.21 ರಂದು ವಿಶ್ವಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಯೋಗ ಒಂದು ದಿನಕ್ಕೆ ಸೀಮಿತವಾಗುವುದು ಬೇಡ. ನಿತ್ಯ ನಿರಂತರವಾಗಿರಬೇಕು. ಯೋಗದಿಂದ ಏಕಾಗ್ರತೆ, ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ. ಆರೋಗ್ಯ ಸಕಲ ಸಂಪತ್ತು ಯೋಗದಿಂದ ಲಭಿಸುತ್ತದೆ. ದಿನನಿತ್ಯವು ಸೇವಿಸುವ ಆಹಾರ, ಔಷಧಿಯಲ್ಲಿ ರಾಸಾಯನಿಕವಿದೆ. ಹಾಗಾಗಿ ಇವುಗಳಿಂದ ದೂರವಿದ್ದು ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಯೋಗವೊಂದೆ ದಾರಿ ಎಂದು ಯೋಗದ ಮಹತ್ವ ತಿಳಿಸಿದರು.

      ನವೀನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಲಬಸಪ್ಪ ಮಾತನಾಡಿ ಶಿಕ್ಷಣದ ಜೊತೆ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು. ಇದರಿಂದ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಮೂಡಲಿದೆ ಎಂದರು.
ಯೋಗ ಶಿಕ್ಷಕ ದಿನೇಶ್, ದೈಹಿಕ ಶಿಕ್ಷಕ ವೇಮನರೆಡ್ಡಿ, ಶಿಕ್ಷಕರುಗಳಾದ ಭೋತರಾಜ್, ರವಿ, ಭರತೇಶ್, ಪುರುಷೋತ್ತಮ, ಮುಕ್ಕಣ್ಣ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.ನವೀನ್ ಪ್ರೌಢಶಾಲೆಯ ಮಕ್ಕಳು ಯೋಗ ಪ್ರದರ್ಶಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link