ಹೊಸದುರ್ಗ:
ಬದುಕಿನಲ್ಲಿ ಪ್ರಸನ್ನತೆ,ಶಾಂತತೆ ಮತ್ತು ಕಾಯಕದಲ್ಲಿ ವೀರತ್ವವಿರಬೇಕು,ಪ್ರತಿಭೆಗಳು ಅರಳಲು ಪರಿಶ್ರಮಿಸಬೇಕು ,ಮುಖ್ಯವಾಗಿ ಆತ್ಮವಿಶ್ವಾಸವಿರಬೇಕು,ಶರಣದ ಧರ್ಮದಲ್ಲಿ ಕಾಯಕಕ್ಕೆ ಆಧ್ಯತೆಯನ್ನ ನೀಡಿದೆ,ಸಮಾಜಕ್ಕೆ ಸೇವೆ ಸಲ್ಲಿಸಲು ಕಳಕಳಿ ಇರಬೇಕು,ಬದುಕು ಎಂಬುದು ಭಗವಂತ ನೀಡಿದ ಅಪರೂಪದ ಕೊಡುಗೆಯಾಗಿದೆ,ಅಕ್ಷರ ಕಲಿಸಿದ ಗುರುವೇ ನಿಜವಾದ ಮಾರ್ಗದರ್ಶಕನಾಗಿದ್ದಾನೆ, ತಂದೆ,ತಾಯಿ ಗುರು ಸಮಜಕ್ಕೆ ಗೌರವಿಸಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ:ಸೋಮಶೇಖರ್ ಕರೆ ನೀಡಿದರು.
ವೀರಶೈವ ಲಿಂಗಾಯತ ಕ್ಷೇಮಾಭಿವೃದ್ದಿ ಸಂಘ ಹೊಸದುರ್ಗ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳು ಮತ್ತು ಸಮಾಜ ಬಾಂಧವರು ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ತ್ಯಾಗ ಆದರ್ಶದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ, ಬುದ್ದಿವಂತಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಯಾರಿಗೂ ಮೋಸ ಮಾಡದೆ, ದ್ವೇಷಿಸದೆ ಸಹೃದಯವಂತರಾಗಬೇಕು,ಪರೋಪಕಾರ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಿ ಎಂದು ಒತ್ತಿ ಹೇಳಿದರು.
ಕುಂಚಿಟಿಗ ಮಹಾಸಂಸ್ಧಾನದ ಡಾ:ಶ್ರೀಶಾಂತವೀರಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದರು.
ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸದ ಎ.ನಾರಾಯಣಸ್ವಾಮಿ,ಶಾಸಕ ಗೂಳಿಹಟ್ಟಿಶೇಖರ್,ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್. ನವೀನ್, ,ರಾಜ್ಯ ಸಂಘದ ಅಧ್ಯಕ್ಷ ಬಿ.ನಿರಂಜನ್, ರಾಜ್ಯ ಸಹಾಯಕ ವಾಣಿಜ್ಯ ತೆರಿಗೆಗಳ ಆಯುಕ್ತ ಆರ್. ಯರಗುಂಟಪ್ಪ, ಮಾಜಿ ಶಾಸಕ ಟಿ.ಹೆಚ್.ಬಸವರಾಜ್, ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷರಾಗಿಶಿವಮೂರ್ತಿ, ಬಿ.ಪಿ.ಓಂಕಾರಪ್ಪ ಪುರಸಭಾ ಸದಸ್ಯೆ ಶ್ರೀಮತಿ ಸರೋಜಮ್ಮಮಲ್ಲೇಶಪ್ಪ, ತಾಲ್ಲೂಕು ಎಚ್.ಸಿ.ಮಲ್ಲಿಕಾರ್ಜುನ್,ಮಾವಿನಕಟ್ಟೆ ಡಿ.ಗುರುಸ್ವಾಮಿ, ಮುಂತಾದವರು ಉಪಸ್ಧಿತರಿದ್ದರು.ಕಾರ್ಯಕ್ರದಲ್ಲಿ ನೂರಾರು ವಿದ್ಯಾರ್ಥಿಗಳನ್ನ ಪುರಸ್ಕರಿಸಿ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ