ಚಿತ್ರದುರ್ಗ:
ರಾಮಾಯಣ ಪ್ರತಿಯೊಬ್ಬರ ಆತ್ಮಾಯಣ ಎಂದು ಭೊವಿ ಗುರುಪೀಠಾಧ್ಯಕ್ಷರ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ರಾಮಾಯಣದಲ್ಲಿರುವ ಕೆಲವು ಮೌಲ್ಯೀಕ ಅಂಶಗಳು ಪ್ರತಿಯೊಬ್ಬರ ಬದುಕಿನ ಕಷ್ಟಕಾರ್ಯಪಣ್ಯಗಳ ಪ್ರತಿಬಿಂಬವಾಗಿದೆ. ಆದರ್ಶವಾಗಿ ಬದುಕಬೇಕಾದರೆ ಮೌಲ್ಯವಾದ, ಮೌಲ್ಯಯುತ ಅಂಶಗಳನ್ನು ಅಳವಡಿಸಿಕೊಂಡರೆ ಪುರುಷೋತ್ತಮನಾಗುತ್ತಾನೆ. ಅದುವೆ ಆದರ್ಶ ಎಂದು ತಿಳಿಸಿದರು.
ಮನುಷ್ಯನಿಗೆ ಎರಡುಮುಖಗಳಿರುತ್ತವೆ, ಒಂದು ಅಂತರಮುಖ ಮತ್ತು ಒಂದು ಬಹೀರ್ ಮುಖ. ಅಂತರ್‍ಮುಖವನ್ನು ಬಹೀರ್‍ಮುಖಿಯಾಗಿ ಮಾಡಿಕೊಂಡವರು ಸಂತರು, ಮಾಂತರು, ಶರಣರು, ಮಹಾ ಋಷಿಗಳು ಆಗುತ್ತಾರೆ. ಅಂತರಂಗ ಶುದ್ಧಿಮಾಡಿಕೊಂಡವರು ಬಹೀರ್‍ಮುಖಿಗಳಾಗಲು ಸಾಧ್ಯ. ಅಂತರ್‍ಮುಖಿಯಲ್ಲಿ ಕಣ್ಣಿಗೆ ಕಾಣದ ರಾಗದ್ವೇಷಗಳು ಅಡಗಿರುತ್ತವೆ. ಅವುಗಳನ್ನು ದಾಟಿ, ಸದ್ಭಾವನೆ, ಸತ್ಕಾರ್ಯಗಳ ಕಡೆ ಮುಖ ಮಾಡಿದರೆ, ಸಂತರಾಗುತ್ತಾರೆ. ಅದೇ ಅಂತರಂಗದ ಶುದ್ಧಿ, ಅದೇ ಬಹಿರಂಗದ ಶುದ್ಧಿ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅವರ ಅಂತರ್‍ಮುಖಿಯೇ ಶುದ್ಧಿಯೇ ಅವರು ಸಮಾಜಮುಖಿಯಾಗಿ ಕಾಣಲು ಸಾಧ್ಯ. ಜನಮುಖಿಯಾಗಿ ಯಾರು ಇರುತ್ತಾರೆಯೋ, ಅವರು ಜನನಾಯಕರಾಗುತ್ತಾರೆ. ಜನನಾಯಕರಾಗಲ್ಲಿಕ್ಕೆ ಅವರ ಕಾರ್ಯಗಳು ಬಹಳ ಮುಖ್ಯ. ಬದುಕಿನ ಘಟ್ಟದಲ್ಲಿ ಜನನಾಯಕರಾಗಲು ಅವರು ಮಾಡುವ ಶ್ರಮವೇ ಮುಖ್ಯ ಎಂದು ಹೇಳಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಅನಂತನಾಯ್ಕ್ ಮಾತನಾಡಿ, ವಾಲ್ಮೀಕಿ ಸೃಷ್ಟಿಸಿದಂತಹ ಪಾತ್ರಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದ್ದು, ವಾಲ್ಮೀಕಿ ಸಾಹಿತ್ಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಕಡೆಗಣಿಸುತ್ತಾ ಬರಲಾಗುತ್ತಿದೆ ಎಂದರು.
ಮಹರ್ಷಿ ವಾಲ್ಮೀಕಿ ಕುರಿತು ಹೊಸ ಅಧ್ಯಯನ ಒಂದನ್ನು ಆರಂಭಿಸಬೇಕಾದ ಅಗತ್ಯವಿದ್ದು, ವಾಲ್ಮೀಕಿ, ಸಮಾಜದ ಅಸ್ಮಿತೆ ಆದ್ದರಿಂದ ವಾಲ್ಮೀಕಿಗೆ ಪ್ರತಿಯೊಬ್ಬರೂ ಕೂಡ ಗೌರವಿಸಿ, ಅವರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿಯವರು ತಳ ಸಮುದಾಯದ ಬೌದ್ಧಿಕ ಶಕ್ತಿಯಾಗಿದ್ದು, ರಾಮಾಯಣದಂತಹ ಸಾಹಿತ್ಯದ ಮೂಲಕ ಜಗತ್ತಿಗೆ ಹೊಸ ಭಾಷ್ಯ ಬರೆದಂತವರು. ಅವರು ವಿಚಾರ ಚಿಂತನೆಗಳು ಯುವಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಆಗ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭದಲ್ಲಿ ಹಿರಿಯ ವಕೀಲರಾದ ಎನ್. ಜಯದೇವನಾಯ್ಕ್, ರಾಘವೇಂದ್ರ ನಾಯ್ಕ, ರವಿ ಮಾಕಳಿ, ಗಂಗಾಧರ್ ಗೊಂದಿ, ತಾವರ್ಯನಾಯ್ಕ, ಚಿನ್ನಸಮುದ್ರ ಶೇಖರ್‍ನಾಯ್ಕ, ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಪತ್ರ ಕರ್ತರ ಸಂಘದ ಅಧ್ಯಕ್ಷ ಹೆಚ್. ಲಕ್ಷ್ಮಣ್, ರವಿಕಾಂತ, ಗುಲ್ಬರ್ಗದ ಸುಭಾಷ್ ರಾಥೋಡ್, ಶಿವಮೊಗ್ಗದ ಲೋಕೇಶ್ ಈಶ್ವರ, ರಾಯಚೂರು ನಾರಾಯಣ, ತಿಮ್ಮಣ್ಣ, ಅನಿಲ್ ಕುಮಾರ್ ನಾಯ್ಕ, ರಮೇಶ್ ನಾಯ್ಕ, ಗಣೇಶ್‍ನಾಯ್ಕ, ಚನ್ನಯ್ಯನಹಟ್ಟಿ ತಿಪ್ಪೇಸ್ವಾಮಿ, ಗೌನಹಳ್ಳಿ ಗೋವಿಂದಪ್ಪ, ಆರ್. ವಿಶ್ವಸಾಗರ್, ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ್, ಕಾರ್ಮಿಕ ಸಂಘಟನೆಯ ವೈ. ಕುಮಾರ್, ರಾಮಚಂದ್ರಪ್ಪ, ಜಯಶೀಲಮ್ಮ, ಮಲ್ಲೇಶ್‍ನಾಯ್ಕ, ನಂಜಾನಾಯ್ಕ, ಶಿಕ್ಷಕ ಮಂಜುನಾಥ್ ನಾಯ್ಕ, ಭೀಮಾನಾಯ್ಕ ನರೇನಹಳ್ಳಿ, ಶಿವರುದ್ರಸ್ವಾಮಿ, ಬೆಂಗಳೂರಿನ ಹಿರಿಯ ವಕೀಲರಾದ ಶಂಕರಪ್ಪ, ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
