ಗುತ್ತಲ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಗುರಿಯೊಂದಿಗೆ ಹೆಚ್ಚಿನ ಶ್ರಮವಹಿಸಿ ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ವಿಧ್ಯಾಭ್ಯಾಸ ಮಾಡಬೇಕು ಎಂದು ಶಾಸಕ ನೆಹರು ಓಲೇಕಾ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಸಿಲಾಗಿದ್ದ ವಾರ್ಷಿಕೋತ್ಸವ ಹಾಗೂ ನೂತನ ಕಾಲೇಜು ಅಭಿವೃದ್ಧಿ ಸಮಿತಿ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚೀನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಅದಕ್ಕೆ ತಕ್ಕಂತೆ ಪಾಲಕರೂ ಪ್ರೋತ್ಸಾಹಿಸಬೇಕು. ಕಲಿತ ಶಿಕ್ಷಣ ನಿಂತ ನೀರಿನಂತಾಗಬಾರದು ಅದರಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ಮುಂಬರುವ ದಿನಗಳಲ್ಲಿ ಕಾಲೇಜಿಗೆ ಅವಶ್ಯವಿರುವ ಸೌಕರ್ಯವನ್ನು ಒದುಗಿಸುವಂತ ಕೆಲಸವನ್ನು ಮಾಡಲಾಗುವುದು. ಕಾಲೇಜು ಅಭಿವೃದ್ಧಿ ಸಮಿತಿಯವರು ಕೇವಲ ಹೆಸರಿಗೆ ಮಾತ್ರ ಸದಸ್ಯರಾದರೆ ಸಾಲದು ಕಾಲೇಜು ಅಭಿವೃದ್ಧಿ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದರು.
ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಮಾತನಾಡಿ, ಗುತ್ತಲ ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲವಾಗುವಂತೆ ಕಾಲೇಜು ಪ್ರಾರಂಭವಾಗಿರುವುದು ಖುಷಿಯ ವಿಷಯವಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ.
ವಿದ್ಯಾರ್ಥಿಗಳು ಉಪನ್ಯಾಸಕರಿಗೆ ವಿನಯ ಪೂರಕವಾಗಿ ನಡೆಯುತ್ತಾ ಉತ್ತಮ ಶಿಕ್ಷಣ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಕಾಲೇಜಿನ ಕಿರ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ: ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಮರಿಯಾನಿ, ಸದಸ್ಯರಾದ ವಸಂತ ಕಳಸಣ್ಣನವರ, ಮುತ್ತಣ ಯಲಿಗಾರ, ವಿಶಾಲಾಕ್ಷಿ ಕಾಗಿನೆಲ್ಲಿ, ಶಿವಕುಮಾರ ಮರಿಯಾನಿ, ಮಂಜುನಾಥ ಶೀತಾಳ, ಚಮನಸಾಬ ಭಾಗವಾನ. ಪ.ಪಂ ಸದಸ್ಯರಾದ ನಾಗರಾಜ ಏರಿಮನಿ, ರಮೇಶ ಮಠದ, ಅನುಸಿಯಾ ಯರವಿನತಲಿ. ತಾ.ಪಂ ಸದಸ್ಯ ಮಾಲತೇಶ ಬನ್ನಿಮಟ್ಟಿ, ಮುಖಂಡರಾದ ನಿಂಗಪ್ಪ ಮೈಲಾರ, ಮಾಲತೇಶ ಕೋಣನವರ, ಮಲ್ಲಿಕಾರ್ಜುನ ಮರಿಯಾನಿ, ಶ್ರೀಕಾಂತ ತೇಲ್ಕರ, ತುಕಾರಾಮ್ ತೇಲ್ಕರ, ವಿಜಯ ಲಮಾಣಿ, ಹಾಲೇಶ ಲಮಾಣಿ, ರವಿ ಪೂಜಾರ, ಕಾಲೇಜು ಉಪನ್ಯಾಸಕ ಹಾಗೂ ಉಪನ್ಯಸಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








