ಹಾವೇರಿ :
ಕರ್ತವ್ಯ ನಿರತ ಪೊಲೀಸ್‌ರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆಯನ್ನು ನಗರದ ಯುವಕರು ಮೆರದಿದ್ದಾರೆ.ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ರಿಗೆ,ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ನಗರದ ಸಾಯಿ ಸುಜನ್ ಪ್ರೀಂಟರ್ಸ್‌ನ ಸಿಬ್ಬಂದಿಗಳಿಂದ ಊಟದ ವ್ಯವಸ್ಥೆ ಮಾಡಿದ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರಾದ ಸಂಪತ ಮಾಡ್ಯಾಳ,ಕುಮಾರ ಮೆಳ್ಳಿಹಳ್ಳಿ,ಪ್ರಕಾಶ್ ಮುಲಿಮನಿ,ರವಿ,ಗಂಗಾಧರ ಸುಣಗಾರ,ಶಂಕರ ಮುಂಗರವಾಡಿ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ