ಚಿಕ್ಕನಾಯಕನಹಳ್ಳಿ
ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ವರ್ಷ ಎಂದು ತಿಳಿದು ಬಂದಿದ್ದು, ಹಂದನಕೆರೆ-ಹುಚ್ಚನಹಳ್ಳಿ ಸಮೀಪದ ಅರಳಿಮರದ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ಧನಂಜಯ್ ಬಿದ್ದು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದೊಡನೆ ಹಂದನಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಧನಂಜಯ್ ಕೆ.ಇ.ಬಿ ವ್ಯಾನ್ ಡ್ರೈವರ್‍ಯಾಗಿ ಕೆಲಸ ನಿರ್ವಹಿಸುತ್ತಿದ್ದ. ತಂದೆ ವೀರಭದ್ರಯ್ಯ ಸಾವನ್ನಪ್ಪಿದ ನಂತರ ಕುಟುಂಬದ ಜವಾಬ್ದಾರಿ ಇವನದ್ದಾಗಿತ್ತು, ಮೃತನಿಗೆ ತಾಯಿ ಮತ್ತು ಅಕ್ಕ ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








