ನಿಮ್ಮ ಮತ ಅಭಿವೃದ್ದಿಪರವಾಗಿರಲಿ : ಸಚಿವ ರಾಜಶೇಖರ ಪಾಟೀಲ್

ಹೂವಿನಹಡಗಲಿ :

       ನಿಮ್ಮ ಮತ ಅಭಿವೃದ್ದಿಯ ಪರವಾಗಿರಲಿ 2013 ರಿಂದ 2018ರವರೆಗೆ ಆಡಳಿತ ನೀಡಿದಂತಹ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನೇಕ ಬಡವರಪರವಾದ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಗಣಿ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

       ಅವರು ಬಳ್ಳಾರಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ಮತಯಾಚಿಸಿ ತಾಲೂಕಿನ ಕೆ.ಕೆ.ತಾಂಡ, ಮಾನ್ಯರಮಸಲವಾಡ, ಮಿರಾಕೊರ್ನಹಳ್ಳಿ, ಬಸಾಪುರ, ಕೊಮಾರನಹಳ್ಳಿತಾಂಡ ಸೇರಿದಂತೆ ಹಲವೆಡೆ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರು ಹೂವಿನಹಡಗಲಿ ಮೀಸಲು ಕ್ಷೇತ್ರವನ್ನು ಅತ್ಯಂತ ಅಭಿವೃದ್ದಿಗೊಳಿಸಿದ್ದಾರೆ.

      23 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವಂತಹ ಮಹತ್ವದ ಕಾರ್ಯವನ್ನು ಕೈಗೊಂಡು ಅಂತರ್ಜಲ ವೃದ್ದಿಸುವುದರ ಜೊತೆಗೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಭವಣೆಯನ್ನು ನೀಗಿಸುವಂತಹ ಕೆಲಸವನ್ನು ಮಾಡಿದ್ದು, ರಸ್ತೆ, ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಕಣ್ಮುಂದೆ ಕಾಣುತ್ತಿದೆ ಎಂದು ಹೇಳಿದರು.

         ನವಂಬರ್ 3 ರಂದು ನಡೆಯುವ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ವಿ.ಎಸ್.ಉಗ್ರಪ್ಪನವರಿಗೆ ತಾವೆಲ್ಲರೂ ಮತನೀಡುವುದರ ಮೂಲಕ ಬಿಜೆಪಿ ಅಭ್ಯರ್ಥಿ ಜೆ.ಶಾಂತರವರನ್ನು ಸೋಲಿಸಿ, ಅವರಿಗೆ ತಕ್ಕ ಪಾಠಕಲಿಸಬೇಕೆಂದು ಕರೆ ನೀಡಿದರು.

         ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರು ಮಾತನಾಡಿ ಕಾಂಗ್ರೆಸ್ ಪಕ್ಷ ಎಂದಿಗೂ ಕೂಡಾ ದೀನ ದಲಿತರು, ಬಡವರು ಸೇರಿದಂತೆ ಎಲ್ಲಾ ವರ್ಗದ ಅಭಿವೃದ್ದಿಯ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದು, ತಾವೆಲ್ಲರೂ ವಿ.ಎಸ್.ಉಗ್ರಪ್ಪನವರಿಗೆ ಮತ ನೀಡಬೇಕೆಂದು ಹೇಳಿದರು.

         ಇದೇ ಸಂದರ್ಭದಲ್ಲಿ ಕಗ್ಗಲಕಟ್ಟಿತಾಂಡ ಹಾಗೂ ವ್ಯಾಸಮಲ್ಲಾಪುರತಾಂಡದ ಹಲವಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

        ಗ್ರಾ.ಪಂ.ಸದಸ್ಯರಾದ ಡಿಗ್ಯಾನಾಯ್ಕ ಹಾಗೂ ಪುಟ್ಯಾನಾಯ್ಕ, ಓಂಕಾರನಾಯ್ಕ, ಲಕ್ಯಾನಾಯ್ಕ, ಲಕ್ಕಿಬಾಯಿ, ಮುನಿಯಾನಾಯ್ಕ, ಪುರಂದರನಾಯ್ಕ, ಶೇಖರನಾಯ್ಕ, ಕೃಷ್ಣಾನಾಯ್ಕ, ಓಮ್ಯಾನಾಯ್ಕ, ಲಚ್ಯಾನಾಯ್ಕ, ಸ್ವಾಮ್ಯಾನಾಯ್ಕ, ಬಿ.ಎಲ್.ಸೋಮ್ಯಾನಾಯ್ಕ, ಸೇವಾನಾಯ್ಕ, ಸೇರಿದಂತೆ ಹಲವರು ಸಚಿವರಾದ ರಾಜಶೇಖರಪಾಟೀಲ್ ಹಾಗೂ ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

       ಸಂದರ್ಭದಲ್ಲಿ ಹೆಚ್.ಡಿ.ಕೋಟೆ ಶಾಸಕರಾದ ಅನಿಲ್ ಚಿಕ್‍ಮಾದರೂ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗೈ ಅಧ್ಯಕ್ಷರುಗಳಾದ ಎಂ.ಪರಮೇಶ್ವರಪ್ಪ, ಐಗೋಳ್ ಚಿದಾನಂದ, ಪ್ರಚಾರ ಸಮಿತಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್‍ಮೊಹಿದ್ದೀನ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಸಣ್ಣ, ಶ್ರೀಕಾಂತಪ್ಪ, ಡಿಸಿಸಿ ಸದಸ್ಯ ಬಸವನಗೌಡ, ತಾ.ಪಂ.ಸದಸ್ಯೆ ಶ್ವೇತಾ ಲಕ್ಷ್ಮಣನಾಯ್ಕ, ಭೀಮಾನಾಯ್ಕ. ಬಾಲಾಜಿನಾಯ್ಕ, ಸೇರಿದಂತೆ ಹಲವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link