ಮಾನಸಿಕ ಖಿನ್ನತೆಗೆ ಯುವ ಸಮೂಹ ಬಲಿ: ಕಳವಳ

ದಾವಣಗೆರೆ :

         ಮಾನಸಿಕ ಖಿನ್ನತೆ ಕಾಯಿಲೆಯು ಯಾರನ್ನೂ ಬೇಕಾದರೂ ಭಾಧಿಸಬಹುದು ಇದು ಜಗತ್ತಿನ್ನಾದ್ಯಂತ ಹೆಚ್ಚು ವ್ಯಾಪಕವಾಗಿರುವ ದೊಡ್ಡ ರೋಗಸ್ಥಿತಿಯಾಗಿದೆ. ಈ ಮಾರಕ ರೋಗಕ್ಕೆ ಯುವಸಮೂಹವೇ ಹೆಚ್ಚು ಬಲಿಯಾಗುತ್ತಿರುವುದು ಆಘಾತಕಾರಿ ಬೆಳವಣಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಜಿ. ಕುಲಕರ್ಣಿ ಅಂಬಾದಾಸ್ ಕಳವಳ ವ್ಯಕ್ತಪಡಿಸಿದರು.

       ದಾವಣಗೆರೆ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಜಿ.ಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಮಾನಸಿಕ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಖಾಯಿಲೆ ಹದಿಹರೆಯದವರು-ಯೌವ್ವನಾವಸ್ಥೆಯಲ್ಲಿರುವವರನ್ನು ಬೆಂಬಿಡದೆ ಕಾಡುತ್ತಿರುವ ದೊಡ್ಡ ಮಾರಕ ಖಾಯಿಲೆಯಾಗಿ ಕೊಲ್ಲುತ್ತಿರುವುದು ವಿಷಾಧನಿಯ. ಇಂತಹ ವಿಚಾರವಾಗಿ ಯುವಕರಲ್ಲಿ ಜಾಗೃತಿಯನ್ನು ಮೂಡಿಯುವ ಕೆಲಸವಾಗಬೇಕಿದೆ ಎಂದರು.

      ಆಧುನಿಕ ದಿನಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಆದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಎಷ್ಟೇ ಹಣ-ಆಸ್ತಿ ಸಂಪಾದನೆ ಮಾಡಿದರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ ಇದಕ್ಕೆ ಕಾರಣ ಆತ್ಮಸ್ಥೈರ್ಯವಿಲ್ಲದ ಜೀವನ, ಪ್ರಸ್ತುತ ಸಮಾಜದಲ್ಲಿ ಡೋಂಗಿ ಜೋತ್ಯಿಷಿಗಳಿಂದ ಅದೆಷ್ಟೋ ಜನತೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳಿವೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿರುವಂತಹ ಮಾನಸಿಕ ಖಿನ್ನತೆ. ಆದ್ದರಿಂದ ನಾವುಗಳು ಜೀವಿಸುವುದು ಮತ್ತು ಯೋಚಿಸುವುದು ಸಕಾರಾತ್ಮಕವಾಗಿ ಇರಬೇಕು ಆಗ ಯಾವುದೇ ಖಿನ್ನತೆ ನಮ್ಮನ್ನು ಕಾಡುವುದಿಲ್ಲ ಎಂದರು.

       ಹಿರಿಯ ಸಿವಿಲ್ ನ್ಯಾಯಧೀಶ ಕೆಂಗಬಾಲಯ್ಯ ಮಾತನಾಡಿ, ದೇಶದ ಯುವಶಕ್ತಿ ಮಾನಸಿಕವಾಗಿ ಕುಂದುತ್ತಿರುವುದು ಕಾಣಬಹುದಾಗಿದ್ದು, ಅದೆಷ್ಟು ಯುವಕರು ಪ್ರೀತಿ-ಪ್ರೇಮ, ಸೇರಿದಂತೆ ಹಲವಾರು ಕೆಟ್ಟ ಆಲೋಚನೆಗಳಿಂದ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆಲೋಚನೆ ಮಾಡುವಾದಾಗಿ ನಮ್ಮ ಗುರಿ-ಉದ್ದೇಶ ಇವುಗಳನ್ನು ಮಾತ್ರ ನಮಗೆ ಅರಿವು ಇರಬೇಕು. ಆಗ ಯಾವುದೇ ಖಿನ್ನತೆ ನಮ್ಮನ್ನು ಕಾಡುವುದಿಲ್ಲ ಎಂದರು

      ತಾಳ್ಮೆ, ಸಹಿಷ್ಣುತೆಯ ಗುಣವನ್ನು ರೂಢಿಸಿಕೊಂಡಾಗ ಮನಸ್ಸು ಏಕಾಗ್ರತೆ ಪಡೆದುಕೊಳ್ಳುತ್ತದೆ. ಮಾನಸಿಕ ಸಮತೋಲನಕ್ಕೂ ಇದೇ ಕಾರಣವಾಗುತ್ತದೆ. ಮಾನಸಿಕವಾಗಿ ಮನುಷ್ಯ ದೃಡತೆ ಕಾಯ್ದುಕೊಂಡಾಗ ಜೀವನವೂ ಸುಸೂತ್ರವಾಗುತ್ತದೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊ. ವೀರಭ್ರದ್ರಪ್ಪ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಆರುಣ್‍ಕುಮಾರ್, ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಜೆ.ಎಂ. ಸರೋಜಬಾಯಿ, ಬಿ.ಜೆ. ರವಿ, ಜಿಲ್ಲಾ ಮನೋವೈದ್ಯ ಡಾ.ಗಂಗಂ ಸಿದ್ದಾರೆಡ್ಡಿ ಮಾನಸಿಕ ರೋಗದ ಕುರಿತು ಉಪನ್ಯಾಸ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link