ಕುರಿ ಸಾಕಾಣಿಕೆಯಂತಹ ಉದ್ಯಮದಲ್ಲಿ ಯುವಕರು ತೊಡಗಿಕೊಳ್ಳಲಿ : ಎಸ್.ಭೀಮಾನಾಯ್ಕ

ಹಗರಿಬೊಮ್ಮನಹಳ್ಳಿ:

    ಇಂದಿನ ವಿದ್ಯಾವಂತ ಯುವಕರು ಕೇವಲ ಸರ್ಕಾರಿ ಕೆಲಸವನ್ನು ಅವಲಂಬಿಸದೇ ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆಯಂತಹ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದು ರಾಬಕೊ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ ಅಧ್ಕಕ್ಷ ಹಾಗೂ ಜನಪ್ರೀಯ ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

     ತಾಲೂಕಿನ ಉಲುವತ್ತಿ ಬಳಿ ಶ್ರೀ ಮಂಜುನಾಥ ಫಾರಂನಲ್ಲಿ ಶ್ರೀ ಮಂಜುನಾಥ ಕುರಿ ಸಾಕಾಣಿಕೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ ಕುರಿಸಾಕಾಣಿಕೆ ಮಾಡುವುದು ಹುಡುಗಾಟವಲ್ಲ ಕುರಿ ಮನೆಗಳನ್ನು ಸ್ವಂತ ಮಗುವಿಗಿಂತ ಹೆಚ್ಚಿನ ಕಾಳಜಿಯಿಂದ ಕಾಲಾನುಗುಣಕ್ಕೆ ತಕ್ಕಂತೆ ಸಾಕಿ ಸಲುಹಿ ಬೆಳೆಸಬೇಕಿದೆ. ನಾನು ಶಾಕನಾದಾಗಿನಿಂದಲು ಇದೇ ಮೊದಲಬಾರಿ ಕುರಿ ಸಾಕಾಣಿಕೆ ಕೇಂದ್ರವನ್ನು ಉದ್ಘಾಟಿಸುತ್ತಿದ್ದೇನೆ.

      ಇದು ನನಗೆ ಸಂತಸದ ವಿಷಯವಾಗಿದ್ದು ತಾಲೂಕಿನಲ್ಲಿಯೇ ಮೊದಲ ಬಾರಿಗೆ ಈ ಕುರಿ ಸಾಕಾಣಿಕೆ ಕೇಂದ್ರವನ್ನು ಆರಂಭಿಸಿರುವ ತಾ.ಪಂ ಸದಸ್ಯ ಅನಿಲ್ ಕುಮಾರ್ ಜಾಣಾರವರಿಗೆ ಈ ಉದ್ಯಮದಿಂದ ಇನ್ನಷ್ಟು ಯಶಸ್ವು ಸಿಗಲಿ. ಈ ಭಾಗದಲ್ಲಿ ಹೈನುಗಾರಿಕೆಯಲ್ಲಿ ಸಾಕಷ್ಟು ಜನ ತೊಡಗಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ವಿವಿಧ ತಳಿಯ ಆಕಳು ಹಾಗೂ ಎಮ್ಮೆಗಳನ್ನು ತಂದು ಹಾಲಿನ ಡೈರಿಗಳನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈ ಕುರಿಸಾಕಾಣಿಕೆಯಲ್ಲೂ ಕೂಡ ವಿವಿಧ ತಳಿಗಳಿದ್ದು ಅವುಗಳನ್ನು ಸಾಕುವ ಮೂಲಕ ಕುರಿಉಣ್ಣೆ ತಯಾರಿಕೆಯನ್ನು ವಿಸ್ತರಿಸಲಿ. ಮುಂದಿನ ದಿನಗಳಲ್ಲಿ ಅನಿಲ್ ರವರು ವಿವಿಧ ತಳಿಯ ಹಸುಗಳನ್ನು ಸಾಕುವ ಮೂಲಕ ಹಾಲಿನ ಡೈರಿ ಮಾಡುವಂತಾಗಲಿ. ನಾವೂ ಸಹ ಇದೇ ಜನವರಿಯಲ್ಲಿ ನಮ್ಮ ತೋಟದಲ್ಲಿ 500 ವಿವಿಧ ತಳಿಯ ಹಸುಗಳನ್ನು ತಂದು ಹಾಲಿನ ಡೈರಿಯನ್ನು ಮಾಡುತ್ತೇವೆ ಎಂದರು.

     ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ಅನಿಲ್ ರವರು ತಮ್ಮ ಸ್ವಂತ ಹಣದಿಂದ ಈ ಕುರಿ ಫಾರಂನ್ನು ತೆರೆದಿದ್ದಾರೆ. ಈಗ ಸದ್ಯಕ್ಕೆ 175 ಕುರಿಗಳಿದ್ದು ಇನ್ನು ಕೆಲವೇ ದಿನಗಳಲ್ಲಿ 325 ಕುರಿಗಳು ಈ ಫಾರಂಗೆ ಬರಲಿವೆ ಒಟ್ಟು ಇಲ್ಲಿ 500 ಕುರಿಗಳನ್ನು ಸಾಕಲಾಗುತ್ತದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಂಜುನಾಥ ಕುರಿ ಸಾಕಾಣಿಕ ಕೇಂದ್ರ ಮ್ಯಾನೇಜಿಂಗ್ ಪಾರ್ಟರ್ ಅನಿಲ್ ಕುಮಾರ್ ಮಾತನಾಡಿ ಇದುವರೆಗೂ ತಾಲೂಕಿನಲ್ಲಿ ಯಾರೂ ಈ ಕುರಿ ಸಾಕಾಣಿಕೆ ಉದ್ಯಮಕ್ಕೆ ಕೈ ಹಾಕಿಲ್ಲ ನಾವು ಪ್ರಥಮಬಾರಿ ಮಂಜುನಾಥ ಡೆವಲಪರ್ಸ್ ಸಹಯೋಗದೊಂದಿಗೆ ಈ ಕುರಿ ಸಾಕಾಣಿಕೆ ಕೇಂದ್ರವನ್ನು ಆರಂಭಿಸಿದ್ದೇವೆ ಎಂದರು.

    ಸುಕ್ಷೇತ್ರ ನಂದೀಪುರದ ಮಹೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಯುವಕರು ಸ್ವಾವಲಂಬಿಗಳಾಗಿ ಸ್ವಂತ ಉದ್ಯೋಗಗಳನ್ನು ಮಾಡುವ ನಿಟ್ಟಿನತ್ತ ಚಿಂತನೆ ನಡೆಸಬೇಕು, ಕುಕ್ಕಟ, ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆಯಂತಹ ಉದ್ಯಮಗಳು ಈ ಭಾಗದಲ್ಲಿ ಇನ್ನಷ್ಟು ಹೆಚ್ಚಾಗಿ ಬೆಳೆಯಲಿ ಸರ್ಕಾರದಿಂದ ಇಲ್ಲಿ ಕುರಿ ಉಣ್ಣೆ ಸಂಸ್ಕರಣಾ ಘಟವನ್ನು ಶಾಸಕರು ತರಬೇಕು ಎಂದರು. ಇದೇ ವೇಳೆ ಮುಟುಗನಹಳ್ಳಿಯ ಮೂಕಬಸಪ್ಪ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಕುರಿ ಹಟ್ಟಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉತ್ತಂಗಿಮಠದ ಸೋಮಶಂಕರ ಸ್ವಾಮೀಜಿ ಹಾಗೂ ಮಹರಾಷ್ಟ್ರದ ರುದ್ರ ಪಶುಪತಿ ಸ್ವಾಮೀಜಿ ವಹಿಸಿದ್ದರು. ಕಡಲಬಾಳಿನ ಗವಿಸಿದ್ದಯ್ಯ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿ ನಿರ್ವಹಿಸಿದರು.

      ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ|| ವಿನಯಸಿಂಹ, ಆಡಿಟರ್ ಅಕ್ಕಿ ಬಸವರಾಜ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಹಿರಿಯ ಮುಖಂಡರಾದ ಹೆಗ್ಡಾಳ್ ರಾಮಣ್ಣ, ಪವಾಡಿ ಹನುಮಂತಪ್ಪ, ಎಂ.ಪ್ರಭಾಕರ, ಬಾಬುವಲಿ, ಜಂದಿಸಾಹೇಬ್, ಹುಡೇದ ಗುರುಬಸವರಾಜ, ಕನ್ನಿಹಳ್ಳಿ ಚಂದ್ರಶೇಖರ, ವಿರುಪಾಕ್ಷಪ್ಪ, ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ|| ದೇವಗಿರಿ, ಹೆಗ್ಗಪ್ಪ, ಭರಮಪ್ಪ, ಜಾಣಾ ಮೂರ್ತಿ, ವೇಣುಗೋಪಾಲ, ಗುಂಡ್ರ ಹನುಮಂತ, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap