ಚಿತ್ರದುರ್ಗ;
ದೇಶದಲ್ಲಿ ಯುವ ಸಂಪತ್ತು ಹೆಚ್ಚಾಗಿದೆ, ಆದರ ಸದ್ಬಳಕೆಯಾಗಬೇಕಿದೆ ಎಂದು ಶಾಸಕ ಜಿ. ಎಚ್.ತಿಪ್ಪಾರೆಡ್ಡಿ ಯುವಜನತೆಗೆ ಕಿವಿ ಮಾತು ಹೇಳಿದರು.
ಚಿತ್ರದುರ್ಗ-ತುಮಕೂರು ಜಿಲ್ಲೆಗಳನ್ನೊಳಗೊಂಡಂತೆ ಫೆ. 16 ಮತ್ತು 17 ರಂದು ಎರಡು ದಿನಗಳ ಕಾಲ ತುಮಕೂರಿನಲ್ಲಿ ಆಯೋಜಿಸಲಾಗಿರುವ ಬೃಹತ್ ಉದ್ಯೋಗ ಮೇಳದ ಅಂಗವಾಗಿ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಯುವ ಸಂಪತ್ತು ಹೇರಳವಾಗಿದೆ, ನಮ್ಮ ದೇಶದ ಯುವಜನತೆಯನ್ನು ನೋಡಿ ಅಮೆರಿಕ ದೇಶ ಹೆದರುತ್ತಿದೆ, ಇದು ನಮ್ಮ ದೇಶದ ಯುವಜನತೆಯಲ್ಲಿ ಇರುವಂತ ಪಾಂಡಿತ್ಯಕ್ಕೆ ಸಿಗುವ ಮನ್ನಣೆಯಾಗಿದೆ, ದೇಶದಲ್ಲಿ ಈ ರೀತಿಯಾದ ಹಲವಾರು ಉದ್ಯೋಗ ಮೇಳಗಳು ನಡೆಯುತ್ತಿದೆ ಇದರಲ್ಲಿ ಎಲ್ಲರು ಭಾಗವಹಿಸಬಹುದಾಗಿದೆ ಆದರೆ ಎಲ್ಲರಿಗೂ ಸಹಾ ಕೆಲಸ ಸಿಗುತ್ತದೆ ಎಂಬ ನಂಬಿಕೆ ಇಲ್ಲ ಆದರೆ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು
ದೇಶವನ್ನು ಕಳೆದ 60 ವರ್ಷಗಳಿಂದ ಆಳ್ವಿಕೆ ನಡೆಸಿದ ಪಕ್ಷಗಳು ಯಾವುದೇ ಅಭೀವೃದ್ದಿಯನ್ನು ಮಾಡದೇ ಅವರು ಅಭೀವೃದ್ದಿಯಾಗಿದೆ, ಆದರೆ ಕಳೆದ 4 ವರ್ಷಗಳಿಂದ ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಂದ ಕೊಡಲೇ ನಿರುದ್ಯೋಗವನ್ನು ಹೋಗಲಾಡಿಸಲಾಗುತ್ತದೇಯೇ ಎಂದು ಪ್ರಶ್ನೆ ಮಾಡಿದ ಶಾಸಕರು ದೇಶದಲ್ಲಿ ವಿವಿಧೆಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತದೆ ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಂತಾಗಿದೆ, ಸರ್ಕಾರ ಕೆಲಸವನ್ನು ಕಾಯದೇ ಖಾಸಗಿಯಾಗಿ ಪ್ರಯತ್ನ ಮಾಡಿ ಅದು ಸಾಧ್ಯವಾಗದಿದ್ದರೆ ಸ್ವಯಂ ಆಗಿ ಸಾಲವನ್ನು ಪಡೆಯುವುದರ ಮೂಲಕ ಕೆಲಸವನ್ನು ಮಾಡುವಂತೆ ಹೇಳಿದರು.
ದೇಶದಲ್ಲಿ ಇರುವ ನಿರುದ್ಯೋಗಿಗಳಿಗೆ ಸರ್ಕಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಆದರೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಾಲವನ್ನು ನೀಡುವುದರ ಮೂಲಕ ಅವರು ಸ್ವಯಂ ಉದ್ಯೋಗಿಗಳಾಗಲು ನೆರವಾಗಿದ್ದಾರೆ. ದೇಶದಲ್ಲಿ ಕಳೆದ 4 ವರ್ಷಗಳಲ್ಲಿ ಲಕ್ಷಾಂತರ ಆಟೋಗಳು ಮತ್ತು ಟಿಪ್ಪರ್‍ಗಳು, ಜೆಸಿಬಿಗಳು ಮಾರಾಟವಾಗಿದೆ, ಇದು ಮಾರಾಟವಾದರೆ ಇದನ್ನು ಹಾಗೇಯೇ ಇಡುವ ಹಾಗಿ ಇಲ್ಲ ಇದರ ಉಪಯೋಗ ವಾಗಬೇಕು ಆಗ ಅಕ್ಷರ ಕಲಿಯದಿದ್ದರೆಗೆ ಕೌಶಲ್ಯವನ್ನು ಹೊಂದಿದವರಿಗೆ ಉದ್ಯೋಗ ಸಿಕ್ಕುತ್ತದೆ ಇದರಿಂದ ನಿರಿದ್ಯೋಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ ಉದ್ಯೋಗ ಮೇಳದಲ್ಲಿ ಸುಮಾರು 100 ಕ್ಕೂ ಹೆಚ್ಚಿನ ಉದ್ಯೊಗದಾತರು, ಕಂಪನಿಗಳು ಭಾಗವಹಿಸಿ, ಅವರ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಉದ್ಯೋಗ ಮೇಳದ ಎಲ್ಲ ಚಟುವಟಿಕೆಗಳು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಅಭ್ಯರ್ಥಿಗಳು ಯಾರಿಗೂ ಹಣ ಪಾವತಿಸುವ ಅಗತ್ಯವಿಲ್ಲ ಎಂದರು.
ಉದ್ಯೋಗ ಮೇಳದಲ್ಲಿ 7 ನೇ ತರಗತಿ ಪಾಸ್, ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್, ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ ಹಾಗೂ ಅಪ್ರೆಂಟಿಸ್ ತರಬೇತಿ, ಬಿ.ಇ, ಡಿಪ್ಲೋಮಾ ಎಲ್ಲಾ ಟ್ರೇಡ್‍ನವರು, ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋಸ್ ಪಾಸಾದ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ವೆಬ್ ಸೈಟ್‍ನಲ್ಲಿ ಫೆ. 14 ರ ಒಳಗಾಗಿ ಹೆಸರು ನೊಂದಾಯಿಸಿ, ನೇರ ಉದ್ಯೋಗ ಮೇಳದಲ್ಲಿ ಹಾಜರಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದರು.