ಹಾವೇರಿ :
ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಯುಗಾದಿ ಹಬ್ಬವನ್ನು ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.
ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಭಾರತೀಯ ಜನತಾ ಪಕ್ಷ ಸ್ಥಾಪನೆಯಾಗಿ 38 ವರ್ಷಗಳನ್ನು ಪೂರೈಸಿದೆ. ಭಾರತದಲ್ಲಿ ಸ್ವತಂತ್ರದ ನಂತರ ಸ್ಥಾಪನೆಯಾದ ಯಾವುದೇ ಪಕ್ಷವು ಅತ್ಯಂತ ಕಡೆಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆದಿಲ.್ಲ ಆದರೆ ಭಾಜಪಾ ಇಂದು ವಿಶ್ವದ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಅಟಲ್ ಬಿಹಾರಿ ವಾಜೇಪೆ ಮತ್ತು ನರೇಂದ್ರ ಮೋದಿಯಂತಹ ಅಗ್ರ ಮಾನ್ಯ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟತಂಹ ಕಿರ್ತಿ ನಮ್ಮ ಪಕ್ಷಕ್ಕೆ ಸಲ್ಲುತ್ತದೆ. ಇಂದಿನ ಯುವ ಜನಾಂಗ ವಿದೇಶಿಯ ಹೊಸ ವರ್ಷದ ಆಚರಣೆಯನ್ನು ಸಂಭ್ರಮದಿಂದ ಆಚರಿಸುವ ಬದಲು ಭಾರತೀಯರ ಹೊಸವರ್ಷವಾದ ಯುಗಾದಿಯನ್ನು ಸಂಪ್ರದಾಯ ಬದ್ದವಾಗಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಜಿಲ್ಲಾ ಪ್ರಧಾನಕಾರ್ಯದರ್ಶಿಯಾದ ಸಿದ್ದರಾಜ ಕಲಕೋಟಿಯವರು ಮಾತನಾಡಿ ನಾವೆಲ್ಲರೂ ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು.ಭಾಜಪಾ ಸ್ಥಾಪನೆಯಾಗಿ 38 ವರ್ಷಗಳಲ್ಲಿ ಅಪಾರವಾದ ಜನಬೆಂಬಲವನ್ನು ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಪ್ರಶಾಂತ ಗಾಣಗೇರ, ಮಲ್ಲಿಕಾರ್ಜುನ ಕಟ್ಟಿಮನಿ, ವಿವೇಕಾನಂದ ಇಂಗಳಗಿ, ಗಣೇಶ ಮಾವೂರಕರ, ಗಿರೀಶ ಶೆಟ್ಟರ, ಮಲ್ಲೇಶ ದೇವಿಹೊಸೂರ, ಮಂಜುನಾಥ ಮಠದ, ಪ್ರದೀಪ ಗೌಡರ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
