ಬೆಂಗಳೂರು
ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕೆಂದು ಸಚಿವ ಜಮೀರ್ಅಹಮದ್ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಅವರಪಕ್ಷದ ನಾಯಕರೇ ಸೇರಿ ಅಲ್ಪಸಂಖ್ಯಾತರ ವಕ್ಫ್ಆಸ್ತಿಯನ್ನು ಲೂಟಿ ಹೊಡೆದು ವೈಯಕ್ತಿಕವಾಗಿ ಅವರೆಲ್ಲರೂಇಂದು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 3 ವೈದ್ಯಕೀಯ ಕಾಲೇಜುಗಳು, 12 ಎಂಜಿನಿಯರಿಂಗ್ಕಾಲೇಜುಗಳು ಹಾಗೂ 100ಕ್ಕೂ ಅಧಿಕ ವೃತ್ತಿ ಶಿಕ್ಷಣಕಾಲೇಜುಗಳಿದ್ದು, ಅವೆಲ್ಲವೂ ಅಲ್ಪಸಂಖ್ಯಾತರ ವಕ್ಫ್ಅಧೀನಕ್ಕೆ ಬಂದು ಬಡ ಮುಸಲ್ಮಾನರಿಗೆ ಉಚಿತ ಶಿಕ್ಷಣಸಿಗುವಂತೆ ಮಾಡಬೇಕಾಗಿದ್ದ ಕಾಂಗ್ರೆಸ್ ನಾಯಕರು ತಮ್ಮಸ್ವಂತ ಆಸ್ತಿ ಮಾಡಿಕೊಂಡಿರುವುದು ಜಮೀರ್ ಅಹಮದ್ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲಿ ಪಂಚತಾರಾ ಹೋಟೇಲ್‌ಗಳು, ವಾಣಿಜ್ಯಸಂಕೀರ್ಣಗಳು ಇವೆಲ್ಲವೂ ಅನೇಕ ಕಡೆಗಳಲ್ಲಿ ವಕ್ಫ್‌ಗೆಸೇರಿದ ಜಾಗಗಳಲ್ಲಿದ್ದು ಇವುಗಳ ಮೌಲ್ಯವೇ 2.30 ಲಕ್ಷಕೋಟಿ ರೂ.ಗಳು ಎಂದು ತಾವು ಸಲ್ಲಿಸಿದ ವರದಿಯಲ್ಲಿದಾಖಲೆ ಸಹಿತ ನಮೂದಿಸಲಾಗಿದೆ. ವಿಧಾನ ಪರಿಷತ್‌ನಲ್ಲಿಈ ವರದಿ ಮಂಡನೆಗೆ ಆದೇಶವಾಗಿತ್ತು. ಹೈಕೋರ್ಟ್ಕೂಡಾ 2 ಬಾರಿ ಈ ಸಂಬಂಧ ಆದೇಶ ನೀಡಿದೆ. ಆದರೆ ಈವರದಿ ಮಂಡನೆ ಮಾಡದೇ ಸುಪ್ರೀಂ ಕೋರ್ಟ್‌ಗೆ ರಾಜ್ಯಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಅದಿನ್ನೂಅಂಗೀಕಾರವಾಗಿಲ್ಲ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ವಕ್ಫ್ ಆಸ್ತಿ ವಿಷಯದಲ್ಲಿ ಇಡೀದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಿಧೇಯಕಗಳನ್ನುಜಾರಿಗೊಳಿಸಿದ್ದು ಬಿಜೆಪಿ ಆಡಳಿತಾವಧಿಯಲ್ಲಿ ಎನ್ನುವುದುಗಮನಾರ್ಹ. 1998 ಸುಪ್ರೀಂ ಕೋರ್ಟ್ ತೀರ್ಪಿನಅನುಸಾರ ವಕ್ಫ್ ಆಸ್ತಿ ಎಂದು ಒಮ್ಮೆ ಘೋಷಣೆಯಾದರೆಅದು ಎಂದೆಂದಿಗೂ ವಕ್ಫ್ ಆಸ್ತಿಯಾಗಿಯೇಉಳಿಯಬೇಕು. ಬೇರೆಯವರ ಸ್ವಾಧೀನದಲ್ಲಿದ್ದರೂ ವಾಪಸ್ ವಕ್ಫ್‌ಗೆ ಸೇರಲೇಬೇಕು. ಅದರಂತೆ ಬಿಜೆಪಿ ಸರ್ಕಾರಅಲ್ಪಸಂಖ್ಯಾತರಿಗೆ ವಕ್ಫ್ ಆಸ್ತಿಯನ್ನು ವಾಪಸ್ ತರಲುನ್ಯಾಯಲಯದಲಿ ವ್ಯಾಜ್ಯ ಹೂಡದೇ, ಕಾರ್ಯಪಡೆಮೂಲಕ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯವ ಸಲುವಾಗಿಕಾನೂನು ರೂಪಿಸಿದೆ ಎಂದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಜಮೀರ್ ಅಹಮ್ಮದ್ ಅವರಿಗೆಅಲ್ಪಸಂಖ್ಯಾತರಿಗೆ ಮತ ನೀಡುವಂತೆ ಕೇಳುವ ಯಾವನೈತಿಕತೆಯೂ ಇಲ್ಲ. ರಾಜ್ಯದಲ್ಲಿ ಅವರದೇ (ಕಾಂಗ್ರೆಸ್-ಜೆಡಿಎಸ್) ಸಮ್ಮಿಶ್ರ ಸರ್ಕಾರವಿರುವುದರಿಂದ, ವಕ್ಫ್ಆಸ್ತಿಯನ್ನು ಹಿಂದಕ್ಕೆ ಪಡೆದು ಅಲ್ಪಸಂಖ್ಯಾತರ ಮತಕೇಳಲಿ. ಅದಿಲ್ಲದೇ ಕಾಂಗ್ರೆಸ್ ವಂಚನೆಯನ್ನುಅಲ್ಪಸಂಖ್ಯಾತರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.