ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

ದಾವಣಗೆರೆ :

        ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಮಂಗಳವಾರ ಸಂಜೆ ನಗರದ ನಿಟ್ಟುವಳ್ಳಿಯ ದುರ್ಗಾಂಭಿಕ ದೇವಸ್ಥಾನದ ಬಳಿಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್‍ನ ಎನ್‍ಎಸ್‍ಎಸ್ ಘಟಕ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಕಡ್ಡಾಯ ಮತದಾನದ ಕುರಿತು ಜನ ಜಾಗೃತಿ ಮೂಡಿಸಿದರು.

        ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾದ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕೆಂದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ವಿವಿಧ ಮತ ಜಾಗೃತಿಯ ಹಾಡುಗಳನ್ನು ಹಾಡುವುದರ ಮೂಲಕ ಜನರನ್ನು ಸೆಳೆದರು. ಅಲ್ಲದೇ ದೇವಸ್ಥಾನ ಮುಂಭಾಗದಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ಮತದಾನದ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು.

         ಈ ಸಂದರ್ಭದಲ್ಲಿ ಲೀಡ್ ಕಾಲೇಜ್ ನೊಡೆಲ್ ಅಧಿಕಾರಿ ಡಾ. ಎಸ್ ಮಂಜಪ್ಪ, ಯುಬಿಡಿಟಿ ಎನ್‍ಎಸ್‍ಎಸ್ ಘಟಕಾಧಿಕಾರಿ ಡಾ. ಸುರೇಶ್, ಉಪನ್ಯಾಸಕರಾದ ದಿವಾಕರ್, ಡಾ, ಪ್ರಸನ್ನಕುಮಾರ್, ಕುಬೇರಪ್ಪ ಸೇರಿದಂತೆ ಯುಬಿಡಿಟಿ ಎನ್‍ಎಸ್‍ಎಸ್ ಘಟಕದ ಸ್ವಯಂ ಸೇವಕರು ಮತ್ತು ನಿಟ್ಟುವಳ್ಳಿಯ ನಿವಾಸಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap