ರಸ್ತೆ ಅಗಲೀಕರಣ ನೆಪದಲ್ಲಿ ಸಾಲು ಮರಗಳನ್ನು ಕಡಿಯುವುದು ಬೇಡ:-ಡಾ||ಸುರೇಶ್

ಹಗರಿಬೊಮ್ಮನಹಳ್ಳಿ:

    ರಸ್ತೆ ಅಗಲೀಕರಣ ನೆಪದಲ್ಲಿ ನೆರಳನ್ನು ನೀಡುವ ಸಾಲು ಮರಗಳನ್ನು ಕಡಿಯುವುದು ಬೇಡವೆಂದು ಪುರಸಭೆ ಸದಸ್ಯ ಡಾ||ಸುರೇಶ್ ಅವರು ಅಭಿಪ್ರಾಯ ಪಟ್ಟರು.

    ಪಟ್ಟಣದ ರಾಮನಗರದ ಕೂಡ್ಲಿಗಿ ವೃತ್ತದಲ್ಲಿ ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಟ್ಟೂರು ರಸ್ತೆಯಿಂದ ಕೂಡ್ಲಿಗಿ ವೃತ್ತದ ಮೂಲಕ ಸಾಗಿ ರಾಮನಗರದದ ಬಸ್‍ತಂಗು ದಾಣದವರೆಗೂ ಪುರಸಭೆಯಿಂದ ನಡೆಯುತ್ತಿರುವ ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ಅಗಲೀಕರಣಕ್ಕೆ ರೂಪರೇಷಗಳು ತಯಾರಾಗಿದ್ದು, ಕೂಡ್ಲಿಗಿ ವೃತ್ತದಿಂದ ಹೊರಡುವ ರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸೊಂಪಾಗಿ ಬೆಳೆದ ಮರಗಳು ಈ ಯೋಜನೆಯಿಂದ ಧರೆಗುರುಳುತ್ತವೆ.

     ಇದು ತುಂಭ ಅನ್ಯಾಯವಾಗುತ್ತಿದ್ದು, ಪರಿಸರ ಉಳಿಸಿ ಅಭಿವೃದ್ಧಿಗೆ ಮುಂದಾಗಿ ಎಂದರು.ಛೇಂಬರ್ ಆಪ್ ಕಾಮರ್ಸ್ ಕಾಯದರ್ಶಿಯಾದ ಗಿರೀಶ್ ಮಾತನಾಡಿ, ಪರಿಸರ ನಾಶವಾಗಿ ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಭಾರಿ ಅನಾಹುತವಾಗಿರುವುದು ಇನ್ನು ಮರೆಯುವ ಮುನ್ನವೇ ಇಲ್ಲಿ ಮರಗಳ ಮಾರಣಹೋಮವಾಗುತ್ತದೆ ಎಂದರೆ ದುರಂತ. ಆದ್ದರಿಂದ ಈ ಕೂಡಲೆ ಮರಗಳನ್ನು ಕಡಿಯುವುದು ಬಿಟ್ಟು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ತಿಳಿಸಿದರು.

       ಜೆಸಿ ಅಧ್ಯಕ್ಷ ಅಶೋಕ ಉಪ್ಪಾರ್, ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಘದ ಸಂಚಾಲಕ ಪಕ್ಕೀರಪ್ಪ, ಎಸ್.ಎಫ್.ಐನ ಜಯಸೂರ್ಯ ಮಾತನಾಡಿದರು.

       ನಂತರ ಅರಣ್ಯ ಇಲಾಖೆಯ ಅಧಿಕಾರಿ ರವಿನಾಯ್ಕ್ ಹಾಗೂ ತಾಲೂಕು ಕಚೇರಿಯ ಶಿರಸ್ಥಾದಾರರಾದ ಶಿವಕುಮಾರ್‍ಗೆ ಮನವಿಪತ್ರ ಸಲ್ಲಿಸಿದರು. ವಿಷಯ ಪುರಸಭೆಗೆ ಸಂಬಂಧಿಸಿದ್ದೇ ಆಗಿದ್ದರೂ ಪುರಸಭೆ ಅಧಿಕಾರಿಗಳಾಗಲಿ, ಸಂಬಂಧಿಸಿದವರಾಗಲಿ ಇತ್ತ ಸುಳಿಯಲೇ ಇಲ್ಲ, ಕರೆದರೂ ಬರಲಿಲ್ಲವೆಂದು ಪ್ರತಿಭಟನೆಯ ಸಂಘಟಕರು ಆರೋಪಿಸಿದರು.

       ಅವಿನಾಶ್, ಸಂದೀಪ್ ಶಿವಮೊಗ್ಗ, ಸಂಚಿ ಶಿವಕುಮಾರ್, ಕರವೇ ಸಂಘದ ಅರ್ಧಯಕ್ಷ ಭರಮಜ್ಜ, ಚಿತ್ರಕಲಾ ಶಿಕ್ಷಕ ಆನಂದ ಕಡ್ಲಿ, ವಕೀಲರ ಸಂಘದ ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್, ವಕೀಲ ಕೊಟ್ರೇಶ್ ಶೆಟ್ಟರ್, ಮುಖಂಡರಾದ ಬೆಲ್ಲಕೊಂಡಮ್ ರಮೇಶ್, ಬಿ.ಕೃಷ್ಣ, ಅಮೃತ್ ಛಟ್ರಿಕ್, ನಾಗನಗೌಡ, ಗ್ರೀನ್ ಎಚ್.ಬಿ.ಎಚ್, ಡಾ.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಘ, ಎಸ್.ಎಫ್.ಐ, ಎಬಿವಿಪಿ, ಛೇಂಬರ್ ಆಪ್ ಕಾಮರ್ಸ್ ವಕೀಲರ ಸಂಘ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು. ಎಲ್ಲದಕ್ಕಿಂತಲೂ ಹೆಚ್ಚಾಗಿ ಇದೇ ವೃತ್ತದಲ್ಲಿ ನಡೆಯುತ್ತಿದ್ದ ಕೋಚಿಂಗ್ ಸೆಂಟರ್‍ನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

        ಅರಣ್ಯಾಧಿಕಾರಿ ರವಿನಾಯ್ಕ್ ಮನವಿ ಸ್ವೀಕರಿಸಿ, ಸರ್ಕಾರದಿಂದ ಅಭಿವೃದ್ಧಿ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಏನುಮಾಡಲು ಸಾಧ್ಯವಿಲ್ಲ. ಈಗ ತಾತ್ಕಲಿಕವಾಗಿ ತಡೆಯಬಹುದು ಅದು ಬೇಸಿಗೆ ಮುಗಿಯುವವರೆಗೂ ಮಾತ್ರ ಎಂದು ಸ್ಪಷ್ಟಪಡಿಸಿದರು.
ವಕೀಲ ಚಂದ್ರಶೇಖರ್ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link