ಸ್ವಚ್ಛತೆ ಮರೀಚಿಕೆ, ಹಂದಿ-ನಾಯಿಗಳ ಹಾವಳಿ

ದಾವಣಗೆರೆ:

       ಪಾಲಿಕೆ ವ್ಯಾಪ್ತಿಯ ಮೆಹಾಬೂಬ್ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಹಾಗೂ ಕೆಲ ಪ್ರದೇಶಗಳು ಬಿಡಾಡಿ ದನ, ಹಂದಿ, ನಾಯಿಗಳ ವಾಸ ಸ್ಥಾನವಾಗಿವೆ ಎಂದು ನಾಗರೀಕ ಸೈಯದ್ ನಜೀರ್ ಆರೋಪಿಸಿದ್ದಾರೆ.

      ವಿವಿಧೆಡೆಗಳಲ್ಲಿ ಕಸ ಬಿದ್ದಿರುವ ಕಾರಣ ಹಾಗೂ ಬಿಡಾಡಿ ದನ, ಹಂದಿ, ನಾಯಿಗಳ ಉಪಟಳದಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಅಲ್ಲದೆ, ಅನಾರೋಗ್ಯಕ್ಕೆ ತುತ್ತಾಗಿ, ಹಾಸಿಗೆ ಹಿಡಿದಿರುವ ಕಾರಣ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಆಸ್ಪತ್ರೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

         ನಗರದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿವೆ. ಹೀಗಾಗಿ ಮಳೆ ನೀರು ಹಾಗೂ ಕೊಳಚೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವುದಿಲ್ಲ. ಹೀಗಾಗಿ ನಿಂತಲ್ಲೇ ಕೊಳಚೆ ನೀರು ನಿಂತಿರುವುದರಿಂದ ದುರ್ವಾಸನೆ ಹರಡುತ್ತಿದೆ. ಅಲ್ಲದೆ, ಹಂದಿಗಳ ದಾಳಿಗೆ ಒಳಗಾಗಿ ಮಕ್ಕಳು ಗಾಯಾಳುಗಳಾಗಿರುವ ಉದಾಹರಣೆ ಸಾಕಷ್ಟಿವೆ. ಈ ಸಮಸ್ಯೆಗಳ ವಿರುದ್ಧ ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಪಾಲಿಕೆ ಸ್ಪಿಂದಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಸದಸ್ಯರು ಅಧಿಕಾರಿಗಳೆಡೆಗೆ, ಅಧಿಕಾರಿಗಳು ಸದಸ್ಯರ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ತಕ್ಷಣವೇ ಮಹಾನಗರ ಪಾಲಿಕೆ ಎಚ್ಚೆತ್ತು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೈಯದ್ ನಜೀರ್ ಪ್ರಕಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link