ಹಾವೇರಿ :
ಶೋಷಿತರಿಗೆ ಸಾಮಾಜಿಕ ನ್ಯಾಯ ನೀಡಲು ಸಂವಿಧಾನ ಬದ್ದವಾಗಿ ರಾಜ್ಯ ಸರ್ಕಾರ ತಂದಿದ್ದ ಶಾಸನ ಬದ್ದವಾಗಿ ರೂಪಿಸಿದ ಕಾಯ್ದೆಗಳ ವಿರುದ್ಧ- ಸುಪ್ರೀಂ ಕೋರ್ಟ ನೀಡಿರುವ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧ ಮುಂಭಾಗ ಡಿಸೆಂಬರ್ 14 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಸಮಾವೇಶದ ಸಾನಿಧ್ಯವನ್ನು ಚಿತ್ರದುರ್ಗ ಮುರುಘಾಮಠದ ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಮಾಜಿ ಸಚಿವ, ಹಾಲಿ ಶಾಸಕ ಸತೀಶ ಜಾರಕಿಹೊಳಿ ಉದ್ಘಾಟಿಸುವರು.ಡಿಎಸ್‍ಎಸ್ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ ಅಧ್ಯಕ್ಷತೆವಹಿಸುವರು. ಗೌರವಾನ್ವಿತರಾದ ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ ಖರ್ಗೆ.ವಿಧಾನ ಪರಿಷತ್ ಸದಸ್ಯರಾದ ಆರ್‍ಬಿ ತಿಮ್ಮಾಪೂರ.
ಅಹಿಂದ ಸ್ಥಾಪಕ ಅಧ್ಯಕ್ಷ ಕೆ ಮುಕುಡಪ್ಪ.ಪ್ರಗತಿಪರ ಚಿಂತಕ ಎಚ್.ಎಂ ವಿಶ್ವನಾಥ ಸೇರಿದಂತೆ ಇತರ ಜನಪ್ರತಿನಿಧಿಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.ಈ ಬೃಹತ್ ಸಮಾವೇಶಕ್ಕೆ ಹಾವೇರಿ ಜಿಲ್ಲೆಯ ಡಿಎಸ್‍ಎಸ್ ಸಂಘಟನೆಯ ಪದಾಧಿಕಾರಿಗಳು, ಮುಖಂಡರು , ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಸಮಾಜದ ಬಾಂದವರು ಭಾಗವಹಿಸಿ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಡಿಎಸ್‍ಎಸ್ ರಾಜ್ಯ ಮುಖಂಡರಾದ ಉಡಚಪ್ಪ ಮಾಳಗಿ,ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಪೂರ ಜಂಟಿ ಪ್ರಕಟಣೆ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ