ಸಿಟಿ ಸ್ಕ್ಯಾನಿಂಗ್ ತಂತ್ರಜ್ಞರ ನೇಮಕಕ್ಕೆ ಆಗ್ರಹ..!!

 ಹಾವೇರಿ :

    ಜಿಲ್ಲಾಸ್ಪತ್ರೆ ಬಡರೋಗಿಗಳ ಪಾಲಿನ ಆಶಾಕಿರಣವಿದ್ದಂತೆ ಇದ್ದು, ನಿತ್ಯವೂ ಸಾವಿರಾರು ಸಂಖ್ಯೆಯ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಅದರಲ್ಲಿಯೂ ಹೆರಿಗೆಗಾಗಿ ಪ್ರತಿನಿತ್ಯ ನೂರಾರು ಗರ್ಭೀಣಿಯರು ಬರುತ್ತಾರೆ. ಆಸ್ಪತ್ರೆಗೆ ಬಂದ ಗರ್ಭೀಣಿಯರಿಗೆ ಸಿಟಿ ಸ್ಕ್ಯಾನಿಂಗ ಸೌಲಭ್ಯ ಬೇಕೇ ಬೇಕು. ಆದರೆ ಕಳೆದ ಒಂದೂವರೆ ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಬಂದಾಗಿದೆ. ಇದರಿಂದ ಗರ್ಭೀಣಿಯರು ಪರದಾಡುವಂತಾಗಿದೆ.

      ಬಂದ ಆಗಿರುವ ಸಿಟಿ ಸ್ಕ್ಯಾನಿಂಗ್, ಧೂಳು ತಿಂತಿರುವ ಸ್ಕ್ಯಾನಿಂಗ್ ಯಂತ್ರ. ಸಿಟಿ ಸ್ಕ್ಯಾನಿಂಗ್ ಇಲ್ಲದೆ ಗರ್ಭೀಣಿಯರ ಪರದಾಡುವಂತಾಗಿದೆ. ಖಾಸಗಿ ಆಸ್ಪತ್ರೆಗೆ ಹಣ ಕೊಟ್ಟು ಬಡ ರೋಗಿಗಳು ಹೈರಾಣಾಗಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಅನುಕೂಲಕ್ಕೆ ಸಿಟಿ ಸ್ಕ್ಯಾನಿಂಗ್ ಆರಂಭಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಗರ್ಭೀಣಿಯರು ಮತ್ತು ಮಕ್ಕಳಿಗಾಗಿ ಸಿಟಿ ಸ್ಕ್ಯಾನಿಂಗ್ ತೆರೆಯಲಾಗಿದೆ.

      ಜಿಲ್ಲಾಸ್ಪತ್ರೆಯಲ್ಲಿ ಆರಂಭವಾಗಿದ್ದ ಸಿಟಿ ಸ್ಕ್ಯಾನಿಂಗ್ ಸಾಕಷ್ಟು ಬಡ ಗರ್ಭೀಣಿ ಮಹಿಳೆಯರಿಗೆ ಅನುಕೂಲ ಆಗಿತ್ತು. ಕೇವಲ ಹತ್ತಿಪ್ಪತ್ತು ರುಪಾಯಿಯಲ್ಲಿ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಸಿಗುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿಂದ ಸಿಟಿ ಸ್ಕ್ಯಾನಿಂಗ್ ಬಂದ್ ಆಗಿದೆ. ಸಿಟಿ ಸ್ಕ್ಯಾನಿಂಗ್ ಮಾಡುತ್ತಿದ್ದ ವೈದ್ಯರು ವರ್ಗಾವಣೆ ಆಗಿದ್ದರಿಂದ ಸಿಟಿ ಸ್ಕ್ಯಾನಿಂಗ್ ಬಂದ್ ಆಗಿದೆ. ಇದರಿಂದ ರೋಗಿಗಳಿಗೆ ಪರದಾಟ ಶುರುವಾಗಿದೆ.

        ಹೆರಿಗೆಗೆ ಬರುವ ಗರ್ಭೀಣಿಯರು ಜಿಲ್ಲಾಸ್ಪತ್ರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸ್ಕ್ಯಾನಿಂಗ್ ಗಾಗಿ ಖಾಸಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಗೆ ಅಲೆದಾಡಲು ಸಾಕಷ್ಟು ಹಣ ಖರ್ಚು ಮಾಡಬೇಕಾಗಿದೆ. ಆದಷ್ಟು ಬೇಗ ಸಿಟಿ ಸ್ಕ್ಯಾನಿಂಗ್ ಆರಂಭಿಸಿ ಬಡ ರೋಗಿಗಳು ಮತ್ತು ಗರ್ಭೀಣಿ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

        ಆದಷ್ಟು ಬೇಗ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಟಿ ಸ್ಕ್ಯಾನಿಂಗ್ ವಿಭಾಗಕ್ಕೆ ವೈದ್ಯರನ್ನು ನೇಮಿಸಿ ಗರ್ಭೀಣಿಯರು ಮತ್ತು ಮಕ್ಕಳಿಗೆ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಸಿಗುವಂತೆ ಮಾಡಬೇಕಿದೆ. ಯಾವಾಗ ಬಡವರ ಪರದಾಟವನ್ನು ಅಧಿಕಾರಿಗಳು ನಿಲ್ಲಿಸುತ್ತಾರೋ ಕಾದು ನೋಡಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link