ದೇವೇಗೌಡರಿಗೆ ಸೆಡ್ಡು ಹೊಡೆದ ಸದಾನಂದ ಗೌಡ

ಬೆಂಗಳೂರು:

       ಲೋಕಸಭೆ ಚುನಾವಣೆಗೆ ನನ್ನ ವಿರುದ್ಧ ದೇವೇಗೌಡರು ಸ್ಪರ್ಧಿಸಿದರೆ ಹೆದರುವುದಿಲ್ಲ ಎಂದು ಸದಾನಂದ ಗೌಡರು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ.ಮಾಜಿ ಪ್ರಧಾನಿ ಎಂದು ವೈಯಕ್ತಿಕವಾಗಿ ಅವರ ಮೇಲೆ ಗೌರವವಿದೆ. ಆದರೆ, ಬಿಜೆಪಿ ಅಭ್ಯರ್ಥಿಯಾಗಿ ನಾನು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲುವು ನನ್ನದೇ.ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೂ ಅಂಜುವುದಿಲ್ಲ ಎಂದು ಸದಾನಂದಗೌಡ ಸವಾಲು ಹಾಕಿದರು.

         ಕೆ.ಆರ್.ಪುರ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಎನ್‍ಡಿಎ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದರು.

         ಮಾಜಿ ಪ್ರಧಾನಿ ದೇವೇಗೌಡರ ಮೇಲೆ ವೈಯಕ್ತಿಕವಾಗಿ ಗೌರವವಿದೆ.ಆದರೆ ಸ್ಪರ್ಧೆ ಎಂದು ಬಂದಾಗ ನಾನು ಬಿಜೆಪಿಯ ಪ್ರಬಲ ಕಟ್ಟಾಳು. ಕಳೆದ ಬಾರಿ ಕೆ.ಆರ್.ಪುರ ಕ್ಷೇತ್ರದಲ್ಲಿ 1,40,000ಮತಗಳನ್ನು ಪಡೆದು ನಾನು ಗೆದ್ದಿದ್ದೆ. ನನಗೆ ಮತ ನೀಡಿ ನನ್ನ ಗೆಲುವಿಗೆ ಕ್ಷೇತ್ರದ ಮತ ದಾರರು ಕೊಡುಗೆ ನೀಡಿದ್ದರು. ಈ ಬಾರಿಯೂ ನನಗೆ ಉತ್ತಮ ಮುನ್ನಡೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

         ಇದೇ ವೇಳೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮೋದಿ ದೇಶದ ಕೀರ್ತಿ ಹೆಚ್ಚಿಸಿದರು. ಇನ್ನೊಮ್ಮೆ ಗೆದ್ದು ಬಂದು ದೇಶದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವ ಮೂಲಕ ವಿಶ್ವ ಅಗ್ರಗಣ್ಯ ಸ್ಥಾನವನ್ನು ಭಾರತಕ್ಕೆ ತಂದುಕೊಡಲಿದ್ದಾರೆ. ಮೋದಿಯವರು ಕೇವಲ 5 ವರ್ಷ ಗಳಲ್ಲಿ ಹೆಚ್ಚಿನ ಕೆಲಸ ಮಾಡಿ ತೋರಿಸಿದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ವೀರಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap