ಶಿಗ್ಗಾವಿ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನಿರ್ದೇಶಕರ ಮಂಡಳಿ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.92.76ರಷ್ಟು ಮತದಾನವಾಯಿತು. ನೌಕರರು ಸರತಿಯಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡಿದರು.
ಒಟ್ಟು 20 ಸರ್ಕಾರಿ ವಿವಿಧ ಇಲಾಖೆಗಳಲ್ಲಿ 1363 ಮತದಾರರಿದ್ದಾರೆ. ಅದರಲ್ಲಿ ಸುಮಾರು 30 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅದರಲ್ಲಿ ಈಗಾಗಲೆ ಸುಮಾರು 16 ಇಲಾಖೆಗಳಿಂದ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರೌಢ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಅಭ್ಯರ್ಥಿ ಆಯ್ಕೆಗೆ ಮಾತ್ರ ಚುನಾವಣೆ ನಡೆಯಿತು. ಈ ನಾಲ್ಕು ಇಲಾಖೆಗಳಿಂದ ಸುಮಾರು 47ಜನ ನಾಮ ಪತ್ರ ಸಲ್ಲಿಸಿದ್ದರು. ಅದರಲ್ಲಿ 11 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ್ದರು. ಹೀಗಾಗಿ ಕಣದಲ್ಲಿರುವ 8 ಜನ ಅಭ್ಯರ್ಥಿಗಳ ನಡುವೆ ಮಾತ್ರ ಸ್ಪರ್ಧೆ ನಡೆಯಿತು.
ಕಂದಾಯ ಹಾಗೂ ಭೂದಾಖಲಾತಿ ಇಲಾಖೆಯಿಂದ ಎಸ್.ಕೆ.ಖೋತ, ಎಸ್.ಬಿ.ಸಜ್ಜನ, ಜಿ.ಬಿ.ಭಜಂತ್ರಿ, ವೈಎಸ್.ಪಾಟೀಲ, ಪಶುಸಂಗೋಪನಾ ಇಲಾಖೆಯಿಂದ ಸಿ.ಡಿ.ಯತ್ನಹಳ್ಳಿ, ತಾಲ್ಲೂಕು ಪಂಚಾಯ್ತಿ ಇಲಾಖೆಯಿಂದ ಪ್ರಕಾಶ ಔಂದಕರ, ನ್ಯಾಯಾಂಗ ಇಲಾಖೆಯಿಂದ ರಾಜೇಂದ್ರ ಹಿರೇಮಠ, ಉಪಖಜಾನೆ ಹಾಗೂ ನೋಂದಣಿ ಇಲಾಖೆಯಿಂದ ಸಂದೇಶ ಲಾಡ, ಅಬಕಾರಿ ಇಲಾಖೆಯಿಂದ ಪಿ.ಆರ್.ದೊಡ್ಡಮನಿ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಎಂ.ಬಿ.ಸಾತಗೊಂಡ,
ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಿಂದ ಜಯಶ್ರೀ ಕಾವಲಕೊಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಿಂದ ವಿ.ವೆಂಕಟೇಶ, ಸಹಾಯಕ ಕೃಷಿ ಇಲಾಖೆಯಿಂದ ಎಸ್.ಆರ್.ದಾವಣಗೆರೆ, ವಲಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಎಸ್.ಎಸ್.ಬಟ್ಟೂರ, ಸಹಾಯಕ ತೋಟಗಾರಿಕೆ ಇಲಾಖೆಯಿಂದ ವಿಜಯಕುಮಾರ ಪೂಜಾರ, ಪಂಚಾಯ್ತಿ ರಾಜ್ ಹಾಗೂ ಗ್ರಾಮೀಣ ಕುಡಿಯುವ ನೀರು ನೈರ್ಲಲ್ಯ ಇಲಾಖೆಯಿಂದ ಭಾರತಿ ತಮ್ಮಣ್ಣವರ, ಲೋಕೋಪಯೋಗಿ ಬಂದರ ಜಲಸಾರಿಗೆ ಇಲಾಖೆಯಿಂದ ಎನ್.ಫಯಾಜ, ಮೀನುಗಾರಿಕೆ ಇಲಾಖೆಯಿಂದ ಸುಧಾ ಕಹಾರ, ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಅರುಣ ಹುಡೇದಗೌಡ್ರ, ಗುಡ್ಡಪ್ಪ ಬಮ್ಮನಹಳ್ಳಿ, ಹಿದಾಯುತುಲ್ಲಾ ರಟ್ಟಿಹಳ್ಳಿ, ಎಂ.ಬಿ.ಯಲಿಗಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಚುನಾವಣೆ ನಡೆದ ಪ್ರೌಢ ಶಿಕ್ಷಣ ಇಲಾಖೆಯಿಂದ ಗುರುರಾಜ ಹುಚ್ಚಣ್ಣನವರ, ಬಸಪ್ಪ ಅಡವೇರ. ಕಾಲೇಜು ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆರ್.ಎನ್.ಭೂಸನಗೌಡ್ರ, ಆರೋಗ್ಯ ಇಲಾಖೆಯಿಂದ ಶಿವಯೋಗಿ ದೋಟಾಲಿ, ಅಶೋಕ ಅಮಾತ್ತೆಣ್ಣವರ, ಸರೋಜಾ ಹರಿಜನ, ಪ್ರಶಾಂತ ಅಷ್ಟಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಆರ್.ಎಸ್.ಹರಿಜನ ಅವರು ಆಯ್ಕೆಯಾದರು. ರಾಜ್ಯ ಪರಿಷತ್ತಿನ ಅಧ್ಯಕ್ಷರ ಆಯ್ಕೆಗಾಗಿ ಮತ್ತು ತಾಲ್ಲೂಕು ಮಟ್ಟದ ಖಜಾಂಚಿ ಹುದ್ದೆಗೆ ಜೂ.27ರಂದು ಚುನಾವಣೆ ನಡೆಯಲಿದ್ದು, ಜೂ17ರಿಂದ 21ರ ವರೆಗೆ ನಾಮಪತ್ರ ಪಡೆಯಲಾಗುವುದು ಎಂದು ಚುನಾವಣೆ ಅಧಿಕಾರಿ ಸಿ.ವಿ.ಮತ್ತಿಗಟ್ಟಿ ತಿಳಿಸಿದ್ದಾರೆ. ಸಹಾಯಕರಾಗಿ ಸಿ.ಎಸ್.ಸಿಗಡಿ, ಜಿ.ಎ.ಮಠದ, ಎಸ್.ಬಿ.ಧರಣ್ಣವರ ಚುನಾವಣೆ ಕಾರ್ಯ ನಿರ್ವಹಿಸಿದರು.