ಸಿರುಗುಪ್ಪ 
ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮಹನೀಯರು, ತ್ಯಾಗ, ಬಲಿದಾನ, ಪ್ರಾಣ ತೆತ್ತಿದ್ದಾರೆ. ಆದರೆ ಬಿಜೆಪಿಯವರು ಒಬ್ಬರು ಸತ್ತಿಲ್ಲ. ದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ನರೇಂದ್ರ ಮೋದಿ ರೈತರ ಪರ ಬಡವರ ಪರ ಕೆಲಸ ಮಾಡಲಿಲ್ಲ. ಶ್ರೀಮಂತರ ಪರ ಕೆಲಸ ಮಾಡಿದ್ದಾರೆ.
ಬಡವರಿಗೆ ದೇಶದಲ್ಲಿ ಒಳ್ಳೆಯ ದಿನ ಬರಲಿಲ್ಲ. ಭರವಸೆ ಈಡೇರಿಸದ ಮೋದಿ ಅಪ್ಪಟ ಸುಳ್ಳುಗಾರ, ಮೋಸಗಾರ, ಜಾತಿ ಅಲ್ಲ ಅಭಿವೃದ್ಧಿ ನೋಡಿ ಕಾಂಗ್ರೆಸ್ಗೆ ಮತದಾನ ಮಾಡಿ, ಎಂದು ಸಿರುಗುಪ್ಪದಲ್ಲಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕು, ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜ ಶೇಖರ ಬಸವರಾಜ ಹಿಟ್ನಾಳ, ಪರ ಕಾಂಗ್ರೆಸ್ ಗೆ ಮತದಾನ ಮಾಡಿ, ಆಶೀರ್ವದಿಸಿ, ಎಂದು ಮತ ಯಾಚಿಸಿ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮೇಗೌಡ, ಮಾಜಿ ಶಾಸಕರಾದ, ಬಿ.ಎಂ. ನಾಗರಾಜ, ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ, ಬಾದರ್ಲಿ ಹಂಪನಗೌಡ, ನಗರಸಭೆ ಅಧ್ಯಕ್ಷೆ ಎಂ. ಸವಿತಾ, ಅರುಣಾ ಪ್ರತಾಪರೆಡ್ಡಿ, ಉಪಾಧ್ಯಕ್ಷ ಹುಚ್ಚಿರಪ್ಪ, ಕೆ.ವೆಂಕಟರಾಮರೆಡ್ಡಿ, ಬೀರಳ್ಳಿ ರಾಮರೆಡ್ಡಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಗೊಪಾಲರೆಡ್ಡಿ, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ಕೆ .ಮಲ್ಲಿಕಾರ್ಜುನಯ್ಯ ಸ್ವಾಮಿ, ಕೆಪಿಸಿಸಿ ಯುವ ಅಧ್ಯಕ್ಷ ಬಾದರ್ಲಿ ಬಸವನಗೌಡ, ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ನಾಗರುದ್ರಗೌಡ, ಡಿ.ನಾಗರಾಜ, ಮಲ್ಲಿಕಾರ್ಜುನ ಬಾಳಪ್ಪ, ಸಯ್ಯದ್ ಮೊಹಿದ್ದೀನ್ ಖಾದ್ರಿ, ಜಿ. ಕೃಷ್ಣಪ್ಪ, ಯು.ವೆಂಕೋಬಾ, ಮುರಳಿ ಕೃಷ್ಣ, ಮುಲ್ಲಾಬಾಬು ಮತ್ತಿತರರು ಹಾಜರಾಗಿ ಕಾಂಗ್ರೆಸ್ ಪರ ಮತ ಯಾಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








