ಹುಳಿಯಾರು:
ಮತದಾನದ ಅಸ್ತ್ರ ವಿವೇಕಯುತವಾಗಿ ಬಳಸಿ
ಮತದಾನವು ನಾಗರೀಕರಿಗೆ ಸಿಕ್ಕಿರುವ ಮೂಲಭೂತ ಹಕ್ಕು. ಬದ್ಧತೆ ಇರುವ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳ ಆಯ್ಕೆಗೆ ಸಂವಿಧಾನವು ಪ್ರಜೆಗಳಿಗೆ ಮತದಾನದ ಅಸ್ತ್ರ ಕೊಟ್ಟಿದೆ. ಈ ಅಸ್ತ್ರವನ್ನು ವಿವೇಕಯುತವಾಗಿ ಬಳಸಬೇಕು. ಮತದಾನದ ಹಕ್ಕನ್ನು ಸ್ವಯಂಪ್ರೇರಿತರಾಗಿ ಚಲಾಯಿಸಬೇಕೇ ಹೊರತು ಒತ್ತಡಕ್ಕೆ ಮಣಿದು ಮತ ಹಾಕಬಾರದು.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸುವಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಮತಕ್ಕೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಶಕ್ತಿಯಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕಡ್ಡಾಯವಾಗಿ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರು, ಕೃಷಿ ಬಿಕ್ಕಟ್ಟು, ಮೂಲ ಸೌಕರ್ಯ ಸಮಸ್ಯೆ ಹಾಗೂ ಶೈಕ್ಷಣಿಕ ಸಮಸ್ಯೆಗಳಿವೆ. ಇವುಗಳಿಗೆ ಸ್ಪಂಧಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆಯು ಸುವರ್ಣಾವಕಾಶ.
ಉತ್ತಮ ವ್ಯಕ್ತಿ ಆಯ್ಕೆಕ್ಕೆ ಮತದಾರ ಸರ್ವ ಸ್ವತಂತ್ರ
ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಇಲ್ಲಿ ಪ್ರಜೆಗಳೇ ಪ್ರಭುಗಳು. ಅದಕ್ಕೆ ಕಾರಣ ನಮ್ಮ ಪವಿತ್ರವಾದ ಮತ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾರ ಸರ್ವ ಸ್ವತಂತ್ರ. ಜನ ಪ್ರತಿನಿಧಿಯನ್ನಾಗಿ ಅರ್ಹ ವ್ಯಕ್ತಿಯನ್ನು ಚುನಾಯಿಸಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಉತ್ತಮ ಪಾಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಓಟು ವಜ್ರಾಯುಧ. ಅದನ್ನು ದೇಶದ ಅಭಿವೃದ್ಧಿಗೆ ಬಳಸಬೇಕು. ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಘನತೆ, ಹಾಗಾಗಿ ತಪ್ಪದೆ ಮತದಾನ ಮಾಡುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಘನತೆ ಕಾಪಾಡೋಣ ಬನ್ನಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
