ಶ್ರೀ ಆಲದಕೊಂಬೆ ಅಮ್ಮನವರ ಪ್ರಥಮ ವರ್ಷದ ವಾರ್ಷಿಕೋತ್ಸವ

ಗುಬ್ಬಿ

        ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಜಿ.ಹೊಸಹಳ್ಳಿ ಬಾರೆಯಲ್ಲಿ ನೆಲೆಗೊಂಡಿರುವ ಶ್ರೀ ಆಲದಕೊಂಬೆ ಅಮ್ಮನವರ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಏ.9ರಂದು ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಹೊಸಹಳ್ಳಿ ಸಂಸ್ಥಾನದ ಮುತ್ತಿನ ಮುಮ್ಮಡಿ ಏಳುನಾಡು ಪ್ರಭು ಹುಚ್ಚೀರಪ್ಪಾಜಿ ಅರಸ್ ತಿಳಿಸಿದ್ದಾರೆ.

        ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ಏರ್ಪಡಿಸಲಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಲಿರುವ ಭಕ್ತಾದಿಗಳು ತಮ್ಮ ಇಷ್ಠಾರ್ಥ ಪೂಜೆ ಸಲ್ಲಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 5.30 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಪುಣ್ಯಃ, ನಾಂದಿ, ರುದ್ರಾಭಿಷೇಕ, ನವಗ್ರಹ ಮೃತ್ಯುಂಜಯ, 10ಕ್ಕೆ ಮಹಾಗಣಪತಿ ಹೋಮ, ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ನಂತರ ಅನ್ನದಾಸೋಹ ಏರ್ಪಡಿಸಲಾಗಿದೆ. ತೊರೆಮಠಾಧ್ಯಕ್ಷ ಶ್ರೀರಾಜಶೇಖರಮಹಾಸ್ವಾಮಿಜಿ ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದು, ಗ್ರಾಮದ ಮುಖಂಡರು ಮತ್ತು ಭಕ್ತಾದಿಗಳು ಭಾಗವಹಿಸಲಿದ್ದಾರೆ. ನಂತರ ಶ್ರೀದೇವಿಯ ಉತ್ಸವ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link