ಶಿಗ್ಗಾವಿ :
“ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗುತ್ತದೆ” ಎಂಬ ಮಾತಿನಂತೆ ಮಹಿಳೆ ದುರ್ಭಲಳಲ್ಲ ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮೂಲಕ ಮಹಿಳೆಯರು ಸಾಬೀತು ಪಡಿಸಿದ್ದಾರೆ ಎಂದು ಶಿಗ್ಗಾವಿ ಪಿಎಸ್‍ಐ ಅನ್ನಪೂರ್ಣ ಹುಲಗೂರ ಹೇಳಿದರು.
ರವಿವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶಿಗ್ಗಾವಿ-ಸವಣೂರ ವತಿಯಿಂದ ಶಿಗ್ಗಾವಿ ವಲಯ ಮಟ್ಟದ ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟಗಳ ನೂತನ ಪಧಾಧಿಕಾರಿಗಳ ಒಕ್ಕೂಟ ಪದಗ್ರಹಣ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ಬದಲಾವಣೆಯಾಗಿದೆ ನಿಜ ಆದರೆ ಆ ತಂತ್ರಜ್ಞಾನ ಬದಲಾವಣೆಯಲ್ಲಿಯೂ ಒಂದು ರೀತಿ ಹಿನ್ನೆಡೆಯಾಗಿದೆ,
ಇಂದು ಗ್ರಾಮೀಣ ಪ್ರದೇಶದ ಕುಟುಂಬಗಳು ಈ ಅಭಿವೃದ್ದಿ ಹೊಂದಿದ ತಂತ್ರಜ್ಞಾನದ ಮೂಲಕ ಬೆಳೆದಂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪಡೆದುಕೊಳ್ಳಲು ಸಾದ್ಯವೇ ? ಎಂದು ಪ್ರಶ್ನಿಸಿದ ಅವರು ಮಹಿಳೆಯನ್ನು ಧರ್ಮಸ್ಥಳ ಸಂಸ್ಥೆ ಸಂತೋಷವಾಗಿರಿಸಿದೆ, ಜೊತೆಗೆ ಕುಟುಂಬದ ಸಂಸ್ಕøತಿಯ ಸೂತ್ರವನ್ನು ಮಹಿಳೆಯರು ಸರಿಯಾಗಿ ನಿಬಾಯಿಸಬೇಕು, ಗಂಡ ಹೆಂಡತಿ ಸರಿಸಮವಾಗಿ ಹೊಂದಾಣಿಕೆಯಿಂದ ಸಮಾನತೆಯಿಂದ ಸಂಸಾರವನ್ನು ಸಾಗಿಸಿದಾಗ ಸಂಸಾರ ಸುಗಮಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಶಿಗ್ಗಾವಿ ಯೋಜನಾಧಿಕಾರಿ ಮುಖೇಶ ಮಾತನಾಡಿ ಇಂದು ಸಂಘದಲ್ಲಿ ನಾಲ್ಕು ಲಕ್ಷ ಸ್ವ ಸಹಾಯ ಸಂಘಗಳಿದ್ದು 2009 ರಲ್ಲಿ ಹಾವೇರಿ ಜೀಲ್ಲೆಗೆ ಪಾದಾರ್ಪಣೆ ಮಾಡಿದೆ, ಸದಸ್ಯ ಸದಸ್ಯರನ್ನು ಸೇರಿಸಿ ಸಂಘ, ಸಂಘ ಸಂಘಗಳು ಸೇರಿ ಒಕ್ಕೂಟ, ಒಕ್ಕೂಟಗಳು ಸೇರಿ ಒಗ್ಗಟ್ಟು ಎಂಬ ತಾತ್ಪರ್ಯದೊಂದಿಗೆ ರಾಜಕೀಯ ರಹಿತವಾಗಿ ಜಾತಿ, ಮತ ಪಂಥವೆನ್ನದೆ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ಸಂಘ ಕಾರ್ಯನಿರ್ವಹಿಸುತ್ತಿದ್ದು ಕೇವಲ ಆಯ್ಕೆ ಮಾಡಿದ ಪದಾಧಿಕಾರಿಗೆ ಅಷ್ಟೆ ಜವಾಬ್ದಾರಿ ನೀಡದೇ ಪ್ರತಿಯೊಬ್ಬ ಸದಸ್ಯರಿಗೂ ಜವಾಬ್ದಾರಿ ನೀಡುತ್ತಿದ್ದು ಕೇವಲ ಆರ್ಥಿಕ ವ್ಯವಸ್ಥೆಯನ್ನು ನಮ್ಮ ಸಂಘ ಮಾಡದೇ ಬ್ಯಾಂಕ ಮತ್ತು ಮದ್ಯವರ್ತಿಗಳ ಸೇತುವೆಯಾಗಿ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪುರಸಭೆ ಅಧ್ಯಕ್ಷ ಶಿಪ್ರಸಾದ ಸುರಗಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಪಧಾದಿಕಾರಿಗಳ ಪದಗ್ರಹಣ, ನೂತನ ಅಧ್ಯಕ್ಷರುಗಳಿಗೆ ಅಧಿಕಾರ ಹಸ್ತಾಂತರ, ಹಾಗೂ ಉತ್ತಮ ಸೇವೆ ಸಲ್ಲಿಸಿದ ಸೇವಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ಪೂರಕ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ರವಿ ಉಡಪಿ, ಅಡಿಟರ್ ಸತೀಶ, ಕನ್ನಡ ಪರ ಹೋರಾಟಗಾರರಾದ ನಿಂಗಪ್ಪ ಬೆಂಚಳ್ಳಿ, ಬಸಲಿಂಗಪ್ಪ ನರಗುಂದ, ಸೇವಾ ಪ್ರತಿನಿಧಿಗಳಾದ ಗೀತಾ ಅಂಬಿಗೇರ, ಶಶಿಕಲಾ ಕನ್ನೂರ, ಸುನಿತಾ ಕಬ್ಬೆರ, ಸುಶೀಲಾ ಕಾಮನಹಳ್ಳಿ, ನಿರ್ಮಲಾ ಅಂಗಡಿ, ಗೌರಮ್ಮ ಕಲ್ಲಪ್ಪನವರ, ಪಾರ್ವತಿ ಉಳ್ಳಾಗಡ್ಡಿ, ಅನಸುಯಾ ಸಾವಕ್ಕನವರ, ಪುಷ್ಪಾ ಗಾರಗೆ, ಗೀರಿಜಾ ಚಂದಾಪೂರ, ಚೈತ್ರಾ ಬನ್ನಿಕೋಪ್ಪ, ಅನ್ನಪೂರ್ಣಾ ಹೋನ್ನಣ್ಣವರ ಸೇರಿದಂತೆ ಸಂಘದ ಸರ್ವ ಸದಸ್ಯರು, ಸಿಬ್ಬಂದಿ ಹಾಜರಿದ್ದರು.ಶಿಗ್ಗಾವಿ ವಲಯ ಮೇಲ್ವಿಚಾರಕ ಚನ್ನಬಸಪ್ಪ ಸಿ ಕೆ, ಸ್ವಾಗತಿಸಿದರು, ತಾಲೂಕಾ ವಲಯ ಕೃಷಿ ಅಧಿಕಾರಿ ಕುಮಾರ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ