ಬಳ್ಳಾರಿ
ಬಿಸಿಲ ನಾಡಿನಲ್ಲೀಗ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಚುನಾವಣೆಯ ಕಾವೂ ಕೂಡ ಜೋರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರವಾಗಿ ಕಾಂಗ್ರೆಸ್ ಮುಖಂಡರು ಬಿರುಸಿನ ಮತ ಪ್ರಚಾರ ಕೈಗೊಂಡಿದ್ದಾರೆ.
ಏಪ್ರಿಲ್ 23 ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಕೊನೆ ಘಳಿಗೆಯ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆಎಸ್ ಆಂಜನೇಯಲು ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸಹ ವಿಎಸ್ ಉಗ್ರಪ್ಪ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡರು. ಮಹಾನಗರ ಪಾಲಿಕೆಯ 17ನೇ ವಾರ್ಡ್ ವ್ಯಾಪ್ತಿಯ ಬಿ.ಗೋನಾಳ್, ವಿಶಾಲ ನಗರ, ರೂಪನಗುಡಿ ರಸ್ತೆ, ಅಗಡಿ ಮಾರಪ್ಪ ಕಾಂಪೌಂಡ್ ಇನ್ನಿತರೆಡೆ ಚುನಾವಣಾ ಪ್ರಚಾರ ಕೈಗೊಂಡರು.
ಮಾಜಿ ಮೇಯರ್ ವೆಂಕಟರಮಣ, ಪಾಲಿಕೆ ಸದಸ್ಯರಾದ ಕೆರಕೋಡಪ್ಪ, ಕಮೇಲಾ ಸೂರಿ, ರಾಮುಡು, ಬೋಯಪಾಟಿ ವಿಷ್ಣುವರ್ಧನ, ಮೊಹ್ಮದ್ ಅಜಂ, ಪೆದ್ದ ಎರಿಸ್ವಾಮಿ, ಸಂತೋಷ್ ಸ್ವಾಮಿ, ನಿರಂಜನ್ ನಾಯ್ಡು, ಪದ್ಮಾವತಿ, ಜೀವೇಶ್ವರಿ, ಶೋಭಾ ಕಳಿಂಗ, ವಿಜಯಕುಮಾರ್, ಕಿರಣ್ ಕುಮಾರ್, ಅನಿತಾ, ವಿಜಯಕುಮಾರಿ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
