ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ

ಹಾನಗಲ್ಲ :

      ಕೃಷಿಕರು ಮಿಶ್ರ ತಳಿ ಹಸುಗಳನ್ನು ಸಾಕುವುದರಿಂದ ಆರ್ಥಿಕವಾಗಿ, ಸಬಲರಾಗುವ ಜೊತೆಗೆ ಸಾವಲಂಬಿ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯಕಾರಿಯಾಗಲಿದೆ ಎಂದು ಮಾಜಿ ತಾಲೂಕ ಪಂಚಾಯತಿ ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ ತಿಳಿಸಿದರು.

       ರವಿವಾರ ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಪಶುಸಂಗೋಪನಾ ಮತ್ತು ವೈದ್ಯಕೀಯ ಸೇವಾ ಇಲಾಖೇ, ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಿಶ್ರತಳಿ ಹಸು, ಎಮ್ಮೆ, ಹಾಗೂ ಕರುಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು, ಹಸುಗಳ ಹಾಲು ಕುಡಿಯುವುದರಿಂದ ನಮ್ಮ ಮಕ್ಕಳ ಆರೋಗ್ಯ ಹಾಗೂ ಬೌದ್ದಿಕ ಬೆಳವಣಿಗೆ ಹೆಚ್ಚಿಸಬಹುದಾಗಿದೆ, ಇಂತಹ ಕಾರ್ಯಕ್ರಮಗಳಿಂದ ಹೆಚ್ಚು ಹೆಚ್ಚು ಹಸುಗಳ ಪ್ರದರ್ಶನದ ಜೊತೆಗೆ ರೈತರಿಗೆ ವೈದ್ಯರಿಂದ ಮಿಶ್ರತಳಿ ಹಸುಗಳ ಪಾಲನೆ ಪೋಷಣೆ, ಅಭಿವೃದ್ದಿ ಹಾಗೂ ಸರಕಾರದ ಸವಲತ್ತುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದಾಗಿದೆ ಎಂದರು.

       ಕಿರವಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಿವಲಿಂಗಪ್ಪ ತಲ್ಲೂರ ಮಕರವಳ್ಳಿ ಗ್ರಾಮದಲ್ಲಿ ಹಾಲಿನ ಡೈರಿಯಾಗಿದ್ದು, ಈಗಾಗಲೆ ದಿನಕ್ಕೆ 300 ರಿಂದ 400 ಲೀಟರ್ ಹಾಲು ಸಂಗ್ರವಾಗಿ ಕೆ.ಎಮ್.ಎಫ್. ರವಾನೆಯಾಗುತ್ತಿದೆ. ಹೆಚ್ಚು ಹೆಚ್ಚು ಹೈನುಗಾರಿಕೆ ಮಾಡುವುದರಿಂದ ಹೆಚ್ಚು ಲಾಬದಾಯಕದ ಜೊತೆಗೆ ಆರ್ಥಿಕ ಲಾಭ ವೃದ್ದಿಸಬಹುದಾಗಿದೆ. ಸದ್ಯದಲ್ಲಿಯೆ ಗೊಂದಿ ಪಂಚಾಯತಿಯ ಮಟ್ಟದಲ್ಲಿ ಪಶು ಚಿಕಿತ್ಸಾಲಯದ ಅವಶ್ಯಕತೆಯಿರುವ ಬಗ್ಗೆ ಜನಪ್ರೀಯ ಶಾಸಕರಾದ ಸಿ.ಎಮ್.ಉದಾಸಿಯವರು ಗಮನಕ್ಕೆ ತಂದಿದ್ದು ಸದ್ಯದಲ್ಲಿಯೆ ಪ್ರಾರಂಬದ ಬಗ್ಗೆ ಬರವಸೆ ನೀಡಿದ್ದಾರೆ ಇದರಿಂದ ಸುತ್ತ ಮುತ್ತಲಿನ ಗ್ರಾಮಗಳ ರೈತರ ಹಸುಗಳಿಗೆ ಪಶುಚಿಕಿತ್ಸಾಲಯ ಆಸ್ಪತ್ರೆ ಅನೂಕೂಲಕರವಾಗಲಿದೆ ಎಂದರು.

       ಪ್ರಾಸ್ತವಿಕವಾಗಿ ತಿಳವಳ್ಳಿ ವೈದ್ಯಧಿಕಾರಿ ನಿಂಗಪ್ಪ ಹಕಾರಿ ಮಾತನಾಡಿದರು ಗೊಂದಿ ಗ್ರಾಪಂ ಅಧ್ಯಕ್ಷೇ ಪ್ರಭಾವತಿ ಕರಬುಳ್ಳೇರ, ಎಪಿಎಮ್‍ಸಿ ಸದಸ್ಯ ಸಿದ್ದಪ್ಪ ಬಂಗಾರೇರ, ಮಕರವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಮಿನಾಕ್ಷಿ ಕ್ಯಾತಣ್ಣನವರ, ಹಾಲೂ ಒಕ್ಕೂಟ ಶಾಂತವ್ವ ಗಡಿಯಣ್ಣನವರ, ರಾಮಣ್ಣ ಕಮ್ಮಾರ, ಚಂದ್ರಪ್ಪ ದೊಡ್ಡಮನಿ, ಶಿವಪ್ಪ ಗಡಿಯಣ್ಣನವರ, ಬಸನಗೌಡ ಚೌಟಿ, ಲಕ್ಕಪ್ಪ ಸೊಟ್ಟನವರ, ಶಿವಾನಂದ ಸಜ್ಜನಶೇಟ್ಟರ, ಶಂಕರಗೌಡ ಪಾಟೀಲ, ಈರಪ್ಪ ದೊಡ್ಡಮನಿ, ಉಮೇಶ ಕಬ್ಬೂರ, ರಾಮಣ್ಣ ಕಮ್ಮಾರ, ಉಮೇಶ ಕಬ್ಬೂರ, ಪಶು ವೈದ್ಯಾಧಿಕಾರಿಗಳಾದ ಹಾನಗಲ್ಲ ಪಶು ಪಾಲನಾ ಇಲಾಖೆ ಸಹಾಯಕ ನಿರ್ದಶಕ ಗಿರೀಶ್ ರೆಡ್ಡೇರ, ಮಹೇಶ ಸವಣೂರ, ಯುವರಾಜ ಚವ್ಹಾಣ, ಬಿ.ಎಲ್.ಪವನ, ಅಮೀತ್ ಪುಠಾನಿಕರ, ನಾಗರಾಜ ಜಲ್ಲೇರ, ಸಂತೋಷ ಮಲಗುಂದ, ಸುರೇಶ ಮಾಗೋಡ ಎಸ್.ಎಸ..ಖಾಜಾನಿಜಾಮುದ್ದಿನ ಇದ್ದರು

       ಈ ಸಂಧರ್ಭದಲ್ಲಿ ಪ್ರದರ್ಶನಗೊಂಡ ಉತ್ತಮ ಮಿಶ್ರ ತಳಿ ಹಸು, ಎಮ್ಮೆ, ಹಾಗೂ ಕರುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link