ಕಾರ್ಯಕರ್ತರ ಸಭೆ

ಬ್ಯಾಡಗಿ:

       ಸುಳ್ಳು ಭರವಸೆಗಳಿಂದ ಈ ದೇಶದ ಮುಗ್ಧ ಜನರನ್ನು ನಂಬಿಸಿ ಮೋಸ ಮಾಡಿದ ಬಿಜೆಪಿ, ಕಾಂಗ್ರೆಸ್ ಮುಕ್ತ ಮಾಡಲು ಹೊರಟು ಈಗ ತಾನೇ ದೇಶದಿಂದ ಮುಕ್ತವಾಗುತ್ತಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

       ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಹಾಗೂ ಶಕ್ತಿ ಕೇಂದ್ರ ಮುಖ್ಯಸ್ಥರ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ದೇಶದ ಜನರ ನಾಡಿಮಿಡಿತವನ್ನು ಅರ್ಥೈಸಿಕೊಂಡಿದ್ದು ಅವರ ಬೇಕು ಬೇಡಗಳಿಗೆ ತಕ್ಕುದಾದ ಕಾರ್ಯಕ್ರಮಗಳನ್ನು ಕಳೆದಾರು ದಶಕಗಳಿಂದ ರೂಪಿಸುತ್ತಾ ಬಂದಿದೆ ಮೋದಿಯವರ ಸುಳ್ಳು ಭಾಷಣದಿಂದ ದೇಶದ ಬಡವರ ಹೊಟ್ಟೆ ತುಂಬಲು ಸಾಧ್ಯವಿಲ್ಲ ಎಂದರು.

       ದೇಶ ಮೊದಲು ಎಂಬ ಹೇಳಿಕೆಗಳನ್ನು ನೀಡುತ್ತಾ ಆಡಳಿತ ನಡೆಸುತ್ತಾ ಬಂದಂತಹ ನರೇಂದ್ರ ಮೋದಿಯವರು, ಜಿಎಸ್‍ಟಿ ತೆರಿಗೆ ಹೇರಿದ್ದಲ್ಲದೇ, ನೋಟು ಅಪನಗದೀಕರಣದಂತಹ ನಿರ್ಧಾರಗಳಿಂದ ದೇಶದ ಸಾಕಷ್ಟು ಜನರನ್ನು ಸಂಕಷ್ಟಕ್ಕೀಡಾಗುವಂತೆ ಮಾಡಿದ್ದನ್ನು ಯಾರೂ ಮರೆತಿಲ್ಲ ಎಂದರು.

        ಬ್ರಿಟೀಷರ ಸಂಕೋಲೆಯಿಂದ ದೇಶವನ್ನು ತಪ್ಪಿಸಿದ ಇತಿಹಾಸ ಹೊಂದಿರುವ ಕಾಂಗ್ರೆಸ್‍ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಇನ್ನಾದರೂ ಜನರು ಬಿಜೆಪಿಯವರ ಸುಳ್ಳು ಭರವಸೆಗಳಿಗೆ ಕಿವಿಗೊಡದೇ ಸುಭದ್ರ ಆಡಳಿತ ನೀಡುವ ಬಡವರ ಪರವಾದ ಯೋಜನೆಗಳನ್ನು ರೂಪಿಸುವಂತಹ ಕಾಂಗ್ರೆಸ್‍ನ್ನು ಬೆಂಬಲಿಸುವಂತೆ ಮನವಿ ಮಾಡಿದರು.

          ಶಕ್ತಿ ಕೇಂದ್ರಗಳು ಸಕ್ರೀಯವಾಗಲಿ: ತಾಲೂಕ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕರಲಿಂಗಣ್ಣನವರ ಮಾತನಾಡಿ, ಬ್ಯಾಡಗಿ ಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಕಾಂಗ್ರೆಸ್ ಮತದಾರರಿದ್ದಾರೆ, ದುರ್ಬಲವಾಗಿರುವ ಶಕ್ತಿ ಕೇಂದ್ರವು ಕೇವಲ ನಾಲ್ಕೂವರೆ ಸಾವಿರದಷ್ಟು ಮಾತ್ರ ಸದಸ್ಯತ್ವ ಪಡೆದಿರುವುದು ಖೇದಕರ ಸಂಗತಿ ಕೂಡಲೇ ಕೇಂದ್ರದ ಸರ್ವ ಸದಸ್ಯರು ಹೆಚ್ಚು ಸದಸ್ಯರ ನೋಂದಣಿಗೆ ಪ್ರಯತ್ನಿಸುವಂತೆ ಮನವಿ ಮಾಡಿದರು.

        ವೇದಿಕೆಯಲ್ಲಿ ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಕೆಪಿಸಿಸಿ ಸದಸ್ಯರಾದ ಬಸವರಾಜ ಸವಣೂರ, ಪೊಲೀಸ್ ಪಾಟೀಲ, ಜಿ.ಪಂ.ಸದಸ್ಯ ಏಕನಾಥ ಭಾನುವಳ್ಳಿ, ಎಪಿಎಂಸಿ ನಿರ್ದೇಶಕರಾದ ಚನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ಮಾಲತೇಶ ಹೊಸಳ್ಳಿ, ಮಾಜಿ ನಿರ್ದೇಶಕರಾದ ಶಂಕರಗೌಡ ಪಾಟೀಲ, ಹನುಮಂತಪ್ಪ ನಾಯ್ಕರ್, ಪುರಸಭೆ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ನಜೀರ ಅಹ್ಮದ ಶೇಖ್, ಮಂಜುನಾಥ ಭೋವಿ, ಮುಖಂಡರಾದ ಮಂಜನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ಶಕ್ತಿ ಕೇಂದ್ರದ ಮುಖ್ಯಸ್ಥ ಜಗದೀಶಗೌಡ ಪಾಟೀಲ, ಆರ್.ಜಿ.ಕಳ್ಯಾಳ, ಭಾಷಾಮುಲ್ಲಾ, ಮಂಜೂರ ಹಕೀಮ್ ಹಾಗೂ ಇನ್ನಿತರರರು ಉಪಸ್ಥಿತರಿದ್ದರು. ಯುವ ಘಟಕದ ಅಧ್ಯಕ್ಷ ದೇವರಾಜ ಬುಡ್ಡನಗೌಡ್ರ ಸ್ವಾಗತಿಸಿದರು. ರಮೇಶ ಸುತ್ತಕೋಟಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link