ಹಾನಗಲ್ಲ :
ಮೆರಾ ಬೂತ ಸಬ್‍ಸೆ ಮಜಬೂತ್ ಕಾರ್ಯಕ್ರಮದಡಿ ಭೂತ ಮಟ್ಟದ ಕಾರ್ಯಕರ್ತರನ್ನು ಉತ್ತೇಜಿಸುವ ವಿಡಿಯೋ ಕಾನಫರೆನ್ಸನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ನೀರಾವರಿ ಪ್ರಗತಿ ಬೇಕಾಗಿದೆ, ಈ ದೇಶದ ಯುವಕರನ್ನು ದೇಶಕ್ಕಾಗಿ ಸಮರ್ಥವಾಗಿ ಬಳಸಿಕೊಳ್ಳುವ ಯೋಜನೆ ಜಾರಿಯಾಗಬೇಕು ಎಂದು ಸಂವಾದಕರು ಸೂಚಿಸಿ ಇದಕ್ಕಾಗಿ ಭಾರತ ಸರಕಾರದ ಪ್ರತಿಕ್ರಿಯೆ ಕೇಳಿದರು.
ಹಾನಗಲ್ಲಿನಲ್ಲಿ ವಿಡಿಯೋ ಕಾನ್ಫರೆನ್ಸ ಮೂಲಕ ನಡೆದ ಸಂವಾದದಲ್ಲಿ ಯುವಕರ ಅಭಿವೃಧ್ದಿ ಕುರಿತು ಪ್ರತಿಕ್ರಿಯಿಸಿದ ಪ್ರಾಧಾನಮಂತ್ರಿ ನರೇಂದ್ರ ಮೋದಿ, ಹಾವೇರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನ ಕೇಳಿದ ಹಾವೇರಿ ಜಿಲ್ಲೆಗೆ ನೀರಾವರಿಗಾಗಿ ಆದ್ಯತೆ ನೀಡುವ ವಿಷಯಕ್ಕೆ ಪ್ರಧಾನಿಗಳು ಯಾವುದೇ ಪ್ರತಿಕ್ರಿಯೇ ನೀಡಲಿಲ್ಲ. ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವರಾಜ ಸಜ್ಜನ ನನಗೆ ಪ್ರಶ್ನೆ ಕೇಳುವ ಸಂದರ್ಭವಿರಲಿಲ್ಲ.
ಜಗನ್ನಾಥ ಬಾಂಡಗೆ ಅವರಿಗೆ ಪ್ರಶ್ನೆ ಕೇಳುವ ಅವಕಾಶವಿತ್ತು. ಅದರೊಂದಿಗೆ ಇದು ನಿಗದಿತ ಸಮಯದ ವಿಡಿಯೋ ಕಾನ್ಫರೆನ್ಸ ಆಗಿದ್ದರಿಂದ ಸಮಯದ ಅಭಾವದಿಂದಾಗಿ ನೀರಾವರಿ ಬಗ್ಗೆ ಪ್ರಧಾನಿಗಳು ಪ್ರತಿಕ್ರಿಯಿಸಲಿಲ್ಲ. ಆದರೆ ಹಾವೇರಿ ಜಿಲ್ಲೆಯ ನೀರಾವರಿಗಾಗಿ ನಮ್ಮ ಸಂಸದರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಅದು ಸಾಕಾರಗೊಳ್ಳುವ ವಿಶ್ವಾಸವಿದೆ ಎಂದರು.
ಹಾವೇರಿ ಜಿಲ್ಲೆ ಕೇಂಧ್ರ ಸರಕಾರದ ಅಡುಗೆ ಅನೀಲದ ಯೋಜನೆಯನ್ನು ಅತೀ ಹೆಚ್ಚಿನ ಪಾಲು ಪ್ರಯೋಜನ ಪಡೆದ ಜಿಲ್ಲೆಯಾಗಿದೆ. ಇದು ನಮ್ಮ ಹೆಮ್ಮೆಯೂ ಹೌದು. ಇದರೊಂದಿಗೆ ಫಸಲ್‍ಭಿಮಾ ಯೋಜನೆಯಲ್ಲಿ ಜಿಲ್ಲೆಯ 4 ಲಕ್ಷಕ್ಕೂ ಅಧಿಕ ರೈತರು 400 ಕೋಟಿ ಹಣ ಪಡೆದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಸಾಕಾರಕ್ಕೆ ಈಗಾಗಲೆ ಕೇಂದ್ರದಿಂದ ನೀರಾವರಿ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಾಗುವುದರಲ್ಲಿದೆ. ಹೀಗಾಗಿ ನಿರಾಸೆಯಾಗುವ ಸಂದರ್ಭವೇ ಇಲ್ಲ ಎಂದರು.
ಪ್ರಧಾನಮಂತ್ರಿಗಳಿಗೆ ಪ್ರಶ್ನೆ ಕೇಳಿದ ಗದಗ ಜಿಲ್ಲೆಯ ಜಗನ್ನಾಥ ಭಾಂಡಗೆ, ಭಾರತದಲ್ಲಿ ಅತಿಹೆಚ್ಚು ಯುವ ಸಮುದಾಯವಿದ್ದು, ಈ ಯುವ ಸಮುದಾಯವನ್ನು ದೇಶಕ್ಕಾಗಿ ಬಳಸಿಕೊಳ್ಳಲು ಮತ್ತು ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಕರ ಅಭ್ಯದಯಕ್ಕಾಗಿ ಕೇಂದ್ರ ಸರಕಾರ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ.
ಇಡೀ ದೇಶ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಉದ್ಯೋಗ ಸೃಷ್ಟಿಗೆ ದೇಶದ ರಸ್ತೆ, ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಹೆಚ್ಚು ಸಹಕಾರಿಯಾಗಿವೆ. ಶಿಕ್ಷಣಕ್ಕೆ ಆದ್ಯೆತ ನೀಡಿರುವುದರ ಜೊತೆಗೆ ಕೃಷಿ ಸಂಚಯನಿ ಯೋಜನೆಯನ್ನು ಸಫಲಗೊಳಿಸಲಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಹಾರ್ಡ ವರ್ಕನಿಂದ ಮಾತ್ರ ದೇಶ ಸುಭದ್ರಗೊಳ್ಳಬಲ್ಲದು. ಉತ್ತಮ ಸಂಪರ್ಕಹೊಂದಿ ದೇಶವನ್ನು ಉನ್ನತಿಗೆ ತರೋಣ. ಭಾರತೀಯ ಜನತಾ ಪಕ್ಷದ ಭೂತ ಮಟ್ಟದ ಕಾರ್ಯಕರ್ತರಾದಿಯಾಗಿ ಎಲ್ಲರೂ ಒಗ್ಗಟ್ಟಿನಿಂದ ಸೇವೆ ಸಲ್ಲಿಸಿರಿ ಇದುವೇ ನಮ್ಮ ಸಾರ್ಥಕತೆ. ನಮ್ಮ ಸರಕಾರದ ಅಭಿವೃದ್ಧಿಗಳನ್ನು ಮನೆ ಮನೆಗೆ ಪರಿಚಯಿಸುವ ಮೂಲಕ ಮೆರಾ ಬೂತ ಸಬ್‍ಸೆ ಮಜಬೂತ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಅತೃಪ್ತಿ :
ವಿಡಿಯೋ ಕಾನ್ಫರನ್ಸನಲ್ಲಿ ಪಾಲ್ಗೊಂಡ ಪಕ್ಷದ ಕೃಷಿಕರು ಪ್ರಧಾನಿ ಮೋದಿ ಅವರೊಂದಿಗಿನ ಕರ್ನಾಟಕದ ಕಾರ್ಯಕರ್ತರ ಒಟ್ಟು ಐದು ಕೇಂದ್ರಗಳಿಂದ ನಡೆದ ಸಂವಾದದಲ್ಲಿ ಕೃಷಿಕರ ಹಿತಕ್ಕಾಗಿ ಸರಿಯಾದ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರಗಳು ಸಿಗಲೇ ಇಲ್ಲ. ಇದರಿಂದ ಕೃಷಿ ಕ್ಷೇತ್ರದ ಹಾಗೂ ರೈತರ ವಿಷಯಗಳು ಚರ್ಚೆಯಾಗದೇ ಹೋಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ಸಂವಾದ ಮುಗಿದ ಮೇಲೆ ರೈತರು ಇದೇ ವಿಷಯವನ್ನು ಚರ್ಚಿಸುತ್ತ ಮನೆಯತ್ತ ಮುಖ ಮಾಡಿರುವುದು ವಿಶೇಷವಾಗಿ ಕಂಡು ಬಂದಿತು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಜಗನ್ನಾಥ ಭಾಂಡಗೆ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಜಿಲ್ಲಾ ಸಹಕಾರಿ ಯೂನೀಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಬಿ.ಎಸ್.ಅಕ್ಕಿವಳ್ಳಿ, ನಿಂಗಪ್ಪ ಗೊಬ್ಬೇರ, ಶಿವಲಿಂಗಪ್ಪ ತಲ್ಲೂರ, ಬಸಣ್ಣ ಸಂಶಿ, ರಾಜಣ್ಣ ಪಟ್ಟಣದ, ಸಿದ್ಗದಲಿಂಗಪ್ಪ ಶಂಕ್ರಿಕೊಪ್ಪ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ