ದಾವಣಗೆರೆ:
ಗ್ರಾಹಕರಿಗೆ ಹಣ ಹೂಡಿಕೆಯ ಬಗ್ಗೆ ತಿಳುವಳಿಕೆ ನೀಡುವ ಸದುದ್ದೇಶದಿಂದ ಇಂದು (ಮಾ. 15ರಂದು) ಸಂಜೆ 4 ಗಂಟೆಯಿಂದ 7ರ ವರೆಗೆ ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ `ಮ್ಯೂಚುಯಲ್ ಫಂಡ್ಸ್’ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಫ್ರುಡೆನ್ಸ್ ವೆಲ್ತ್ ಮ್ಯಾನೇಜ್‍ಮೆಂಟ್ ಕನ್ಸಲ್ಟಂಟ್ಸ್‍ನ ಪ್ರಸನ್ನ ಯು ತಿಳಿಸಿದರು..
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಉಳಿತಾಯ, ಹೂಡಿಕೆ, ಬಳಕೆ ಕುರಿತು ನುರಿತ ತಜ್ಞರು ಸಾರ್ವಜನಿಕರಿಗೆ ತಾವು, ಹೆಚ್‍ಡಿಎಫ್‍ಸಿ ಮ್ಯೂಚುಯಲ್ ಫಂಡ್‍ನ ಎನ್.ಮೂರ್ತಿ, ಎಸ್‍ಬಿಐ ಮ್ಯೂಚುಯಲ್ ಫಂಡ್‍ನ ಡಿ.ದಾಯನಂದ್, ಯುಟಿಐ ಮ್ಯೂಚುಯಲ್ ಫಂಡ್‍ನ ಪವನ್ ಕುಲಕರ್ಣಿ ಮಾಹಿತಿ ನೀಡಲಿದ್ದೇವೆ. ಅಲ್ಲದೆ, ಗ್ರಾಹಕರಲ್ಲಿ ಮ್ಯೂಚುಯಲ್ ಫಂಡ್‍ನ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂವಾದ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಸುಮಾರು 600-800 ಕೋಟಿ ರು. ಮ್ಯೂಚುಯಲ್ ಫಂಡ್ಸ್ ನಲ್ಲಿ ಹಣವನ್ನು ತೊಡಗಿಸಲಾಗಿದೆ. ಹೆಚ್ಚು ಲಾಭ ಇದರಲ್ಲಿ ಪಡೆಯಬಹುದಾಗಿದೆ. 400-500 ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಉಚಿತ ಪ್ರವೇಶ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್.ಮೂರ್ತಿ, ಮಂಜುನಾಥ, ಪವನ್ ಕುಲಕರ್ಣಿ ಹಾಜರಿದ್ದರು.